Advertisment

ಕೇವಲ 2 ದಿನದಲ್ಲಿ 800 ವಿಮಾನಗಳಿಗೆ ಅಡಚಣೆ.. ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲಿ ಏನಾಗಿತ್ತು?

ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲಿ ಇದೇ ನವೆಂಬರ್ 6 ರಂದೇ ಐಪಿ ವಲಯದ ಎಎಂಎಸ್​ಎಸ್​ ಸಿಸ್ಟಮ್​ನಲ್ಲಿ​ ಸಮಸ್ಯೆ ಕಂಡು ಬಂದಿತ್ತು. ಈ ಸಂಬಂಧ ಪರಿಶೀಲನಾ ಸಭೆಯಲ್ಲಿ ಆಯೋಜಿಸಲಾಗಿತ್ತು.

author-image
Bhimappa
Delhi_Airport_technical_issue
Advertisment

ನವದೆಹಲಿ: ದೇಶದ ಪ್ರತಿಷ್ಠತಿ ವಿಮಾನ ನಿಲ್ದಾಣ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂಡು ಬಂದಿದ್ದ ತಾಂತ್ರಿಕ ದೋಷವನ್ನು 48 ಗಂಟೆಗಳ ಬಳಿಕ ಸರಿ ಪಡಿಸಲಾಗಿದೆ. ಕಳೆದ ಎರಡು ದಿನಗಳಲ್ಲಿ ಇದರಿಂದ ಒಟ್ಟು 800 ವಿಮಾನಗಳಿಗೆ ಅಡಚಣೆ ಉಂಟಾಗಿತ್ತು ಎಂದು ಹೇಳಲಾಗಿದೆ.

Advertisment

ಅತ್ಯಂತ ಜನನಿಬಿಡ ಏರ್​ಪೋರ್ಟ್​ಗಳಲ್ಲಿ ಒಂದಾಗಿರುವ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವಯಂಚಾಲಿತ ಸಂದೇಶ ಬದಲಾವಣೆ ವ್ಯವಸ್ಥೆ (ಎಎಂಎಸ್​ಎಸ್​) ಘಟಕದಲ್ಲಿ ತಾಂತ್ರಿಕ ದೋಷ ಕಂಡು ಬಂದಿತ್ತು. ಇದರ ಜವಾಬ್ದಾರಿ ವಾಯು ಸಂಚಾರ ನಿಯಂತ್ರಣ (Air Traffic Control technical) ಘಟಕದಲ್ಲಿ ಇರುತ್ತದೆ. ಸದ್ಯ ಈ ಸಮಸ್ಯೆಯನ್ನು ಪರಿಹರಿಸಲಾಗಿದೆ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ತಿಳಿಸಿದೆ.

ಇದನ್ನೂ ಓದಿ:SS ರಾಜಮೌಳಿಯಿಂದ ಸದ್ಯದಲ್ಲೇ ಮತ್ತೊಂದು ಬಿಗ್ ಅಪ್​ಡೇಟ್.. ಪೃಥ್ವಿರಾಜ್ ಪಾತ್ರವೇನು..?

Delhi_Airport_technical_issue_1

ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲಿ ಇದೇ ನವೆಂಬರ್ 6 ರಂದೇ ಐಪಿ ವಲಯದ ಎಎಂಎಸ್​ಎಸ್​ ಸಿಸ್ಟಮ್​ನಲ್ಲಿ​ ಸಮಸ್ಯೆ ಕಂಡು ಬಂದಿತ್ತು. ಈ ಸಂಬಂಧ ಪರಿಶೀಲನಾ ಸಭೆಯಲ್ಲಿ ಆಯೋಜಿಸಲಾಗಿತ್ತು. ಇದರಲ್ಲಿ ಕಾರ್ಯದರ್ಶಿಗಳು, MoCA, ಎಎಐ ಅಧ್ಯಕ್ಷರು, ಎಎನ್​ಎಸ್ ಸದಸ್ಯರು ಸೇರಿ ಇತರೆ ಸದಸ್ಯರು ಭಾಗಿಯಾಗಿದ್ದರು. ಸಭೆಯಲ್ಲಿ ಸಮಸ್ಯೆ ಬಗೆಹರಿಸಲು ಅಗತ್ಯ ನಿರ್ದೇಶನಗಳನ್ನು ನೀಡಲಾಗಿತ್ತು ಎಂದು ಹೇಳಲಾಗಿದೆ. 

Advertisment

ಸಮಸ್ಯೆ ಪರಿಹಾರ ಆಗುವವರೆಗೆ ಹೆಚ್ಚಿನ ಸಿಬ್ಬಂದಿಯನ್ನ ಆಯೋಜನೆ ಮಾಡಿದ್ದರಿಂದ ವಿಮಾನ ಹಾರಾಟದಲ್ಲಿ ಯಾವುದೇ ಸಮಸ್ಯೆ ಬರದಂತೆ ನೋಡಿಕೊಳ್ಳಲಾಗಿದೆ. ಆದರೆ ದೇಶಿಯ ಹಾಗೂ ವಿದೇಶದ ವಿಮಾನಗಳಿಗೆ ಅಡಚಣೆ ಕಂಡು ಬಂದಿತು. ಇನ್ನು ಒಂದು ದಿನಕ್ಕೆ 1500 ವಿಮಾನಗಳು ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಹಾಗೂ ಟೇಕ್ ಆಫ್ ಆಗುತ್ತವೆ ಎನ್ನಲಾಗಿದೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

delhi capitals Delhi CM
Advertisment
Advertisment
Advertisment