/newsfirstlive-kannada/media/media_files/2025/08/15/suryakumar_yadav-2025-08-15-14-39-25.jpg)
ಟಿ20 ಏಷ್ಯಾ ಕಪ್ ಗೆಲ್ಲಲು ಈಗಾಗಲೇ ಎಂಟು ತಂಡಗಳು ಭರ್ಜರಿ ಯೋಜನೆ ಹಾಕಿಕೊಂಡಿವೆ. ಇದೇ ಸೆಪ್ಟೆಂಬರ್ 9 ರಿಂದ ಏಷ್ಯಾ ಕಪ್ ಆರಂಭವಾಗಲಿದ್ದು ಅಫ್ಘಾನಿಸ್ತಾನ್ ಹಾಗೂ ಹಾಂಗ್ ಕಾಂಗ್ ನಡುವೆ ಮೊದಲ ಪಂದ್ಯ ನಡೆಯಲಿದೆ. ಈ ಮಹತ್ವದ ಟ್ರೋಫಿಗಾಗಿ ಹಾಲಿ ಚಾಂಪಿಯನ್ ಟೀಮ್ ಇಂಡಿಯಾ ಕೂಡ ಬಿಗ್ ಪ್ಲಾನ್ ರೂಪಿಸಿದೆ. ಇನ್ನು ಟಿ20 ಏಷ್ಯಾಕಪ್ನಲ್ಲಿ ಬೆಸ್ಟ್ ಸ್ಟ್ರೈಕ್ರೇಟ್ ಹೊಂದಿದ ಐವರು ಭಾರತೀಯ ಬ್ಯಾಟ್ಸ್ಮನ್ಗಳೆಂದರೆ..
ಸೂರ್ಯಕುಮಾರ್ ಯಾದವ್; ಅತ್ಯುತ್ತಮ ಸ್ಟ್ರೈಕ್ ರೇಟ್ ಹೊಂದಿರುವರಲ್ಲಿ ಟೀಮ್ ಇಂಡಿಯಾದ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಟಾಪ್ನಲ್ಲಿದ್ದಾರೆ. 5 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದ ಸೂರ್ಯಕುಮಾರ್ 163.52 ಸ್ಟ್ರೈಕ್ ರೇಟ್ನೊಂದಿಗೆ 139 ರನ್ ಗಳಿಸಿದ್ದಾರೆ.
ಹಾರ್ದಿಕ್ ಪಾಂಡ್ಯ; ಟೀಮ್ ಇಂಡಿಯಾದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ದ್ವಿತೀಯ ಸ್ಥಾನದಲ್ಲಿದ್ದಾರೆ. ಸೂರ್ಯಕುಮಾರ್ ನಂತರ ಸ್ಥಾನ ಪಡೆದಿರುವ ಪಾಂಡ್ಯ 8 ಪಂದ್ಯಳಿಂದ 148.21 ಸ್ಟ್ರೈಕ್ ರೇಟ್ನಿಂದ 83 ರನ್ ಬಾರಿಸಿದ್ದಾರೆ.
ರೋಹಿತ್ ಶರ್ಮಾ; ಸದ್ಯ ಟಿ20 ಕ್ರಿಕೆಟ್ಗೆ ವಿದಾಯ ಹೇಳಿರುವ ಹಿಟ್ಮ್ಯಾನ್ ರೋಹಿತ್ ಶರ್ಮಾ ಈ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿದ್ದಾರೆ. 9 ಮ್ಯಾಚ್ಗಳಲ್ಲಿ ಅಬ್ಬರಿಸಿರುವ ಹಿಟ್ಮ್ಯಾನ್ 141.14 ಸ್ಟ್ರೈಕ್ ರೇಟ್ನಲ್ಲಿ 271 ರನ್ಗಳನ್ನು ಕಲೆ ಹಾಕಿದ್ದಾರೆ.
ಇದನ್ನೂ ಓದಿ:ಕಿರುತೆರೆ ನಟ ಆಶಿಶ್ನನ್ನು ಅರೆಸ್ಟ್ ಮಾಡಿದ ಪೊಲೀಸರು.. ಕಾರಣವೇನು?
ವಿರಾಟ್ ಕೊಹ್ಲಿ; ಟಿ20 ಕ್ರಿಕೆಟ್ಗೆ ನಿವೃತ್ತಿ ಹೇಳಿರುವ ವಿರಾಟ್ ಕೊಹ್ಲಿ ತಮ್ಮ ಬೆಸ್ಟ್ ಬ್ಯಾಟಿಂಗ್ನಿಂದ ಸ್ಥಾನ ಕಲ್ಪಿಸಿಕೊಂಡಿದ್ದಾರೆ. ಕಿಂಗ್ ಕೊಹ್ಲಿ 10 ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡಿದ್ದು 132.00 ಸ್ಟ್ರೈಕ್ರೇಟ್ನಲ್ಲಿ 429 ರನ್ ಗಳಿಸಿ 4ನೇ ಸ್ಥಾನದಲ್ಲಿದ್ದಾರೆ.
ರಿಷಭ್ ಪಂತ್; ಟೀಮ್ ಇಂಡಿಯಾದ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ಮನ್ ಆಗಿರುವ ರಿಷಭ್ ಪಂತ್ ಅವರು ಸದ್ಯ ಇಂಜುರಿಗೆ ಒಳಗಾಗಿ ಏಷ್ಯಾಕಪ್ ಮಿಸ್ ಮಾಡಿಕೊಂಡಿದ್ದಾರೆ. ಏಷ್ಯಾಕಪ್ನಲ್ಲಿ ಬ್ಯಾಟ್ ಮಾಡಿರುವ ಪಂತ್, 4 ಪಂದ್ಯಗಳಲ್ಲಿ 124.39 ಸ್ಟ್ರೈಕ್ ರೇಟ್ನಲ್ಲಿ 51 ರನ್ ಗಳಿಸಿದ್ದಾರೆ. ಈ ಲಿಸ್ಟ್ನಲ್ಲಿ 5ನೇ ಸ್ಥಾನ ಪಡೆದಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ