/newsfirstlive-kannada/media/media_files/2025/09/26/thrisha-2025-09-26-22-45-29.jpg)
ನವದೆಹಲಿ: ಮಾಲಿವುಡ್​ ಸೂಪರ್ ಸ್ಟಾರ್ ಮೋಹನ್ ಲಾಲ್​​ಗೆ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ, ಶಾರುಖ್ ಖಾನ್, ವಿಕ್ರಾಂತ್ ಮ್ಯಾಸಿ ಹಾಗೂ ರಾಣಿ ಮುಖರ್ಜಿ ಸೇರಿದಂತೆ ಹಲವರಿಗೆ ಅತ್ಯುತ್ತಮ ನಟ, ನಟಿ ಪ್ರಶಸ್ತಿಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರದಾನ ಮಾಡಿದರು. ಈ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ದೊಡ್ಡ ದೊಡ್ಡ ಸ್ಟಾರ್ಸ್​, ಗಣ್ಯರು, ಹೀರೋಯಿನ್ಸ್ ಬಂದಿದ್ದರೂ ಫೇಮಸ್​ ಆಗಿದ್ದು ಮಾತ್ರ 4 ವರ್ಷದ ಬಾಲಕಿ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಬಳಿಗೆ ಪ್ರಶಸ್ತಿ ಸ್ವೀಕರಿಸಲು ಬರುವ 4 ವರ್ಷದ ಬಾಲಕಿಯನ್ನ ನೀವು ನೋಡಿದರೆ ನಿಜಕ್ಕೂ ವ್ಹಾವ್​.. ಸೂಪರ್ ಎಂದು ಹೇಳದೇ ಇರಲ್ಲ. ಅಷ್ಟೊಂದು ಅಂದವಾಗಿ ರಾಷ್ಟ್ರಪತಿಗಳ ಬಳಿಗೆ ಕಂದಮ್ಮ ಬಂದಿದ್ದಾಳೆ. ಎಷ್ಟೇ ದೊಡ್ಡ ಸ್ಟಾರ್ಸ್​, ಗಣ್ಯರು ಇದ್ದರೂ ಸಮಾರಂಭದ ಹೈಲೈಟ್​ ಆಗಿರೋದು ಬಾಲಕಿ ತ್ರಿಶಾ ಥೋಸರ್.
ಮರಾಠಿ ಭಾಷೆಯ ಸಿನಿಮಾ ನಾಲ್-2 ಸಿನಿಮಾದಲ್ಲಿ ಅತ್ಯದ್ಭುತವಾಗಿ ಅಭಿನಯಿಸಿದ್ದಕ್ಕಾಗಿ ಅತ್ಯುತ್ತಮ ಬಾಲ ಕಲಾವಿದೆ ಎಂದು ಬಾಲಕಿ ತ್ರಿಶಾ ಥೋಸರ್​ಗೆ 2023ನೇ ಸಾಲಿನ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರದಾನ ಮಾಡಿದ್ದಾರೆ. ರಾಷ್ಟ್ರಪತಿ ಬಳಿಗೆ ಪುಟ್ಟ ಪುಟ್ಟ ಹೆಜ್ಜೆಗಳಿನ್ನಿಟ್ಟು ತ್ರಿಶಾ ಥೋಸರ್ ಆಗಮಿಸುತ್ತಿರುವ ಫೋಟೋಸ್, ವಿಡಿಯೋಸ್​ ಎಲ್ಲೆಡೆ ವೈರಲ್ ಆಗಿವೆ.
ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಬರಬೇಕಾದರೆ ತ್ರಿಶಾ ಥೋಸರ್ ಗೋಲ್ಡನ್​ ಕಲರ್ ಸ್ಯಾರಿ ಹಾಕಿಕೊಂಡಿದ್ದೇ ಎಲ್ಲರ ಗಮನವನ್ನು ಸೆಳೆದಿದೆ. ವೇದಿಕೆ ಮೇಲೆ ಬರುವಾಗ ಬಾಲಕಿ ಮಾಡಿದ ನಮಸ್ಕಾರ ಹಾಗೂ ಬರುವ ಸ್ಪೀಡ್​ ನೋಡಿ, ಸಮಾರಂಭದಲ್ಲಿದ್ದ ಎಲ್ಲರೂ ಜೋರು ಚಪ್ಪಾಳೆ ಹಾಗೂ ಓಹೋ.. ಎಂದು ಕೂಗಿದರು. ತ್ರಿಶಾ ಥೋಸರ್ ನೋಡಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ನಕ್ಕರು.
ತ್ರಿಶಾ ಥೋಸರ್ ಗೋಲ್ಡನ್​ ಕಲರ್ ಸ್ಯಾರಿ ಧರಿಸಿ, ಹಣೆಯ ಮೇಲೆ ಚಿಕ್ಕದಾದ ಬಿಂದಿ ಇಟ್ಟುಕೊಂಡು ತನ್ನ ಕೂದಲುಗಳನ್ನು ಮುತ್ತುಗಳಿಂದ ಅಲಂಕರಿಸಿದ್ದಳು. ಇಡೀ ಸಮಾರಂಭದಲ್ಲಿ ಆಕರ್ಷಣೆಯಾಗಿ, ವೈವಿಧ್ಯಮಯವಾಗಿ, ವೈಶಿಷ್ಟ್ಯವಾಗಿ, ಅಂದವಾಗಿ ತ್ರಿಶಾ ಥೋಸರ್ ಕಾಣಿಸಿಕೊಂಡಳು. ಸ್ವತಹ ರಾಷ್ಟ್ರಪತಿಗಳೇ ಮುಗುಳು ನಗೆ ನಕ್ಕರು.
ಕಾರ್ಯಕ್ರಮದಲ್ಲಿ ಶ್ರೀನಿವಾಸ್ ಪೋಕಳೆ, ಭಾರ್ಗವ್ ಜಗತಾಪ್, ಕಬೀರ್ ಖಂಡಾರೆ ಮತ್ತು ಸುಕೃತಿ ವೇಣಿ ಬಂಡ್ರೆಡ್ಡಿ ಪ್ರಶಸ್ತಿ ಪಡೆದರು. ಆದರೆ 4 ವರ್ಷಕ್ಕೆ ಪ್ರಶಸ್ತಿ ಪಡೆದಿದ್ದು ಎಂದರೆ ಅದು ತ್ರಿಶಾ ಥೋಸರ್. ಕೇವಲ 4ನೇ ವಯಸ್ಸಿಗೆ ತ್ರಿಶಾ ಥೋಸರ್ ಹಲವಾರು ಪ್ರಜೆಕ್ಟ್​ಗಳಲ್ಲಿ ಕೆಲಸ ಮಾಡುತ್ತಿದ್ದರಿಂದ ಬಾಲ ಕಲಾವಿದೆಯಾಗಿ ಗುರುತಿಸಿಕೊಂಡಿದ್ದಾರೆ.
ಕೇವಲ ನಾಲ್ 2 ಸಿನಿಮಾ ಮಾತ್ರವಲ್ಲ ಪುನ್ಹಾ ಶಿವಾಜಿ ರಾಜೇ ಭೋಸಲೆ, ಮಾನ್ವತ್ ಮರ್ಡರ್ಸ್ ಹಾಗೂ ಪೆಟ್ ಪುರಾಣ ಸೇರಿ ಕೆಲವು ಸಿನಿಮಾಗಳಲ್ಲಿ ಅಭಿನಯ ಮಾಡಿದ್ದಾರೆ. ಸ್ವತಹ ಕಮಾಲ್ ಹಾಸನ್ ಅವರು ತ್ರಿಶಾ ಥೋಸರ್​ಗೆ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಾರೆ. ಕಂದ ನಾನು ಕಮಲಾ ಹಾಸನ್. ನನ್ನ ರೆಕಾರ್ಡ್​ ಅನ್ನು ಬ್ರೇಕ್ ಮಾಡಿದೆ ಎಂದು ಹೇಳಿದ್ದಾರೆ. ಈ ವಿಡಿಯೋ ಕೂಡ ವೈರಲ್ ಆಗಿದೆ.
#TheKarigai | என் சாதனையை முறியடித்ததற்கு வாழ்த்துகள்
— The karigai (@thekarigai) September 25, 2025
வீடியோ கால் செய்து த்ரிஷா தோஷர் என்ற 4 வயது சிறுமியை வாழ்த்திய கமல்ஹாசன்.#KamalHaasan#TrishaThosar#71stNationalFilmAwards#NationalAwardspic.twitter.com/OaPvWOhMuQpic.twitter.com/L7qSAs08KD
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ