Advertisment

RCB ಸಂಪರ್ಕಕ್ಕೂ ಸಿಗ್ತಿಲ್ಲ ಕಿಂಗ್​ ಕೊಹ್ಲಿ.. ಲಂಡನ್​​ನಲ್ಲಿ ಏನ್ ಮಾಡ್ತಿದ್ದಾರೆ ಸ್ಟಾರ್ ಕ್ರಿಕೆಟರ್​?

ಲಂಡನ್​ನಲ್ಲೇ ಫಿಟ್ನೆಸ್ ಟೆಸ್ಟ್ ಮುಗಿಸಿದ್ದ ವಿರಾಟ್​​​​, ಇನ್ನೇನು ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿಯಲ್ಲಿ ಕಾಣಿಸಿಕೊಳ್ಳಬೇಕು. ಇದೇ ವಿಚಾರವಾಗಿ ಚರ್ಚಿಸಲು ಚೀಫ್ ಸೆಲೆಕ್ಟರ್ ಅಜಿತ್​ ಅಗರ್ಕರ್​, ಕೆಲ ದಿನಗಳ ಹಿಂದಷ್ಟೇ ಕಾಲ್ ಮಾಡಿದ್ದಾರೆ. ಆದ್ರೆ..

author-image
Bhimappa
VIRAT_KOHLI (4)
Advertisment

ವಿರಾಟ್​ ಕೊಹ್ಲಿ, ಲಂಡನ್​ನಲ್ಲಿ ಏನ್ ಮಾಡ್ತಿದ್ದಾರೆ. ಯಾರಿಗೂ ಸಿಗದೇ ಓಡಾಡ್ತಿರುವ ವಿರಾಟ್​ ಲೈಫ್, ಹೇಗೆ ಲೀಡ್ ಮಾಡ್ತಿದ್ದಾರೆ. ಅಸಲಿಗೆ ಅಜಿತ್ ಅಗರ್ಕರ್​ಗೂ ಸಿಗದಷ್ಟು ಬ್ಯುಸಿ ಕೆಲಸ ಏನ್ ಮಾಡ್ತಿದ್ದಾರೆ ಎಂಬ ಪ್ರಶ್ನೆ ಎಲ್ಲರಿಗೂ ಕಾಡುತ್ತೆ. ಆ ಪ್ರಶ್ನೆಗೆ ಉತ್ತರ ಇಲ್ಲಿದೆ.

Advertisment

ವಿರಾಟ್​ ಕೊಹ್ಲಿ.. ವಿಶ್ವ ಕ್ರಿಕೆಟ್ ಲೋಕದ ಹಾಟ್​ & ಟ್ರೆಂಡಿಂಗ್ ಟಾಪಿಕ್​​.  ದಿನದಿಂದ ದಿನಕ್ಕೆ ವಿರಾಟ್​ ಕೊಹ್ಲಿಯ ಭವಿಷ್ಯದ್ದೇ ಚರ್ಚೆ. ಲಂಡನ್​ನಲ್ಲಿ ಬೀಡು ಬಿಟ್ಟುರೋ ವಿರಾಟ್, ಮುಂದಿನ ಆಸ್ಟ್ರೇಲಿಯಾ ಸರಣಿಯಲ್ಲಿ ಆಡ್ತಾರಾ.? ಇಲ್ವಾ.? ಅನ್ನೋದೇ ಗೊಂದಲ. ಅಭಿಮಾನಿಗಳಿಗೆ ಇರಲಿ, ಟೀಮ್ ಮ್ಯಾನೇಜ್​ಮೆಂಟ್​​ಗೂ ವಿರಾಟ್​ ಕೊಹ್ಲಿಯದ್ದೇ ಚಿಂತೆಯಾಗಿ ಬಿಟ್ಟಿದೆ. ಇದಕ್ಕೆ ಕಾರಣ ವಿರಾಟ್​ ಕೊಹ್ಲಿಯ ನಡೆ ಅನ್ನೋದು ಓಪನ್ ಸೀಕ್ರೆಟ್.

VIRAT_KOHLI_FAMILY

ಅಜಿತ್ ಅಗರ್ಕರ್ ಫೋನ್ ಕಾಲ್​​ಗೂ ಸಿಗ್ತಿಲ್ಲ ಕೊಹ್ಲಿ..!

ಐಪಿಎಲ್ ಮುಗಿದಿದ್ದೇ ಮುಗಿದಿದ್ದು ವಿರಾಟ್ ಕೊಹ್ಲಿ & ಫ್ಯಾಮಿಲಿ ಹಾರಿದ್ದು ಲಂಡನ್​​ಗೆ, ಕಳೆದ ಎರಡು ತಿಂಗಳಿಂದ ಲಂಡನ್​​ನಲ್ಲೇ ಬೀಡುಬಿಟ್ಟಿರುವ ವಿರಾಟ್​, ಆಗೊಮ್ಮೆ, ಈಗೊಮ್ಮೆ ನೆಟ್ಸ್​ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡಿದ್ದು ಬಿಟ್ರೆ, ಫ್ಯಾನ್ಸ್​ ಕಣ್ಣಿಗೆ ಸಿಕ್ಕಿದಿಲ್ಲ. ಫ್ಯಾನ್ಸ್​ಗೆ ಇರಲಿ ಸ್ವತಃ ಅಜಿತ್ ಅಗರ್ಕರ್​ಗೂ ವಿರಾಟ್ ಸಿಕ್ಕಿಲ್ಲ.

ಲಂಡನ್​ನಲ್ಲೇ ಫಿಟ್ನೆಸ್ ಟೆಸ್ಟ್ ಮುಗಿಸಿದ್ದ ವಿರಾಟ್​​​​, ಇನ್ನೇನು ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿಯಲ್ಲಿ ಕಾಣಿಸಿಕೊಳ್ಳಬೇಕು. ಇದೇ ವಿಚಾರವಾಗಿ ಚರ್ಚಿಸಲು ಚೀಫ್ ಸೆಲೆಕ್ಟರ್ ಅಜಿತ್​ ಅಗರ್ಕರ್​, ಕೆಲ ದಿನಗಳ ಹಿಂದಷ್ಟೇ ಕಾಲ್ ಮಾಡಿದ್ದಾರೆ. ಆದ್ರೆ, ಅಜಿತ್​ ಅಗರ್ಕರ್​ ಪೋನ್​ ಕರೆಗೂ ಸಿಗದ ಬ್ಯುಸಿಯಲ್ಲಿದ್ದಾರೆ. ಅಜಿತ್ ಅಗರ್ಕರ್ ಇರಲಿ, ಆರ್​ಸಿಬಿಯ ಮ್ಯಾನೇಜ್​​ಮೆಂಟ್​​ಗೂ ವಿರಾಟ್ ಸಿಕ್ಕಿಲ್ಲ. 

Advertisment

ಸೀಸನ್​-18 ಐಪಿಎಲ್ ಗೆದ್ದಿರುವ ಆರ್​ಸಿಬಿ, 2026ರ ಐಪಿಎಲ್​​ಗೆ ಕಸರತ್ತು ಆರಂಭಿಸಿದೆ. ಮಿಷನ್-2026 ಹೆಸರಲ್ಲಿ ಅಖಾಡಕ್ಕಿಳಿದಿರುವ ಆರ್​ಸಿಬಿ ಮ್ಯಾನೇಜ್​ಮೆಂಟ್​, ಲಂಡನ್​​ನಲ್ಲೇ ಬೀಡುಬಿಟ್ಟಿದೆ. ಆದ್ರೆ, ಆರ್​ಸಿಬಿ ಮ್ಯಾನೇಜ್​​ಮೆಂಟ್​ಗೂ ಸಿಗದೆ, ವಿರಾಟ್ ಓಡಾಡ್ತಿದ್ದಾರೆ. ಇದು ಸಹಜವಾಗೇ ಲಂಡನ್​ನಲ್ಲಿ ವಿರಾಟ್ ಏನ್ ಮಾಡ್ತಿದ್ದಾರಪ್ಪ ಎಂಬ ಪ್ರಶ್ನೆಗೆ ನಾಂದಿಯಾಡಿದೆ. 

ಲಂಡನ್​​ನಲ್ಲಿ ಸೂಪರ್ ಸ್ಟಾರ್ ವಿರಾಟ್​ ಕೊಹ್ಲಿ ಸಿಂಪಲ್​ ಲೈಫ್​..!

ವಿಶ್ವ ಕ್ರಿಕೆಟ್ ಲೋಕದ ದಿಗ್ಗಜ ವಿರಾಟ್ ಕೊಹ್ಲಿ. ಆದ್ರೆ, ಲಂಡನ್​​ನಲ್ಲಿ ಕಿಂಗ್ ಕೊಹ್ಲಿ ಸಿಂಪಲ್​ ಲೈಫ್ ಸ್ಪೆಂಡ್ ಮಾಡ್ತಿದ್ದಾರೆ. ಸಾಮಾನ್ಯರಲ್ಲಿ ಸಾಮನ್ಯತರಂತೆ ಜೀವನ ನಡೆಸ್ತಿರುವ ವಿರಾಟ್​,  ಫ್ಯಾಮಿಲಿ ಜೊತೆಯೇ ಸಮಯ ಕಳೆಯುತ್ತಿದ್ದಾರೆ. ಫ್ಯಾಮಿಲು ಜೊತೆ ಫುಲ್ ಬ್ಯುಸಿಯಾಗಿರುವ ವಿರಾಟ್, ಶಾಪಿಂಗ್​ ಬಳಿಕ ಕಾರ್​​​ ಬ್ಯಾಕ್ ಡೋರ್​​​​​​​ನಲ್ಲಿ ವಸ್ತಗಳನ್ನು ಜೋಡಿಸ್ತಾ ಕಾಣಿಸಿಕೊಂಡಿದ್ದಾರೆ. ಬ್ಯಾಗ್​​ ಸೇರಿದಂತೆ baby strollerನ ಫೋಲ್ಡ್​ ಮಾಡಿ ಕಾರಿನಲ್ಲಿ ಇಟ್ಕೊಂಳ್ತಾ ಕ್ಯಾಮರ ಕಣ್ಣಿಗೆ ಬಿದ್ದಿದ್ದಾರೆ. 

ಇದನ್ನೂ ಓದಿ: ಡೇರ್​​ ಡೆವಿಲ್​ ಅಭಿಷೇಕ್​ ಶರ್ಮಾಗೆ ಗುಡ್​ನ್ಯೂಸ್.. ಈ ಬಿಗ್​ ಪ್ಲಾನ್​ ವರ್ಕೌಟ್​ ಆಗುತ್ತಾ..?

Advertisment

VIRAT_KOHLI_1 (1)

ಪಕ್ಕಾ ಫ್ಯಾಮಿಲಿ ಮ್ಯಾನ್ ಆಗಿರುವ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾ, ಅಕಾಯ್‌ ಜೊತೆ ಸುತ್ತಾಡ್ತಾ ಕಾಣಿಸಿಕೊಂಡಿದ್ದಾರೆ. ಮಗ ಅಕಾಯ್‌ನನ್ನ baby strollerನಲ್ಲಿ ಕೂರಿಸಿ ಕರ್ಕೊಂಡು ಹೋಗಿದ್ದಾರೆ. ಆ ಮೂಲಕ ಬಹುಪಾಲು ಸಮಯ ಫ್ಯಾಮಿಲಿಗೆ ಮೀಸಲಿಟ್ಟಿದ್ದಾರೆ. 

ಸದ್ಯ ಲಂಡನ್​​ನ ಹಾದಿ ಬೀದಿಗಳಲ್ಲಿ ಸಿಂಪಲ್ ಆಗಿ, ಟೆನ್ಶನ್ ಫ್ರೀ ಲೈಫ್ ಲೀಡ್ ಮಾಡ್ತಿರುವ ವಿರಾಟ್, ನೆರೆ ಮನೆಯ ಮಂದಿಯ ಜೊತೆಯೂ ಮಾತನಾಡುತ್ತಾ ಕಾಣಿಸಿಕೊಂಡಿದ್ದಿದೆ. ವಿರಾಟ್ ಕೊಹ್ಲಿಯನ್ನು ನೋಡ್ತಿರುವ ಅಭಿಮಾನಿಗಳಂತೂ, ಸೂಪರ್ ಸ್ಟಾರ್​ನ ಸಿಂಪಲ್ ಲೈಫ್​ಗೆ ಫಿದಾ ಆಗಿದ್ದಾರೆ. ಆದ್ರೆ, ಲಂಡನ್​​ನಲ್ಲಿ ಬ್ಯುಸಿಯಾಗಿರುವ ವಿರಾಟ್, ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿ ಆಡ್ತಾರಾ..? ಯಾರಿಗೂ ಸಿಗದ ಕೊಹ್ಲಿ, ಭವಿಷ್ಯದ ನಿರ್ಧಾರ ಏನ್ ಮಾಡ್ತಾರೆ ಅನ್ನೋದು, ಫ್ಯಾನ್ಸ್​ಗೆ ಮತ್ತೊಂದ್ಕಡೆ ಟೆನ್ಶನ್ ಹುಟ್ಟಿಸಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Asia cup final Rohit Sharma-Virat Kohli Virat Kohli
Advertisment
Advertisment
Advertisment