/newsfirstlive-kannada/media/media_files/2026/02/22/baby-monkey-1-2026-02-22-13-48-48.jpg)
ಗೊಂಬೆಯನ್ನೇ ತನ್ನ ತಾಯಿ ಅಂತಾ ತಿಳಿದಿದೆ ಈ ಪಂಚ್ ಅನ್ನೋ ಮರಿ ಕೋತಿ. ಯಾವಾಗ ಇದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಯ್ತೋ.. ಜನರ ದಂಡೇ ಆ ಪ್ರಾಣಿ ಸಂಗ್ರಹಾಲಯಕ್ಕೆ ಹರಿದು ಬರ್ತಿದೆ. ಪಾಪ ಅನ್ಸುತ್ತಲ್ವಾ ಪಂಚ್‌ನ ಸ್ಥಿತಿ ನೋಡಿದ್ರೆ.. ಮಂಗನಿಂದ ಮಾನವ ಅಂತಾರಲ್ಲ. ಮನುಷ್ಯರಿಗೆ ಬೇಕಾದ ತಾಯಿ ಮಮತೆ.. ಪ್ರೀತಿ. ವಾತ್ಸಲ್ಯ ಮರಿ ಪ್ರಾಣಿಗಳಿಗೂ ಬೇಕಲ್ವಾ? ಅಂದ್ಹಾಗೆ ಈ ಪಂಚ್‌ನ ಈ ರೀತಿ ವರ್ತನೆಗೆ ಕಾರಣ ಏನು? ಗೊಂಬೆ ಹೇಗೆ ಈ ಕೋತಿಯ ಜೀವ ಉಳಿಸಿದೆ? ಅಷ್ಟಕ್ಕೂ ತಾಯಿ ಕೋತಿ ಎಲ್ಲಿ ಹೋಯ್ತು?
ಇದನ್ನೂ ಓದಿ: ಭಾಗ-1: ಹೆತ್ತೋಳು ದೂರಾದ್ಲು.. ತಬ್ಬಲಿ ಮರಿಗೆ ಜೀವವಿಲ್ಲದ ಗೊಂಬೆಯೇ ಅಮ್ಮ.. ಕರುಣಾಜನಕ ಕಥೆ ಕೇಳಿ
/filters:format(webp)/newsfirstlive-kannada/media/media_files/2026/02/22/baby-monkey-4-2026-02-22-13-50-56.jpg)
ತಾಯಿ ಪ್ರೀತಿ ಇಲ್ಲ.. ಕಂದಾ ಕರೆಯೋರಿಲ್ಲ... ಸಹ ಪ್ರಾಣಿಗಳ ಜೊತೆ ಬೆರೆಯೋದಕ್ಕೆ ಹೋದ್ರೆ ಅಲ್ಲೂ ನಿರ್ಲಕ್ಷ್ಯ... ಜಪಾನ್‌ನ ಜೂ ನಲ್ಲಿ ಬದುಕ್ತಿರೋ ಈ ಪಂಚ್‌ಗೆ ಈಗ ಗೊಂಬೆನೇ ಎಲ್ಲಾ.. ಗೊಂಬೆ ಇಲ್ಲದಿದ್ರೆ ಈ ಪಂಚ್‌ಗೆ ಜೀವವೇ ಇರೋದಿಲ್ಲ. ಸತ್ತು ಹೋಗುತ್ತೆ. ಅಷ್ಟರಮಟ್ಟಿಗೆ ಇದು ಗೊಂಬೆಯನ್ನೇ ಹಚ್ಚಿಕೊಂಡುಬಿಟ್ಟಿದೆ.
ಗೊಂಬೆಯನ್ನೇ ಹಿಡಿದು ಓಡಾಡುತ್ತೆ. ಎಲ್ಲೇ ಹೋದ್ರೂ ಪಂಚ್ ಈ ಗೊಂಬೆಯನ್ನ ಬಿಟ್ಟು ಇರೋದೇ ಇಲ್ಲ.. ತನ್ನ ಜೊತೆನೇ ಎಳಕೊಂಡು ಹೋಗುತ್ತೆ.. ಅದರ ಜೊತೆನೇ ನಿದ್ದೆ.. ಅದರ ಜೊತೆನೇ ಆಟ.. ಅದ್ರ ಜೊತೆನೇ ಇಡೀ ಬದುಕು ಅನ್ನೋ ತರ ಆಗ್ಬಿಟ್ಟಿದೆ. ಯಾಕಂದ್ರೆ ಅದು ನಿಮಗೆ ನಿಮಗೆ ಮಾತ್ರ ಗೊಂಬೆ. ಆದ್ರೆ ಈ ಮರಿ ಕೋತಿಗೆ ಇದೇ ಅದರ ತಾಯಿ..
ಇದನ್ನೂ ಓದಿ: ಭಾಗ-1: ಹೆತ್ತೋಳು ದೂರಾದ್ಲು.. ತಬ್ಬಲಿ ಮರಿಗೆ ಜೀವವಿಲ್ಲದ ಗೊಂಬೆಯೇ ಅಮ್ಮ.. ಕರುಣಾಜನಕ ಕಥೆ ಕೇಳಿ
/filters:format(webp)/newsfirstlive-kannada/media/media_files/2026/02/22/baby-monkey-2-2026-02-22-13-48-33.jpg)
ಈ ಗೊಂಬೆಯನ್ನ ತನ್ನ ತಾಯಿ ಅಂತಾ ತಿಳಿದ ಈ ಪಂಚ್‌ಗೆ ಬೇಸರವಾದ್ರೆ ಆ ಗೊಂಬೆ ಮಡಿಲೇ ಸಾಂತ್ವನ ಹೇಳುತ್ತೆ.. ಪ್ರೀತಿ ಬಂದಾಗ ಗೊಂಬೆಗೇ ಮುತ್ತಿಡುತ್ತೆ.. ಸಹಪ್ರಾಣಿಗಳು ಪಂಚ್‌ನನ್ನು ದೂರ ತಳ್ಳಿದಾಗ ವಾಸಪ್ ಗೊಂಬೆ ಬಳಿಯೇ ಬಂದು ಮಲಗಿ ಕಣ್ಣೀರು ಹಾಕುತ್ತೆ. ಪಂಚ್‌ಗೆ ಪಂಚಪ್ರಾಣವೇ ಆಗಿ ಹೋಗಿದೆ ಈ ಗೊಂಬೆ. ನಾವ್ ಹೇಳ್ತಿರೋದು ಯಾವುದು ಅತಿಶಯೋಕ್ತಿ ಅಲ್ಲ.. ಈ ಪಂಚ್, ಆ ಗೊಂಬೆಯಲ್ಲಿ ಕಂಡ ಅದ್ಭುತ ಭಾವ ಅದು.
ಪಂಚ್‌ನ ತಾಯಿ ಎಲ್ಲಿ ಹೋದ್ಲು? ಯಾಕೆ ದೂರ ತಳ್ಳಿದ್ಲು?
ಈ ಪಂಚ್‌ಗೆ ಜಸ್ಟ್ 7 ತಿಂಗಳು. 2025 ಜೂನ್‌ನಲ್ಲಿ ಪ್ರಾಣಿ ಸಂಗ್ರಹಾಲಯದಲ್ಲಿ ಈ ಮರಿ ಜನ್ಮ ಪಡೆದಿದೆ. ಜನ್ಮ ಪಡೆತಿದ್ದ ಹಾಗೇ ಈ ಪಂಚ್‌ನನ್ನು ತಾಯಿ ಕೋತಿ ಬಿಟ್ಟು ಬಿಟ್ಟಿದೆ. ಸಾಮಾನ್ಯವಾಗಿ ಕೋತಿಗಳು ತಮ್ಮ ಮರಿಗಳನ್ನು ಹೊಟ್ಟೆಗೆ ಅವಚಿಕೊಂಡು ಓಡಾಡ್ತವೆ. ಮರಿ ಜನ್ಮ ಕೊಟ್ಟ ತಕ್ಷಣ ತಾಯಿ ಪ್ರಾಣಿ ಅಂತಾ ಬಿರುದು ಪಡೆದ ಯಾವುದೇ ಪ್ರಾಣಿಗಳಿಗಾಗ್ಲಿ ಅವು ಮರಿಗಳ ಜೊತೆ ಭಾವನಾತ್ಮಕವಾಗಿ ಬೆರೆತು ಬಿಡ್ತವೆ. ಆದ್ರೆ, ಇಲ್ಲಿ ಪಂಚ್‌ಗೆ ಜನ್ಮವಿಟ್ಟ ತಕ್ಷಣ ಆ ತಾಯಿ ಕೋತಿ ಬಿಟ್ಟು ಹೋಗಿದೆ. ಸಾಮಾನ್ಯವಾಗಿ ಪ್ರಾಣಿಗಳಲ್ಲಿ ಇದು ಕಂಡು ಬರೋದು ವಿರಳ ಅಂತೆ. ಈ ಬಗ್ಗೆ ಅಲ್ಲಿನ ಪ್ರಾಣಿ ಸಂಗ್ರಹಾಲಯದ ಸಿಬ್ಬಂದಿ ಮಾಹಿತಿ ಕೊಟ್ಟಿದ್ದಾರೆ. ಅವ್ರ ಪ್ರಕಾರ ಈ ಪಂಚ್‌ಗೆ ಹುಟ್ಟಿದಾಗ ಕೇವಲ 500 ಗ್ರಾಮ್ ತೂಕವಿತ್ತಂತೆ. ಹೀಗಾಗಿ ಅದರ ಆರೈಕೆಗಾಗಿ ಪ್ರಾಣಿ ಸಂಗ್ರಹಾಲಯದ ಸಿಬ್ಬಂದಿ ಆರೈಕೆ ಮಾಡಿದ್ದಾರೆ.
ತಾಯಿ ಪ್ರೀತಿಗೆ ಹಂಬಲಿಸಿದ ಪಂಚ್‌ಗೆ ಗೊಂಬೆ ಕೊಟ್ರು!
ಮರಿ ಕೋತಿಯನ್ನು ತಾಯಿ ತೊರೆದು ಹೋಗಿದೆ. ಅದು ಈಗ ಪಂಚ್‌ನನ್ನು ಹತ್ತಿರಕ್ಕೂ ಸೇರಿಸ್ತಿಲ್ಲ. ಕೆಲವು ಪ್ರಾಣಿಗಳ ಮೊದಲ ಹೆರಿಗೆಯಲ್ಲಿ ಈ ರೀತಿ ಆಗೋದು ಸಹಜ ಅನ್ನೋದು ಅಲ್ಲಿನ ಸಿಬ್ಬಂದಿ ಕೊಟ್ಟ ಮಾಹಿತಿ. ಪಂಚ್‌ನ ತಾಯಿಗೆ ಇದು ಮೊದಲ ಹೆರಿಗೆ. ಮಕ್ಕಳಿಗೆ ಮಾತ್ರ ತಾಯಿ ಎಷ್ಟೇ ದೂರ ತಳ್ಳಿದ್ರೂ, ಮಕ್ಕಳು ಬಯಸೋದು ತಾಯಿಯನ್ನೇ. ಭೂಮಿಗೆ ಬಂದ ಬಳಿಕ ಯಾರ ಮೊದಲು ಯಾರ ಮಡಿಲು ಸೇರುತ್ತೋ ಅದನ್ನೇ ತಾಯಿ ಅಂತಾ ಬಂಧ ಬೆಸೆದುಕೊಂಡು ಬಿಡ್ತವೆ. ಹೀಗೆ ಪಂಚ್ ಇಲ್ಲಿ ಹೆರಿಗೆ ಬಳಿಕ 500 ಗ್ರಾಮ್ ತೂಕವಿದ್ದಿದ್ದಕ್ಕೆ, ತುಂಬಾ ಕೇರ್ ಮಾಡಿದ್ದಾರೆ. ಆಗ, ಪಂಚ್‌ಗೆ ತಾಯಿ ಆಸರೆ ಬೇಕು ಅಂತಾ ಅನ್ನಿಸಿದ್ದಕ್ಕೆ ಚಿಕ್ಕ ಮಕ್ಕಳ ಕೈಗೆ ಗೊಂಬೆ ಕೊಡೋ ತರ ಈ ಮರಿ ಕೋತಿಗೆ ಗೊಂಬೆ ಕೊಟ್ಟಿದ್ದಾರೆ. ಆಗ್ಲೇ ನೋಡಿ ಈ ಪಂಚ್ ಗೊಂಬೆಯನ್ನೇ ತನ್ನ ತಾಯಿ ಅಂತಾ ತಿಳಿದುಬಿಟ್ಟಿದೆ.
ಇದನ್ನೂ ಓದಿ: ಭಾಗ-1: ಹೆತ್ತೋಳು ದೂರಾದ್ಲು.. ತಬ್ಬಲಿ ಮರಿಗೆ ಜೀವವಿಲ್ಲದ ಗೊಂಬೆಯೇ ಅಮ್ಮ.. ಕರುಣಾಜನಕ ಕಥೆ ಕೇಳಿ
/filters:format(webp)/newsfirstlive-kannada/media/media_files/2026/02/22/baby-monkey-2026-02-22-13-49-00.jpg)
ಹೌದು.. 7 ತಿಂಗಳ ಈ ಮರಿ ಕೋತಿಗೆ ತಾಯಿ ಪ್ರೀತಿ ಸಿಗಬೇಕಿತ್ತು. ಆದ್ರೆ ವಿಧಿ ಆ ಪ್ರೀತಿ ಕಿತ್ತುಕೊಳ್ತು. ಸಹಗಾರರಾಗಿ ಇರಬೇಕಾಗಿದ್ದ ಬೇರೆ ಪ್ರಾಣಿಗಳು ಇದನ್ನು ತಿರಸ್ಕರಿಸಿದವು. ಹೀಗೆ ದಿನಕಳೆದಂತಾ ಪಂಚ್ ಒಂಟಿಯಾಗಿದೆ.. ಬೇರೆ ಕೋತಿಗಳ ಜೊತೆ ಬೆರೆಯೋದಕ್ಕೆ ಹೋದ್ರೆ, ಅವು ಇದನ್ನು ತಮ್ಮ ಗುಂಪಿಗೆ ಸೇರಿಸದೇ ಸಿಕ್ಕ ಸಿಕ್ಕ ಹಾಗೇ ಹೊಡೆಯೋದು, ನೆಲಕ್ಕೆ ಬೀಳಿಸಿ ಗಾಯಮಾಡಿಬಿಟ್ಟಿದೆ. ಕ್ರಮೇಣ ಈ ಪಂಚ್ ಈಗ ಒಂಟಿಯಾಗಿಯೇ ಉಳಿದು ಬಿಟ್ಟಿದೆ. ಒಂದೊಂದೇ ಕೂರೋದು.. ಬಿಟ್ರೆ ಈ ಗೊಂಬೆ ಜೊತೆ ಆಟವಾಡೋದು ಕಾಯಕ ಮಾಡ್ಕೊಂಡಿದೆ.
ಮನುಷ್ಯನನ್ನು ಸೇರಿಸಿದಂತೆ ಎಲ್ಲಾ ಪ್ರಾಣಿಗಳು ಸಂಘಜೀವಿಗಳು. ಎಲ್ಲಾ ಪ್ರಾಣಿಗಳು ಗುಂಪು ಗುಂಪಲ್ಲೇ ಓಡಾಡೋದು. ಆದ್ರೆ ಇಲ್ಲಿ ಪಂಚ್ ಅನ್ನೋ ಮರಿ ಕೋತಿಗೆ ಯಾರ ಸಂಗವೂ ಇಲ್ಲದಾಗಿದೆ. ಮನುಷ್ಯನಿಗೆ ಸಿಟ್ಟು, ಕೋಪ, ಅಳು, ಬೇಸರ ಇದ್ದ ಹಾಗೇ ಪ್ರಾಣಿಗಳಲ್ಲೂ ಇದೆ. ಮಮತೆಯ ವಿಷಯದಲ್ಲಿ ಪ್ರಾಣಿಗಳು ಹೊರತಾಗಿಲ್ಲ. ಮರಿ ಕೋತಿಗೆ ಇಲ್ಲಿ ವಾತ್ಸಲ್ಯದ ಕೊರತೆಯಿದೆ. ಇದೇ ಕಾರಣಕ್ಕೆ ಗೊಂಬೆಯನ್ನೇ ತನ್ನ ತಾಯಿ, ಸಂಗಡಿಗ ಎಲ್ಲವೂ ಅಂದುಕೊಂಡಿದೆ. ಯಾಕಂದ್ರೆ ಈ ಗೊಂಬೆ ಹೊಡೆಯಲ್ಲ.. ಪರಚಲ್ಲ.. ಬೈಯ್ಯಲ್ಲ.. ದೂರವೂ ತಳ್ಳಲ್ಲ.. ನಿರ್ಲಕ್ಷಿಸೋದು ಇಲ್ಲ. ಅಲ್ವಾ?
ವರದಿ: ರೋಹಿಣಿ ಆವಟಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us