/newsfirstlive-kannada/media/media_files/2025/09/04/shikhar_dhawan-2025-09-04-12-43-48.jpg)
ಆನ್​ಲೈನ್​ ಬೆಟ್ಟಿಂಗ್​ ಆ್ಯಪ್ ಜೊತೆ ಸಂಪರ್ಕ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾದ ಮಾಜಿ ಆಟಗಾರ ಶಿಖರ್ ಧವನ್ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ಜಾರಿ ಮಾಡಿತ್ತು. ಈ ಸಂಬಂಧ ಶಿಖರ್ ಧವನ್ ಅವರು ಇಡಿ ವಿಚಾರಣೆಗೆ ಹಾಜರಾಗಿದ್ದರು. ಬೆಟ್ಟಿಂಗ್ ಆ್ಯಪ್ ಅನ್ನು ಪ್ರಚಾರ ಮಾಡಿದ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಶಿಖರ್ ಧವನ್​ಗೆ ತಿಳಿಸಲಾಗಿತ್ತು.
ಗಬ್ಬರ್ ಸಿಂಗ್ ಎಂದೇ ಖ್ಯಾತಿ ಪಡೆದಿರುವ ಶಿಖರ್ ಧವನ್ ಅವರು 1ಎಕ್ಸ್​ ಬೆಟ್​ (1xBet) ಎನ್ನುವ ಆನ್​ಲೈನ್​ ಬೆಟ್ಟಿಂಗ್ ಆ್ಯಪ್​ ಪ್ರಚಾರದಲ್ಲಿ ಭಾಗಿಯಾಗಿದ್ದರು. ಈ ಸಂಬಂಧ ವಿಚಾರಣೆಗೆ ಹಾಜರಾಗಬೇಕು ಎಂದು ಇಡಿ ಸಮನ್ಸ್​ ಜಾರಿ ಮಾಡಿತ್ತು. ವಿಚಾರಣೆಗೆ ಹಾಜರಾಗಿದ್ದ ವೇಳೆ ಅಕ್ರಮ ಹಣ ವರ್ಗಾವಣೆ ಕಾಯ್ದೆ (ಪಿಎಂಎಲ್​ಎ) ಅಡಿ ಶಿಖರ್ ಧವನ್ ನೀಡುವಂತಹ ಹೇಳಿಕೆಗಳನ್ನು ತನಿಖಾ ಅಧಿಕಾರಿಗಳು ರೆಕಾರ್ಡ್ ಮಾಡಿಕೊಂಡಿದ್ದಾರೆ.
ಶಿಖರ್ ಧವನ್ ಅವರ ಅನುಮೋದನೆ ಮೂಲಕ ಅಪ್ಲಿಕೇಶನ್ ಲಿಂಕ್​ ಮಾಡಲಾಗಿದೆ. ಹೀಗಾಗಿ ಇಡಿ ಲಿಂಕ್​ಗಳ ಬಗ್ಗೆ ಮಾಹಿತಿ ಪಡೆದಿರುವ ಸಾಧ್ಯತೆ ಇದೆ. 39 ವರ್ಷದ ಶಿಖರ್ ಧವನ್ ಅವರು ಟೀಮ್ ಇಂಡಿಯಾಕ್ಕೆ ನಿವೃತ್ತಿ ಘೋಷಿಸಿ ವರ್ಷಗಳೇ ಕಳೆಯುತ್ತಿವೆ. ಟೀಮ್ ಇಂಡಿಯಾದಲ್ಲಿ ಓಪನರ್ ಆಗಿ ಬ್ಯಾಟ್ ಬೀಸುತ್ತಿದ್ದ ಶಿಖರ್ ಧವನ್​ ಹಲವಾರು ಪಂದ್ಯಗಳನ್ನು ಗೆಲ್ಲಲು ಕಾರಣರಾಗಿದ್ದರು.
ಅಕ್ರಮ ಆನ್​​ಲೈನ್​ ಬೆಟ್ಟಿಂಗ್ ಆ್ಯಪ್​ಗಳಿಂದ ಸಾಕಷ್ಟು ಹೂಡಿಕೆದಾರರಿಗೆ, ಜನರಿಗೆ ಕೋಟ್ಯಂತರ ರೂಪಾಯಿ ಮೋಸವಾಗಿದೆ. ಅಲ್ಲದೇ ಸರ್ಕಾರಕ್ಕೆ ಪಾವತಿ ಮಾಡಬೇಕಾದ ತೆರಿಗೆಯನ್ನು ವಂಚಿಸಲಾಗಿದೆ. ಹೀಗಾಗಿ ಆನ್​​ಲೈನ್​ ಬೆಟ್ಟಿಂಗ್ ಆ್ಯಪ್​ಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಇದೇ ಸಂಬಂಧ ಕಳೆದ ತಿಂಗಳು ಮಾಜಿ ಕ್ರಿಕೆಟರ್ ಸುರೇಶ್ ರೈನಾ ಅವರನ್ನು ಪ್ರಶ್ನೆ ಮಾಡಿತ್ತು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ