/newsfirstlive-kannada/media/media_files/2025/11/08/indians_kidnapped_mali_gunmen-2025-11-08-11-26-54.jpg)
ಪಶ್ಚಿಮ ಆಫ್ರಿಕಾದ ರಾಷ್ಟ್ರ ಮಾಲಿಯ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ 5 ಭಾರತೀಯರನ್ನು ಮುಸುಕು ಧರಿಸಿದ್ದ ಬಂದೂಕುಧಾರಿಗಳು ಕಿಡ್ನಾಪ್ ಮಾಡಿರುವ ಘಟನೆ ಮಾಲಿಯ ಪಶ್ಚಿಮ ಭಾಗದ ಕೊಬ್ರಿ ಎನ್ನುವ ಪ್ರದೇಶದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ.
ಐದು ಭಾರತೀಯ ಉದ್ಯೋಗಿಗಳನ್ನು ಬಂದೂಕುಧಾರಿಗಳು ಅಪಹರಣ ಮಾಡಿರುವ ಬಗ್ಗೆ ಮಾಲಿಯ ರಾಜಧಾನಿ ಬಮಾಕೊದ ಖಾಸಗಿ ಕಂಪನಿ ಅಧಿಕೃತವಾಗಿ ಮಾಹಿತಿ ನೀಡಿದೆ. ಆದರೆ ಯಾವ ಸಂಘಟನೆ ಕಿಡ್ನಾಪ್ ಮಾಡಿದೆ ಎಂದು ಯಾರೂ ಕೂಡ ಹೊಣೆ ಹೊತ್ತುಕೊಂಡಿಲ್ಲ. ಈ ಘಟನೆಯಿಂದ ಮಾಲಿಯಲ್ಲಿ ಭದ್ರತಾ ವ್ಯವಸ್ಥೆ ದಿನದಿಂದ ದಿನಕ್ಕೆ ಇನ್ನಷ್ಟು ಹದಗೆಡುತ್ತಿದೆ ಎನ್ನುವುದು ಗೊತ್ತಾಗುತ್ತದೆ.
ಇದನ್ನೂ ಓದಿ: ಕೇವಲ 2 ದಿನದಲ್ಲಿ 800 ವಿಮಾನಗಳಿಗೆ ಅಡಚಣೆ.. ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲಿ ಏನಾಗಿತ್ತು?
/filters:format(webp)/newsfirstlive-kannada/media/media_files/2025/08/01/job-2025-08-01-23-05-41.jpg)
2020-2021ರಲ್ಲಿ ನಡೆದ ದಂಗೆಗಳಿಂದ ಮಾಲಿಯಲ್ಲಿ ಮಿಲಿಟರಿ ಆಡಳಿತ ನಡೆಸಲಾಗುತ್ತದೆ. ಆದರೆ ಕೆಲವೊಂದು ಪ್ರಚೋದಿತ ಗುಂಪುಗಳಿಂದ ಇಂತಹ ಘಟನೆಗಳು ನಡೆಯುತ್ತಿರುವುದು ಅಲ್ಲಿನ ಭದ್ರತಾ ವ್ಯವಸ್ಥೆಯ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ. ಕಿಡ್ನಾಪ್ ಮಾಡಿದ ತಕ್ಷಣ ಜಾಗೃತಾವಾದ ಕಂಪನಿಯೂ ರಾಜಧಾನಿ ಬಮಾಕೊದಲ್ಲಿರುವ ಇನ್ನುಳಿದ ಭಾರತೀಯ ಉದ್ಯೋಗಿಗಳು ಸುರಕ್ಷಿತವಾಗಿ ಇರುವಂತೆ ಸೂಚನೆ ನೀಡಿದೆ.
ಮಾಲಿಯಲ್ಲಿ 2012ರಿಂದ ವಿದೇಶಿ ಪ್ರಜೆಗಳನ್ನು ಕಿಡ್ನಾಪ್ ಮಾಡುವುದು ಸಾಮಾನ್ಯವಾಗಿ ಬಿಟ್ಟಿದೆ. ಕಳೆದ ವಾರ ಜೆಎನ್​​ಐಎಂ ಸಂಘಟನೆ, ಬಮಾಕೊದಲ್ಲಿ ಎಮಿರೇಟ್ಸ್​ನ ಇಬ್ಬರು ಪ್ರಜೆಗಳು ಮತ್ತು ಇರಾನ್​ನ ಒಬ್ಬರನ್ನು ಅಪಹರಣ ಮಾಡಿದ್ದರು. ಬಳಿಕ 50 ಮಿಲಿಯನ್ ಡಾಲರ್ ಹಣ ಪಡೆದು ಬಿಡುಗಡೆ ಮಾಡಿದ್ದರು ಎಂದು ಹೇಳಲಾಗುತ್ತಿದೆ. ಸದ್ಯ ಭಾರತೀಯರನ್ನು ಕಿಡ್ನಾಪ್ ಮಾಡಿದವರು ಯಾರು, ಯಾಕೆ ಎಂದು ತಿಳಿದು ಬರಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us