/newsfirstlive-kannada/media/media_files/2025/09/04/train_portugal_1-2025-09-04-13-41-31.jpg)
ನಗರದಲ್ಲಿ ಐತಿಹಾಸಿಕವಾದಂತಹ ಫ್ಯೂನಿಕ್ಯುಲರ್ ಎಲಿವಾಡರ್ ಡಾ ಗ್ಲೋರಿಯಾ (ಕೇಬಲ್ ರೈಲ್ವೆ ಸಿಸ್ಟಮ್) ರೈಲು ಹಳಿ ತಪ್ಪಿದ ಪರಿಣಾಮ 15 ಪ್ರಯಾಣಿಕರು ಉಸಿರು ಚೆಲ್ಲಿದ್ದು 18ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯು ಪೋರ್ಚುಗಲ್ನ ಲಿಸ್ಬನ್ ನಗರದ ಪ್ರಾಕಾ ಡಾಸ್ ರೆಸ್ಟೋರ್ಡೋರಸ್ನಲ್ಲಿ ನಡೆದಿದೆ.
ಹೆಚ್ಚು ಜನರು ಸೇರುವ ಪ್ರದೇಶವಾದ ಪ್ರಾಕಾ ಡಾಸ್ ರೆಸ್ಟೋರ್ಡೋರಸ್ನಲ್ಲಿ ಫ್ಯೂನಿಕ್ಯುಲರ್ ಎಲಿವಾಡರ್ ಡಾ ಗ್ಲೋರಿಯಾ ರೈಲು ಹಳಿ ತಪ್ಪಿ ಕಟ್ಟಡಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಜನರು ರೈಲಿನಲ್ಲಿ ಸಿಲುಕೊಂಡು ಜೀವ ಕಳೆದುಕೊಂಡಿದ್ದಾರೆ. ಈ ಘಟನೆಯಲ್ಲಿ 15 ಜನರು ಉಸಿರು ಚೆಲ್ಲಿದ್ದು 18ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಐವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ED ವಿಚಾರಣೆಗೆ ಹಾಜರಾದ ಟೀಮ್ ಇಂಡಿಯಾದ ಮಾಜಿ ಪ್ಲೇಯರ್.. ಕಾರಣ ಏನು?
6 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು ಕೇಬಲ್ ಸಿಸ್ಟಮ್ ಸಂಪರ್ಕವನ್ನು ರೈಲು ಕಳೆದುಕೊಂಡಿದೆ. ಸಂಪರ್ಕ ಇರುವ ವೈರ್ಗಳ ಕಟ್ ಆಗಿವೆ. ಇದರಿಂದ ನಿಯಂತ್ರಣ ಕಳೆದುಕೊಂಡ ರೈಲು ಹಳಿ ತಪ್ಪಿದ್ದು ಬಿಲ್ಡಿಂಗ್ಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಜೀವ ಕಳೆದುಕೊಂಡವರ ಪೈಕಿ ವಿದೇಶಿಯರು ಇದ್ದಾರೆ ಎಂದು ದೃಢಪಡಿಸಲಾಗಿದ್ದು ಅವರ ವಿವರವನ್ನು ಅಲ್ಲಿನ ಅಧಿಕಾರಿಗಳು ಬಹಿರಂಗ ಪಡಿಸಿಲ್ಲ ಎಂದು ಹೇಳಲಾಗಿದೆ.
ಫ್ಯೂನಿಕ್ಯುಲರ್ ಎಲಿವಾಡರ್ ಡಾ ಗ್ಲೋರಿಯಾ ರೈಲು 1885 ರಲ್ಲಿ ಪ್ರಾರಂಭವಾಯಿತು. ಮೊದಲಿನಿಂದ ಇದು ಬೈರೊ ಆಲ್ಟೊದಲ್ಲಿನ ಸಾವೊ ಪೆಡ್ರೊ ಡಿ ಅಲ್ಕಾಂಟಾರಾದೊಂದಿಗೆ ಪ್ರಾಕಾ ಡಾಸ್ ರೆಸ್ಟೊರಾಡೋರ್ಸ್ ಅನ್ನು ಸಂಪರ್ಕ ಮಾಡುತ್ತದೆ. ಹಳೆಯ ಸಂಪ್ರದಾಯ ಕಳೆದುಕೊಳ್ಳಬಾರದು ಎಂದು 1915ರಲ್ಲಿ ಇದನ್ನು ವಿದ್ಯುದ್ದೀಕರಣ ಮಾಡಲಾಯಿತು. ನಗರದ ಅತ್ಯಂತ ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳಲ್ಲಿ ಇದು ಕೂಡ ಒಂದಾಗಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ