ಹೆತ್ತೋಳು ದೂರಾದ್ಲು.. ತಬ್ಬಲಿ ಮರಿಗೆ ಜೀವವಿಲ್ಲದ ಗೊಂಬೆಯೇ ಅಮ್ಮ.. ಕರುಣಾಜನಕ ಕಥೆ ಕೇಳಿ

ಹೆತ್ತೋಳು ದೂರಾದ್ಲು.. ತಾಯಿ ಪ್ರೀತಿ ಕೊನೆಯಾಯ್ತು.. ಮರಿ ಒಬ್ಬಂಟಿ! ಅಮ್ಮನ ಪ್ರೀತಿ ಸಿಕ್ಕಿದ್ದು ಈ ಗೊಂಬೆಯಲ್ಲಿ! ಕರುಳು ಹಿಂಡುವ ದೃಶ್ಯ- ಕರುಣಾಜನಕ ಕೋತಿ ಮರಿ ನೋಡಲು ಜನ ಮುಗಿಬೀಳ್ತಿರುವುದೇಕೆ? ಈ ಕುರಿತ ಸ್ಪೆಷಲ್ ರಿಪೋರ್ಟ್​ ಇಲ್ಲಿದೆ.

author-image
Ganesh Kerekuli
baby monkey (4)
Advertisment
  • ಒಬ್ಬಂಟಿ ಮರಿಗೆ ತಾಯಿ ಪ್ರೀತಿ ಕೊನೆಯಾಯ್ತು ಗೊಂಬೆಯೇ
  • ‘ಕರೆದು ಆಲಂಗಿಸೋರಿಲ್ಲ.. ಹಾಲುಣಿಸೋರಿಲ್ಲ.. ಅನಾಥವಾದೆ’
  • ತಾಯಿ ಪ್ರೀತಿ, ಮಮತೆ, ವಾತ್ಸಲ್ಯ ವಂಚಿತ ಕೋತಿಗೆ ಆಸರೆಯೇನು?

ಮನುಷ್ಯನಲ್ಲಿ ಭಾವನೆಗಳು ಇರೋದ್ರಿಂದಾನೇ ಆತ ಪ್ರಾಣಿಗಳಿಗಿಂತ ಭಿನ್ನ. ನಿಜ. ಆದ್ರೆ ತಾಯಿ ಪ್ರೀತಿ ಅಂತ ಬಂದ್ರೆ, ಅದು ಯಾವುದೇ ಪ್ರಾಣಿ ಆಗ್ಲಿರ್ಲಿ, ಮಕ್ಕಳ ಬಿಟ್ಟು ಬದುಕೋದಿಲ್ಲ. ಆದ್ರೆ, ಇತ್ತೀಚೆಗೆ ಒಂದೆರಡು ದಿನದಿಂದ ಕೋತಿ ಮರಿಯೊಂದರ ವಿಡಿಯೋ ಸಾಕಷ್ಟು ವೈರಲ್‌ ಆಗ್ತಿದೆ. ಅದನ್ನು ನೀವು ನೋಡೇ ಇರ್ತೀರಾ. ಆದ್ರೆ ಅದರ ಹಿಂದಿನ ಕರುಣಾಜನಕ ಕಥೆ ಕೇಳಿದ್ದೀರಾ. 

ಇದೊಂದು ಪ್ರಾಣಿ ಸಂಗ್ರಹಾಲಯ. ಜಪಾನ್‌ನಲ್ಲಿ ಇರೋದು.. ಇಲ್ಲೆಲ್ಲಾ ಪ್ರಾಣಿಗಳು ಅನ್ಯೋನ್ಯವಾಗಿಯೇ ಬದುಕ್ತಿದಾವೆ.. ಅದ್ರಲ್ಲಿ ಈ ಕೋತಿಗಳ ಗುಂಪೂ ಒಂದು. ಈಗ ನಾವು ಹೇಳೋ ಕಥೆ ಕೂಡಾ ಇದೇ ಗುಂಪಿನದ್ದು.. ಮರಿ ಕೋತಿಯೊಂದಿಗೆ ತಾಯಿ ಕೋತಿಗಳು ಲಾಲನೆ-ಪಾಲನೆಯಲ್ಲಿ ತೊಡಗಿವೆ.. ಅವುಗಳೊಂದಿಗೆ ತುಂಟಾಟವಾಡ್ತಿವೆ.

ಇದನ್ನೂ ಓದಿ: ಭಾಗ-2: ಈ ದೃಶ್ಯದ ಹಿಂದೆ ಸಹಿಸಲಾಗದ ಸಂಕಟ, ತೀರಲಾರದ ನೋವು.. ಅಮ್ಮ ಎಲ್ಲಿಗೆ ಹೋದ್ಲು..?

baby monkey (2)

ಆದ್ರೆ ಇದೇ ಕೋತಿಗಳ ಗುಂಪಲ್ಲಿರೋ ಅದೊಂದು ಮರಿ ಮಾತ್ರ ತುಂಬಾ ವಿಭಿನ್ನವಾಗಿದೆ. ಆ ಕೋತಿ ಮರಿ ಎಲ್ಲಾ ಪ್ರಾಣಿಗಳಂತೆ ವರ್ತಿಸ್ತಿಲ್ಲ. ಅದೇ ಮರಿ ಈಗ ಸಾಕಷ್ಟು ಸದ್ದು ಮಾಡ್ತಿದೆ. ಆ ಮರಿ ಇಲ್ಲಿದೆ ನೋಡಿ. ಇಡೀ ಕೋತಿಗಳ ಗುಂಪೇ ಒಂದು ಕಡೆಯಾದ್ರೆ. ಇಲ್ಲಿ ಈ ಮರಿ ಕೋತಿ ಮರಿಯ ವರ್ತನೆಯೇ ಬೇರೆ ತರ ಇದೆ.

ಇಲ್ಲಿ ವಿಶೇಷತೆ ಏನಿದೆ? ಸಹಜವಾಗಿಯೇ ಇದ್ಯಲ್ಲಾ ಅಂತಾ ಅನ್ಸುತ್ತಾ? ಆದ್ರೆ ವಿಷಯ ಇಲ್ಲೇ ಇರೋದು ನೋಡಿ.. ಅದುವೇ ಈ ಗೊಂಬೆ. ಅರೆ... ಚಿಕ್ಕಮಕ್ಕಳು ಗೊಂಬೆ ಹಿಡಿದು ಆಟ ಆಡೋದನ್ನ ನೋಡಿರ್ತೀರಾ. ಇಲ್ಲಿ ಮರಿ ಕೋತಿ, ಈ ಗೊಂಬೆ ಹಿಡಿದು ಆಟವಾಡೋದನ್ನ ನೋಡಿ ವಿಚಿತ್ರ ಅನ್ನಿಸುತ್ತೆ ಅಲ್ವಾ? ಎಂಥಾ ತಮಾಷೆ ಇದು ಅಂತಾ ಭಾಸವಾಗ್ತಿದೆಯಲ್ಲಾ... ಆದ್ರೆ, ವಿಷಯ ಏನ್‌ ಗೊತ್ತಾ? ಇದೇ ಮರಿಕೋತಿಯ ಹಿಂದೆ ಒಂದು ಅರಗಿಸಿಕೊಳ್ಳಲಾಗದ ನೋವಿದೆ.. ತೀರಲಾರದ ಸಂಕಟವಿದೆ.. ಕರುಳು ಹಿಂಡುವ ಕರುಣಾಜನಕ ಕಥೆಯಿದೆ..

ಇದನ್ನೂ ಓದಿ: ಭಾಗ-2: ಈ ದೃಶ್ಯದ ಹಿಂದೆ ಸಹಿಸಲಾಗದ ಸಂಕಟ, ತೀರಲಾರದ ನೋವು.. ಅಮ್ಮ ಎಲ್ಲಿಗೆ ಹೋದ್ಲು..?

baby monkey (1)

ಅಲ್ಲಿರೋ ತಾಯಿ ಕೋತಿಗಳು ತಮ್ಮ ತಮ್ಮ ಮರಿಕೋತಿಗಳ ಜೊತೆ ಆಟವಾಡ್ತಾ, ಕುಚೇಷ್ಟೆ ಮಾಡ್ತಾ ಜೂ ನಲ್ಲಿ ಕಾಲ ಕಳೀತಿವೆ. ತಾಯಿ-ಮಕ್ಕಳ ಬಾಂಧವ್ಯ ಅಂದ್ರೇನೇ ಹಾಗೇ ಅಲ್ವಾ? ಅದು ಮನುಷ್ಯರೇ ಆಗಿರಬಹುದು.. ಪ್ರಾಣಿಗಳೇ ಆಗಿರಬಹುದು. ಕರುಳ ಬಳ್ಳಿಯ ಬಂಧ ಎಲ್ಲರನ್ನೂ ಒಂದೇ ತರ. ಆದ್ರೆ ಈ ಕೋತಿ ಮಾತ್ರ ತನ್ನ ತಾಯಿ ಬಳಿ ಹೋಗದೆ, ಈ ಗೊಂಬೆ ಜೊತೆ ಇರ್ತೀದೆಯಲ್ಲಾ ಯಾಕೆ ಅನ್ನೋದು ನಿಮಗೆ ಅನ್ನಿಸಬಹುದು.. ಅದಕ್ಕೆ ಉತ್ತರ ಈ ಮರಿ ಕೋತಿಗೆ ತಾಯಿ ಪ್ರೀತಿ ಸಿಕ್ಕಿಲ್ಲ.

ಗೊಂಬೆಯನ್ನೇ ತಬ್ಬಿಕೊಂಡು ಬದುಕ್ತಿರೋ ಯಾಕೆ ಈ ಕಪಿ?

ಆದ್ರೆ ಇಲ್ಲಿ ಒಂದು ಭಾವನಾತ್ಮಕ ಕಥೆ ಅಡಗಿದೆ. ಅದುವೇ ಈ ಮರಿ ಕೋತಿಗೆ ತಾಯಿ ಪ್ರೀತಿ ಸಿಕ್ಕಿಲ್ಲ ಅನ್ನೋದು. ಈ ಮರಿ ಕೋತಿ ಹೆಸರು ಪಂಚ್‌ಕುನ್‌ ಬೇಬಿ ಅಂತಾ. ಜಪಾನ್‌ನಲ್ಲಿರೋ ಇಚಿಕಾವಾ ಸಿಟಿಯ ಪ್ರಾಣಿ ಸಂಗ್ರಹಾಲಯದಲ್ಲಿ ವಾಸ ಮಾಡ್ತಿದೆ. ಹೀಗೆ ತಾಯಿ ಪ್ರೀತಿ ಸಿಗದ ಈ ಪಂಚ್‌ಗೆ ಅಲ್ಲಿರೋ ಇತರೆ ಕೋತಿಗಳು ಅಮ್ಮನ ಪ್ರೀತಿ ಕೊಡಬೇಕಾಗಿತ್ತು. ಕಂದಾ ಬಾ ಇಲ್ಲಿ ಅಂತಾ ಮುದ್ದಿಸಬೇಕಾಗಿತ್ತು. ಆದ್ರೆ, ಇಲ್ಲಿ ಆಗಿದ್ದೇ ಬೇರೆ..

ತಬ್ಬಿಲಿಯಾದ ಮರಿ ಕೋತಿಗೆ ಕಾಡಿದೆ ಒಂಟಿತನ!

ಜಪಾನ್‌ನಲ್ಲಿನ ಜೂ ನಲ್ಲಿ ಇರೋ ಈ ಕೋತಿಗೆ ಈಗ ಒಂಟಿತನ ಕಾಡ್ತಿದೆ. ಯಾಕಂದ್ರೆ ಇಲ್ಲಿ ಈ ಕೋತಿ ಅನಾಥವಾಗಿದೆ. ಅಮ್ಮಾ ಅಮ್ಮಾ ಅಂತಾ ಹಂಬಲಿಸ್ತಿದೆ. ಯಾವಾಗ ಅಮ್ಮ ದೂರವಾದ್ಲೋ, ಆಗ ಇದಕ್ಕೆ ತಾಯಿ ಪ್ರೀತಿಯೂ ಸತ್ತು ಹೋದಂತಾಗಿದೆ. ಜಸ್ಟ್‌ 7 ತಿಂಗಳ ಈ ಮರಿ ಕೂತಿಯನ್ನ ಬಾಚಿ ತಬ್ಬಬೇಕಾದ ಇತರೆ ಕೋತಿಗಳು ಹೊಡೆಯುತ್ತಿವೆ. ಬೇರೆ ಕೋತಿಗಳ ಹತ್ತಿರ ಬೆರೆಯೋದಕ್ಕೆ ಹೋದ್ರೆ ಅವು ದೂರ ತಳ್ಳುತ್ತಿವೆ. ಹೀಗಾಗಿ ಪಂಚ್‌ ಕೋತಿಗೆ ಒಂಟಿತನ ಕಾಡಿದೆ. ಬೇರೆ ಕೋತಿಗಳು ಹೀಗೆ ವರ್ತಿಸಿದಾಗ ಕರೆದು, ತಲೆ ಸವೆರಿ, ಹಾಲುಣಿಸಬೇಕಾದ ತಾಯಿ ಇಲ್ಲಿ ಮರೆಯಾಗಿದ್ದಾಳೆ. ಯಾರ ಬಳಿ ಸೇರಲಮ್ಮ? ಯಾರ ಎದೆಹಾಲು ಕುಡಿಯಲಮ್ಮ.. ಇಲ್ಲಿ ನನಗೆ ಯಾರು ಹಿತವರು ಅಂತಾ ಅಳುತ್ತಾ, ಮಾನಸಿಕವಾಗಿ ಕುಗ್ಗಿ ಹೋಗಿದ್ದ ಈ ಕೋತಿಗೆ ಆಸರೆಯಾಗಿ ಬಂದಿದ್ದೇ ಈ ಗೊಂಬೆ. 

ಇದನ್ನೂ ಓದಿ: ಭಾಗ-2: ಈ ದೃಶ್ಯದ ಹಿಂದೆ ಸಹಿಸಲಾಗದ ಸಂಕಟ, ತೀರಲಾರದ ನೋವು.. ಅಮ್ಮ ಎಲ್ಲಿಗೆ ಹೋದ್ಲು..?

baby monkey

ಒಂಟಿಯಾಗಿದ್ದ ಈ ಮರಿ ಕೋತಿ ಪಂಚ್‌ಗೆ ಉಸಿರಾಗಿದ್ದೇ ಈ ನಿರ್ಜೀವ ಗೊಂಬೆ. ಈ ಗೊಂಬೆಯೇ ಈಗ ಈ ಪಂಚ್‌ಗೆ ತಾಯಿ, ತಂದೆ, ಅಣ್ಣ, ತಮ್ಮ, ಬಂಧು-ಬಳಗ ಎಲ್ಲವೂ... ಎಲ್ಲವೂ ಇದೇ ಗೊಂಬೆಯೇ. ಈ ನಿರ್ಜೀವ ಗೊಂಬೆಯೇ ಈ ಕೋತಿಗೆ ಜೀವ ಕೊಟ್ಟಿದೆ.
ಎಂಥಾ ಮನಕಲಕೋ ದೃಶ್ಯ ಅಲ್ವಾ ಇದು.. ಎಂಥಾ ಕಲ್ಲು ಹೃದಯದವರಿಗೂ ಕಣ್ಣಂಚಲ್ಲಿ ನೀರು ತರಿಸೋ ಬಂಧವಿದು.. ಅಮ್ಮಾ.. ಅಮ್ಮಾ ಅಂತಾ ತಾಯಿಯ ಪ್ರೀತಿಗೆ ಬಿಕ್ಕಳಿಸುತ್ತಿದ್ದ ಈ ಪಂಚ್‌ ಅನ್ನೋ ಕೋತಿಗೆ ಜೀವ ಕೊಟ್ಟಿದ್ದು ಇದೇ ಗೊಂಬೆ. ಇಚಿಕಾವಾ ಸಿಟಿಯ ಪ್ರಾಣಿ ಸಂಗ್ರಹಾಲಯದಲ್ಲಿ ಪಂಚ್‌ ಅನ್ನೋ ಮರಿ ಕೋತಿಯ ಇದೇ ದೃಶ್ಯ ಈಗ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ವೈರಲ್‌ ಆಗ್ತಿದೆ. ತಾಯಿಯಿಂದ ದೂರವಾಗಿರೋ ಈ ಪಂಚ್‌ ಬೇರೆ ಕೋತಿಗಳು ಕರೆದು ಆಲಂಗಿಸಬೇಕಿತ್ತು.. ಇದರ ಜೊತೆ ಸೇರಿ ಆಟವಾಡಬೇಕಿತ್ತು. ಪಂಚ್‌ ವಿಷಯದಲ್ಲಿ ಹಾಗಾಗಿಲ್ಲ. ಇದೇ ಕಾರಣಕ್ಕೆ ಪಂಚ್‌, ಈಗ ಗೊಂಬೆಯನ್ನೇ ತನ್ನ ತಾಯಿ ಅಂತಾ ತಿಳಿದುಕೊಂಡುಬಿಟ್ಟಿದೆ.

ಬೇರೆ ಕೋತಿಗಳು ದೂಡಿದಾಗ ಗೊಂಬೆಯೇ ಆಸರೆ!

ಜಸ್ಟ್‌ 7 ತಿಂಗಳ ಮರಿ ಈ ಪಂಚ್‌. ಮಕ್ಕಳು ಅಂದ್ಮೆೇಲೆ ಅವರಿಗೆ ತಾಯಿ ಪ್ರೀತಿ ಸಿಗಬೇಕು. ಈ ಬಂಧ ಪ್ರಾಣಿಗಳಲ್ಲೂ ಇದೆ. ಮರಿಗಳನ್ನು ತಾಯಿ ಅಪ್ಪಿಕೊಳ್ಳುತ್ತವೆ. ಮರಿಗಳನ್ನ ಬಿಟ್ಟು ತಾಯಿ ಬದುಕೋದಿಲ್ಲ. ಆದ್ರೆ, ಇಲ್ಲಿ ಪಂಚ್‌ಗೆ ತಾಯಿ ಇಲ್ಲ ಅಂದಾಗ ಅಲ್ಲಿನ ಸಿಬ್ಬಂದಿ ಪಂಚ್‌ನನ್ನು ಬೇರೆ ಕೋತಿಗಳ ಜೊತೆಗೆ ಬೆರೆಯೋದಕ್ಕೆ ಬಿಟ್ಟಿದ್ದಾರೆ. ಆದ್ರೆ, ಇಲ್ಲಿ ಮಾತ್ರ ಬೇರೆ ಕೋತಿಗಳು ಪಂಚ್‌ನನ್ನು ಹತ್ತಿರಕ್ಕೆ ಸೇರಿಸ್ತಿಲ್ಲ. ಒಂದ್ಕಡೆ ತಾಯಿ ಪ್ರೀತಿ ಇಲ್ಲ.. ಮತ್ತೊಂದು ಕಡೆ ಬೇರೆ ಕೋತಿಗಳ ನಿರ್ಲಕ್ಷ್ಯ. ಇಲ್ಲಿ ಪಂಚ್‌ ನಿಜವಾಗಿಯೋ ಹೆದರಿ ಹೋಗಿದೆ. ಆಗ ಸಿಕ್ಕಿರೋ ಈ ಗೊಂಬೆಯನ್ನೇ ಪಂಚ್ ಅತೀವವಾಗಿ ಹಚ್ಚಿಕೊಂಡಿದೆ. ನೋಡಿ ನೋಡಿ... ಹೇಗೆ ಈ ಕೋತಿ ಗೊಂಬೆಯನ್ನೇ ತಬ್ಬಿ ಕೂತಿದೆ ಅಂತಾ. ಎಲ್ಲಾ ಕೋತಿಗಳು ನಿರ್ಲಕ್ಷಿಸಿದಾಗ ಪಂಚ್‌ ಹೇಗೆ ಭಾವುಕವಾಗಿದೆ ಅಂತಾ.

ಇದನ್ನೂ ಓದಿ:ಭಾಗ-2: ಈ ದೃಶ್ಯದ ಹಿಂದೆ ಸಹಿಸಲಾಗದ ಸಂಕಟ, ತೀರಲಾರದ ನೋವು.. ಅಮ್ಮ ಎಲ್ಲಿಗೆ ಹೋದ್ಲು..?

ಹೆತ್ತವಳು ಯಾರೋ.. ಇಲ್ಲಿ ಈ ಪಂಚ್‌ಗೆ ಜೀವ ಕೊಟ್ಟು, ಅದಕ್ಕೆ ಭಾವನಾತ್ಮಕವಾಗಿ ಆಸರೆಯಾಗಿದ್ದು ಮಾತ್ರ ಇಲ್ಲಿ ಈ ನಿರ್ಜೀವ ಗೊಂಬೆ. ಪ್ರಾಣಿಗಳಲ್ಲಿ ಹೀಗೆಲ್ಲಾ ಆಗೋಕೆ ಸಾಧ್ಯಾನಾ ಅಂತಾ ನಿಂಗೆ ಅನ್ನಿಸಬಹುದು ಅಲ್ವಾ? ಆದ್ರೆ ಇಲ್ಲಿ ಜಪಾನ್‌ನಲ್ಲಿರೋ ಪಂಚ್‌ ಕೋತಿ ವಿಷಯದಲ್ಲಿ ಹೀಗಾಗಿಬಿಟ್ಟಿದೆ. ಮನುಷ್ಯನ ಹಾಗೇ ಪ್ರಾಣಿಗಳು ಕೂಡಾ ಸಂಘಜೀವಿಗಳೇ. ಆದ್ರೆ, ಇಲ್ಲಿ ಪಂಚ್‌ಗೆ ಸುತ್ತಮುತ್ತಾ ಪ್ರಾಣಿಗಳೇ ಇದ್ರೂ, ಸಾಂಗತ್ಯದ ಸುಖ ಕಂಡಿದ್ದು ಮಾತ್ರ ಈ ಗೊಂಬೆಯಲ್ಲಿ. ಇದೇ ದೃಶ್ಯ ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಕೋತಿಯ ಈ ವರ್ತನೆ ಕಂಡು ಅಲ್ಲಿರೋ ಪ್ರವಾಸಿಗರ ಹೃದಯೂ ಭಾರವಾಗಿದೆ. ಪಂಚ್‌ ಅನ್ನೋ ಕೋತಿ ಮರಿಯ ಕಥೆಗೆ ಇಡೀ ಜಗತ್ತೇ ಕಣ್ಣೀರಾಗಿದೆ. 

ವರದಿ: ರೋಹಿಣಿ ಆವಟಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

baby monkey
Advertisment