21 ವರ್ಷದ ಯುವತಿ ಮೇಲೆ ಗುಂಡಿನ ದಾಳಿ.. ಆಸ್ಪತ್ರೆಯಲ್ಲಿ ನರಳಿ ನರಳಿ ಜೀವ ಬಿಟ್ಟ ವಿದ್ಯಾರ್ಥಿನಿ!

ಆರೋಪಿಯನ್ನ ನಯಗಾರ ಫಾಲ್ಸ್​ ಬಳಿ ಅರೆಸ್ಟ್ ಮಾಡಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈತನ ಮೇಲೆ ಈ ಮೊದಲು ಎರಡು ಇಂತಹದ್ದೇ ಪ್ರಕರಣಗಳು ಇರುವುದು ವಿಚಾರಣೆಯಿಂದ ಬೆಳಕಿಗೆ ಬಂದಿದೆ ಎಂದು ಹೇಳಲಾಗಿದೆ.

author-image
Bhimappa
Canada
Advertisment

ವಿದ್ಯಾಭ್ಯಾಸಕ್ಕೆಂದು ವಿದೇಶಕ್ಕೆ ತೆರಳಿದ್ದ 21 ವರ್ಷದ ವಿದ್ಯಾರ್ಥಿನಿ ಮೇಲೆ ಗುಂಡು ಹಾರಿಸಿ ಜೀವ ತೆಗೆದಿರುವ ಘಟನೆ ಕೆನಡಾದ ಒಂಟಾರಿಯೊದಲ್ಲಿ ನಡೆದಿದೆ. 

ಭಾರತೀಯ ಮೂಲದ ವಿದ್ಯಾರ್ಥಿನಿ ಹರ್ಸಿಮ್ರತ್ ರಾಂಧವ (21) ಜೀವ ಕಳೆದುಕೊಂಡವರು. 32 ವರ್ಷದ ಆರೋಪಿ ಜರ್ಡೈನ್​ ಫೋಸ್ಟರ್​ನನ್ನು ಕೆನಡಾದ ಒಂಟಾರಿಯೊದ ನಯಗಾರ ಫಾಲ್ಸ್​ ಬಳಿ ಪೊಲೀಸರು ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ. ಈತನ ಮೇಲೆ ಈ ಮೊದಲು ಎರಡು ಇಂತಹದ್ದೇ ಪ್ರಕರಣಗಳು ಇರುವುದು ವಿಚಾರಣೆಯಿಂದ ಬೆಳಕಿಗೆ ಬಂದಿದೆ ಎಂದು ಹೇಳಲಾಗಿದೆ. 

ಇದನ್ನೂ ಓದಿ:ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ.. ಮಾರ್ಕೆಟ್​ನಲ್ಲಿ ಹೂವು, ತರಕಾರಿ, ಹಣ್ಣುಗಳ ಬೆಲೆ ಹೇಗಿದೆ?

Canada_New

ವಿದ್ಯಾರ್ಥಿನಿ ಹರ್ಸಿಮ್ರತ್ ರಾಂಧವ ಅವರು ಕೆನಡಾದಲ್ಲಿ ಫಿಸಿಯೋಥೆರಫಿ (Physiotherapy) ಕೋರ್ಸ್​ ಅನ್ನು ಮೊಹಾಕ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಏಪ್ರಿಲ್ 17 ರಂದು ಅಪ್ಪರ್ ಜೇಮ್ಸ್ ಸ್ಟ್ರೀಟ್ ಹಾಗೂ ಸೌತ್​ ಬೆಂಡ್​ ರೋಡ್​​ನಲ್ಲಿ ಬಸ್​ ಇಳಿದು ರಸ್ತೆ ದಾಟಲು ನಿಂತಿದ್ದಾಗ ವಿದ್ಯಾರ್ಥಿನಿಗೆ ಬುಲೆಟ್ ತಗುಲಿತ್ತು. ತಕ್ಷಣ ಆಕೆಯನ್ನು ಅಲ್ಲಿನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದ ವಿದ್ಯಾರ್ಥಿನಿ ಕೊನೆಯುಸಿರೆಳೆದಿದ್ದಾಳೆ ಎಂದು ಹೇಳಲಾಗಿದೆ.

ಇನ್ನು ಚಾಲನೆಯಲ್ಲಿದ್ದ ಕಾರುಗಳಲ್ಲಿ ಇದ್ದಂತಹ ಏಳು ಜನರ ನಡುವೆ ಫೈರಿಂಗ್ ನಡೆಯುತ್ತಿತ್ತು. ಇವರು ಅಲ್ಲಿನ ಸ್ಥಳೀಯರೇ ಆಗಿದ್ದು ಗುಂಡಿನ ದಾಳಿ ಮಾಡುವಾಗ ಒಂದು ಬುಲೆಟ್ ವಿದ್ಯಾರ್ಥಿನಿಗೆ ತಗುಲಿತ್ತು. ಈ ಪ್ರಕರಣದಲ್ಲಿ ಕನಿಷ್ಠ ಏಳು ಮಂದಿ ಭಾಗಿಯಾಗಿದ್ದು ಎರಡು ಗನ್​ಗಳನ್ನು ಬಳಸಿದ್ದಾರೆ ಎಂದು ವಿಚಾರಣೆಯಲ್ಲಿ ತಿಳಿದಿದೆ ಎನ್ನಲಾಗಿದೆ.      

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Indian student
Advertisment