Advertisment

Facebook, X, ಯೂಟ್ಯೂಬ್, ವಾಟ್ಸಾಪ್ ಬ್ಯಾನ್​; ಬೃಹತ್ ಪ್ರತಿಭಟನೆ.. ಓರ್ವ ನಿಧನ, 80 ಜನ ಗಂಭೀರ

ನೇಪಾಳದಲ್ಲಿ ಸೋಷಿಯಲ್ ಮೀಡಿಯಾ ಬ್ಯಾನ್ ಮಾಡಿರುವ ಹಿನ್ನೆಲೆಯಲ್ಲಿ ಯುವ ಜನತೆ ನೇಪಾಳದ ರಾಜಧಾನಿ ಕಟ್ಮಂಡುವಿನಲ್ಲಿ ಬೀದಿಗೆ ಇಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದು ಓರ್ವ ಯುವಕ ಪ್ರಾಣ ಬಿಟ್ಟಿದ್ದಾನೆ.

author-image
Bhimappa
NEPAL_PROTEST
Advertisment

ನೇಪಾಳದಲ್ಲಿ ಸೋಷಿಯಲ್ ಮೀಡಿಯಾ ಬ್ಯಾನ್ ಮಾಡಿರುವ ಹಿನ್ನೆಲೆಯಲ್ಲಿ ಯುವ ಜನತೆ ನೇಪಾಳದ ರಾಜಧಾನಿ ಕಟ್ಮಂಡುವಿನಲ್ಲಿ ಬೀದಿಗೆ ಇಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದು ಓರ್ವ ಯುವಕ ಪ್ರಾಣ ಬಿಟ್ಟಿದ್ದಾನೆ.

Advertisment

ಈಗಂತು ಸೋಷಿಯಲ್​ ಮೀಡಿಯಾಗಳದ್ದೇ ಕಾಲ. ಈಗೀನ ಕಾಲದಲ್ಲಿ ಜನರಿಗೆ ಸಾಮಾಜಿಕ ಮಾಧ್ಯಮಗಳು ಇಲ್ಲ ಅಂದರೆ ಯಾವುದೇ ಕೆಲಸಗಳು ನಡೆಯಲ್ಲ ಎಂಬ ಮನಸ್ಥಿತಿ ಇದೆ. ಕೆಲವೊತ್ತು ನೆಟ್​ವರ್ಕ್​ ಸಿಗದಿದ್ರೆ ಸಾಕು ಅದು ಏನನ್ನೋ ಕಳೆದುಕೊಂಡ ರೀತಿಯಲ್ಲಿರುತ್ತಾರೆ. ಆದ್ರೆ ಈ ನಡುವೆ ನೇಪಾಳ ಸರ್ಕಾರ ಬರೋಬ್ಬರಿ 24 ಸಾಮಾಜಿಕ ಮಾಧ್ಯಮಗಳನ್ನ ಬ್ಯಾನ್​ ಮಾಡಿದ್ದರಿಂದ ಯುವಜನರು ಕಂಗಾಲಾಗಿ ಹೋಗಿದ್ದಾರೆ. 

ನೇಪಾಳ ಸರ್ಕಾರ ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದಡಿ ನೋಂದಣಿಗೆ ಆಗಸ್ಟ್ 28 ರಂದು 7 ದಿನಗಳ ಗಡುವು ನೀಡಿತ್ತು. ಆದ್ರೆ ಸಮಯ ಮುಕ್ತಾಯಗೊಂಡಿದ್ದರೂ ಮೆಟಾ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸಾಪ್, ರೆಡಿಟ್ ಮತ್ತು ಲಿಂಕ್ಡ್‌ಇನ್‌ನಂತಹ ಯಾವುದೇ ಪ್ರಮುಖ ಸಾಮಾಜಿಕ ಮಾಧ್ಯಮ ವೇದಿಕೆಗಳು ಅರ್ಜಿಗಳನ್ನು ಸಲ್ಲಿಸಿಲ್ಲ.ಸರ್ಕಾರದಲ್ಲಿ ನೋಂದಾಣಿಯನ್ನು ಮಾಡಿಕೊಳ್ಳಲಿಲ್ಲ. ಲೆಸೆನಿಂಗ್ ಆಫೀಸರ್ ನೇಮಕ ಮಾಡಿ ಸರ್ಕಾರದ ಬಳಿ ನೋಂದಾಣಿ ಮಾಡಿಕೊಳ್ಳಬೇಕೆಂದು ನೇಪಾಳ ಸರ್ಕಾರ ಸೂಚಿಸಿತ್ತು. 

ಈ ಹಿನ್ನಲೆ ನೇಪಾಳ ಸರ್ಕಾರ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಕಳೆದ ವಾರ 24 ಸಾಮಾಜಿಕ ಜಾಲತಾಣವನ್ನ ಬ್ಯಾನ್ ಮಾಡಿತ್ತು. ಇದರ ವಿರುದ್ಧ ಇಂದು ಸಾವಿರಾರು ಸಂಖ್ಯೆಯಲ್ಲಿ ಯುವಕ- ಯುವತಿಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದ ಸರ್ಕಾರ ಇಕ್ಕಟ್ಟಿಗೆ ಸಿಲುಕಿಕೊಂಡಿದ್ದು, ಪ್ರತಿಭಟನೆಯನ್ನ ತಡೆಯಲು ಪೋಲಿಸರ ಹರಸಾಹಸ ಪಡುವಂತಾಗಿದೆ.

Advertisment

ಇದನ್ನೂ ಓದಿ: ಮಲ್ಲಿಗೆ ಮುಡಿದಿದ್ದಕ್ಕೆ ಭಾರೀ ದಂಡ.. ಗಜ ಸಿನಿಮಾ ಖ್ಯಾತಿಯ ನವ್ಯಾ ನಾಯರ್​ಗೆ ಬಿಗ್ ಶಾಕ್!

NEPAL

ಯುವಜನತೆಯ ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆ ಪೋಲಿಸರು ಅಶ್ರುವಾಯು ಸಿಡಿಸಿದ್ದರು. ಆದ್ರೆ ಅದಕ್ಕೂ ತಲೆಕೆಡಿಸಿಕೊಳ್ಳದ ಜನರು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡಿ ಸಂಸತ್​ಗೆ ಎಂಟ್ರಿ ಕೊಟ್ಟರು. ಪೋಲಿಸರಿಂದ ಲಾಠಿ ಪ್ರಹಾರ ಮಾಡಿದರೂ ಯಾವುದೇ ಪ್ರಯೋಜನವಿಲ್ಲ ಎಂಬಂತೆ ಆಗಿದೆ. 

ಪೊಲೀಸರ ಗುಂಡಿನ ದಾಳಿ.. ಓರ್ವನ ನಿಧನ, 80 ಕ್ಕೂ ಹೆಚ್ಚು ಜನ ಗಂಭೀರ 

ಸದ್ಯ ಪ್ರತಿಭಟನೆಯೂ ತೀವ್ರ ಸ್ವರೂಪ ತಾಳಿರೋ ಹಿನ್ನಲೆ ಪೋಲಿಸರು ಗುಂಡಿನ ದಾಳಿ ನಡೆಸಿದ್ದಾರೆ. ಪರಿಣಾಮ ಒಬ್ಬ ಯುವಕ ಸಾವನಪ್ಪಿದ್ದು, 80 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಹಲವು ಜನರನ್ನ ಆಸ್ಪತ್ರೆಗೆ ಸೇರಿಸಲಾಗಿತ್ತು. ಇನ್ನು ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗೋ ಸಾಧ್ಯತೆ ಇದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

social media ban Police warning to social media users
Advertisment
Advertisment
Advertisment