/newsfirstlive-kannada/media/media_files/2025/09/27/japan_love_new-2025-09-27-07-44-31.jpg)
ಪ್ರೀತಿಗೆ ವಯಸ್ಸು ಇರಲ್ಲ, ಯಾವಾಗ ಬೇಕಾದರೂ ಯಾರ ಮೇಲಾದರೂ ಸುಂದರ ಪ್ರೇಮಾ ಅರಳಬಹುದು. ಪ್ರೀತಿ ಎಷ್ಟು ಸೌಂದರ್ಯವಾಗಿರುತ್ತೋ, ಅಷ್ಟೇ ಇಬ್ಬರ ನಡುವಿನ ಸಂಬಂಧ ಕೂಡ ಶಕ್ತಿವಂತವಾಗಿರುತ್ತದೆ. ಸದ್ಯ ಮೇಲೆ ಹೇಳಿದ ಮಾತಿನಂತೆ ತನ್ನ ಜೊತೆ ಓದುತ್ತಿದ್ದ ಸಹಪಾಠಿಯ ಗೆಳತಿಯ ತಾಯಿಯನ್ನೇ ವಿದ್ಯಾರ್ಥಿಯೊಬ್ಬ ಪ್ರೀತಿ ಮಾಡಿ, ಮದುವೆಯಾಗಿದ್ದಾನೆ.
ಜಪಾನ್​​ನ ಶಿಜುವೊಕಾ ಪ್ರಾಂತ್ಯದ 33 ವರ್ಷದ ​ಇಸಾಮು ಟೊಮಿಯೋಕಾ 54 ವರ್ಷದ ಮಿಡೋರಿಳನ್ನು ಮೊದಲು ತನ್ನ ಶಾಲೆಯ ದಿನಗಳಲ್ಲಿ ಪೇರೇಂಟ್ಸ್​ ಮೀಟಿಂಗ್​ನಲ್ಲಿ ಭೇಟಿಯಾಗಿದ್ದನು. ಬಳಿಕ ಇಬ್ಬರು ಅವರವರ ಕೆಲಸ ಮಾಡಿಕೊಂಡಿದ್ದರು. ಹಲವಾರು ವರ್ಷಗಳ ಬಳಿಕ ಒಮ್ಮೆ ಆಕಸ್ಮಿಕವಾಗಿ ಬ್ಯೂಟಿ ಸಲೂನ್​ಗೆ ಹೋಗಿದ್ದಾಗ ಇಬ್ಬರ ಮಧ್ಯೆ ಮತ್ತೆ ಸಂಪರ್ಕ ಏರ್ಪಟ್ಟು, ಪ್ರೀತಿಯಾಗಿ ಅರಳಿತ್ತು.
ಇತ್ತೀಚೆಗಷ್ಟೇ ಮಿಡೋರಿ ತನ್ನ ಪತಿಯಿಂದ ಡಿವೋರ್ಸ್ ಪಡೆದಿದ್ದಳು. ಇದರ ಬೆನ್ನಲ್ಲೇ ​ಇಸಾಮು ಭೇಟಿಯೂ ಅವಳ ಜೀವನದಲ್ಲಿ ಹೊಸ ಅಲೆಯನ್ನು ಎಬ್ಬಿಸಿತ್ತು. ಬ್ಯೂಟಿ ಸಲೂನ್​ನಲ್ಲಿ ಮಿಡೋರಿಳನ್ನು ನೋಡಿದಾಗ ಅಳೆಯ ನೆನಪನ್ನು ಮಾಡಿಕೊಂಡಿದ್ದಾರೆ. ವಯಸ್ಸಿನ ಅಂತರ ಮನಸ್ಸಿಗೆ ಬಂದರೂ ಪ್ರವಾಸಿ ತಾಣಗಳಿಗೆ, ಹೋಟೆಲ್​ಗಳಿಗೆ ಸುತ್ತಾಡಿದ್ದರಿಂದ ಇಬ್ಬರ ನಡುವೆ ಬಾಂಧವ್ಯ ಬಲವಾಗುತ್ತ ಹೋಗಿತ್ತು.
ಯಾವಾಗ ಇಬ್ಬರು ಮದುವೆ ಬಗ್ಗೆ ಆಲೋಚನೆ ಮಾಡಿದರೋ ಅವಾಗ ಮಿಡೋರಿ ಕುಟುಂಬಸ್ಥರಿಂದ ಬಲವಾದ ವಿರೋಧ ವ್ಯಕ್ತವಾಯಿತು. ಇಸಾಮುಗೆ ಎಚ್ಚರಿಕೆ ನೀಡಿ, ಆಕೆಗೆ ಈಗ 51 ವರ್ಷಗಳು, ನಿನಗಿಂತ 21 ವರ್ಷ ದೊಡ್ಡವಳು. ನಿನ್ನ ವಯಸ್ಸಿನವರನ್ನೇ ಮದುವೆಯಾಗು ಎಂದು ಬುದ್ಧಿವಾದ ಹೇಳಿದರು.
ಇಸಾಮು ತನ್ನ ಪ್ರೀತಿ ಎಂಥಹದ್ದು ಎಂದು ತೋರಿಸಲು ಆಕೆಗಾಗಿ ದುಬಾರಿ ಮನೆಯೊಂದು ಖರೀದಿ ಮಾಡಿದನು. 38 ಮಿಲಿಯನ್​ ಯೆನ್​​ ಅಂದರೆ ಭಾರತದ ಹಣ 2,26,33,252 ರೂಪಾಯಿ ಮೌಲ್ಯದ ನಿವಾಸ ಖರೀದಿ ಮಾಡಿ ನಾವು ಒಟ್ಟಿಗೆ ಬಾಳುತ್ತೇವೆ ಎಂದು ಮಹಿಳೆಯ ಕುಟುಂಬಸ್ಥರಿಗೆ ಹೇಳಿದನು.
ಇದನ್ನೂ ಓದಿ:4 ವರ್ಷದ ಬಾಲಕಿಗೆ ರಾಷ್ಟ್ರಪತಿಗಳಿಂದ ಗೌರವ.. ಈ ಮುದ್ದಾದ ತ್ರಿಶಾ ಸಾಧನೆ ಏನು ಗೊತ್ತಾ?
ಹೀಗಾಗಿ ಈ ಇಬ್ಬರು 2024ರ ಜುಲೈನಲ್ಲಿ ಅಧಿಕೃತವಾಗಿ ಮದುವೆಯಾದರು. ಇಸಾಮು, ಮಿಡೋರಿಗಿಂತ ಚಿಕ್ಕವನಾದರೂ ಆಕೆಯ ಮಗಳಿಗೆ ಮಲತಂದೆಯಾಗಿದ್ದಾನೆ. ಮಲತಂದೆ ಆಗಿರುವುದು ಅಷ್ಟೇ ಅಲ್ಲ, ಆಕೆಯ ನಾಲ್ವರು ಮೊಮ್ಮಕ್ಕಳಿಗೆ ಅಜ್ಜ ಕೂಡ ಆಗಿದ್ದಾರೆ. ಯಂಗ್ ಗ್ರ್ಯಾಂಡ್​ಫಾದರ್​ ಆಗಿದ್ದಾರೆ ಎನ್ನುವುದು ಅಚ್ಚರಿಯಾದ ಸಂಗತಿ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ