Advertisment

ಡೇರ್​​ ಡೆವಿಲ್​ ಅಭಿಷೇಕ್​ ಶರ್ಮಾಗೆ ಗುಡ್​ನ್ಯೂಸ್.. ಈ ಬಿಗ್​ ಪ್ಲಾನ್​ ವರ್ಕೌಟ್​ ಆಗುತ್ತಾ..?

ಅಭಿಷೇಕ್​​ ಶರ್ಮಾ ಟೀಮ್​ ಮ್ಯಾನೇಜ್​ಮೆಂಟ್​, ಸೆಲೆಕ್ಷನ್​ ಕಮಿಟಿ ಮೆಂಬರ್ಸ್​​ಗಳನ್ನ​​ ಫುಲ್​ ಇಂಪ್ರೆಸ್​ ಮಾಡಿದ್ದಾರೆ. ಫುಲ್​ ಖುಷ್​ ಆಗಿರುವ ಟೀಮ್​ ಮ್ಯಾನೇಜ್​ಮೆಂಟ್​ ಅಭಿಷೇಕ್​ಗೆ ಇದೀಗ ಬಂಪರ್​​ ಉಡುಗೊರೆ ನೀಡೋಕೆ ರೆಡಿಯಾಗಿದೆ.

author-image
Bhimappa
ABHISHEK_SHARMA (5)
Advertisment

ಏಷ್ಯನ್​ ಸಮರದಲ್ಲಿ ಧೂಳೆಬ್ಬಿಸ್ತಾ ಇರೋ ಅಭಿಷೇಕ್​ ಶರ್ಮಾ ಕ್ರಿಕೆಟ್​ ಲೋಕದಲ್ಲಿ ಸಖತ್​ ಸೌಂಡ್​ ಮಾಡ್ತಿದ್ದಾರೆ. ಡೇರ್​​ ಡೆವಿಲ್​ ಬ್ಯಾಟಿಂಗ್​ನಿಂದ ಮಿಂಚು ಹರಿಸ್ತಾ ಇರೋ ಪಂಜಾಬ್ ಪುತ್ತರ್​ಗೆ ಟೂರ್ನಿ ಅಂತ್ಯದ ಬೆನ್ನಲ್ಲೇ​ ಬಂಪರ್​ ಗಿಫ್ಟ್​ ಕಾದಿದೆ. ಅಭಿಷೇಕ್​ ಅಬ್ಬರ ಕಂಡು ಫುಲ್​ ಖುಷ್​ ಆಗಿರೋ ಬಿಸಿಸಿಐ ಬಾಸ್​ಗಳು ಗುಡ್​ನ್ಯೂಸ್ ಕೊಡೋಕೆ ಪ್ಲಾನ್​ ಮಾಡಿದ್ದಾರೆ. ಏನದು ಗಿಫ್ಟ್​, ಗುಡ್​ನ್ಯೂಸ್​​ ಏನು?.

Advertisment

ಏಷ್ಯಾಕಪ್​ ಟೂರ್ನಿಯಲ್ಲಿ ಯಂಗ್​ಗನ್​​ ಅಭಿಷೇಕ್​ ಶರ್ಮಾ ಆರ್ಭಟ ಜೋರಾಗಿ ನಡೀತಿದೆ. ಬೌಂಡರಿಗಳ ಬೋರ್ಗರೆತ, ಸಿಕ್ಸರ್​​ ಸುರಿಮಳೆ ಸುರಿಸ್ತಾ ಇರೋ ಯಂಗ್​​​ ಬ್ಯಾಟರ್​​ ತನ್ನ ಟೆರರ್​​ ಬ್ಯಾಟಿಂಗ್​ನಿಂದಲೇ ಎದುರಾಳಿಗಳಲ್ಲಿ ನಡುಕ ಹುಟ್ಟಿಸಿದ್ದಾನೆ. ಕ್ರಿಕೆಟ್​ ಲೋಕ ಕಂಡ ಲೆಜೆಂಡ್ಸ್​, ಎಕ್ಸ್​ಪರ್ಟ್ಸ್​​​, ಫ್ಯಾನ್ಸ್​ ಎಲ್ಲರ ಬಾಯಲ್ಲೂ ಅಭಿಷೇಕ್​ ಶರ್ಮಾದ್ದೇ ಮಾತು..

ABHISHEK_GILL

ಅಭಿಷೇಕ್​ ಆಟಕ್ಕೆ ಟೀಮ್​ ಮ್ಯಾನೇಜ್​ಮೆಂಟ್​ ಫುಲ್​ ಖುಷ್​.!

ಅರಬ್ಬರ ನಾಡಲ್ಲಿ ಅಬ್ಬರದ ಆಟವಾಡಿರೋ ಅಭಿಷೇಕ್​​ ಶರ್ಮಾ ಟೀಮ್​ ಮ್ಯಾನೇಜ್​ಮೆಂಟ್​, ಸೆಲೆಕ್ಷನ್​ ಕಮಿಟಿ ಮೆಂಬರ್ಸ್​​ಗಳನ್ನ​​ ಫುಲ್​ ಇಂಪ್ರೆಸ್​ ಮಾಡಿದ್ದಾರೆ. ಫುಲ್​ ಖುಷ್​ ಆಗಿರುವ ಟೀಮ್​ ಮ್ಯಾನೇಜ್​ಮೆಂಟ್​ ಅಭಿಷೇಕ್​ಗೆ ಇದೀಗ ಬಂಪರ್​​ ಉಡುಗೊರೆ ನೀಡೋಕೆ ರೆಡಿಯಾಗಿದೆ. ಇಷ್ಟು ದಿನ ಟಿ20 ಫಾರ್ಮೆಟ್​ಗೆ ಮಾತ್ರ ಸೀಮಿತವಾಗಿದ್ದ ಅಭಿಷೇಕ್​ಗೆ ಒನ್​ ಡೇ ಕ್ರಿಕೆಟ್​​ಗೆ ಸೆಲೆಕ್ಟ್​ ಮಾಡೋ ಚಿಂತನೆ ನಡೆದಿದೆ. 

ಅರಬ್ಬರ ನಾಡಲ್ಲಿ ಅಬ್ಬರಿಸಿದ ಅಭಿಷೇಕ್​ಗೆ ಆಸ್ಟ್ರೇಲಿಯಾ​ ಟಿಕೆಟ್​​.!

ಅಕ್ಟೋಬರ್​ನಲ್ಲಿ ಟೀಮ್​ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಲಿದ್ದು, ಅಲ್ಲಿ ಒನ್​ ಡೇ ಹಾಗೂ ಟಿ20 ಸರಣಿಗಳನ್ನ ಆಡಲಿದೆ. ಏಷ್ಯನ್​ ಸಮರದಲ್ಲಿ ಮಿಂಚಿರುವ ಅಭಿಷೇಕ್​ ಶರ್ಮಾಗೆ ಒನ್​ ಡೇ ತಂಡದಲ್ಲಿ ಸ್ಥಾನ ನೀಡಲು ಚರ್ಚೆಗಳು ನಡೆದಿದೆ. ಟಿ20 ಫಾರ್ಮೆಟ್​ನಲ್ಲಿ ಮಿಂಚಿರೋ ಅಭಿಷೇಕ್​ ಲಿಸ್ಟ್​ ಎ ಕ್ರಿಕೆಟ್​ನಲ್ಲಿ ಉತ್ತಮ ರೆಕಾರ್ಡ್​ ಹೊಂದಿದ್ದಾರೆ. ಹೀಗಾಗಿಯೇ ಚೀಫ್​ ಸೆಲೆಕ್ಟರ್​​ ಅಜಿತ್​ ಅಗರ್ಕರ್​​, ಹೆಡ್​ ಕೋಚ್​​ ಗೌತಮ್​ ಗಂಭೀರ್ ಈ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ದು, ಅಭಿಷೇಕ್​ಗೆ ಸ್ಥಾನ ಕಲ್ಪಿಸಲು ನಿರ್ಧರಿಸಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.  

Advertisment

ವರ್ಕೌಟ್​ ಆಗುತ್ತಾ ಮ್ಯಾನೇಜ್​ಮೆಂಟ್​​ನ ಈ ಪ್ಲಾನ್​​.?

ಏಕದಿನ ತಂಡದ ನಾಯಕ ರೋಹಿತ್​ ಶರ್ಮಾ, ಶುಭ್​ಮನ್​ ಗಿಲ್​ ತಂಡದ ಫಸ್ಟ್​ ಚಾಯ್ಸ್​ ಓಪನರ್ಸ್​ ಆಗಿದ್ದಾರೆ. ಬ್ಯಾಕ್​ ಅಪ್​ ಓಪನರ್​ ಆಗಿ ಯಶಸ್ವಿ ಜೈಸ್ವಾಲ್​ ಇದ್ದಾರೆ.  ಹೀಗಾಗಿ ಅಭಿಷೇಕ್​ ಶರ್ಮಾನ ಸೆಲೆಕ್ಟ್​ ಮಾಡೋ ಪ್ಲಾನ್​ ವರ್ಕೌಟ್​ ಆಗುತ್ತಾ ಎಂಬ ಪ್ರಶ್ನೆಯಿದೆ. ಆದ್ರೆ, ಈಗಾಗಲೇ ಜೈಸ್ವಾಲ್​ಗೆ ರೆಡ್​ಬಾಲ್​​ ಕ್ರಿಕೆಟ್​ ಮೇಲೆ ಮಾತ್ರ ಗಮನವಹಿಸುವಂತೆ ಸೂಚಿಸಲಾಗಿದೆ. ಹೀಗಾಗಿ ಅಭಿಷೇಕ್​ನ ಬ್ಯಾಕ್​ ಅಪ್​ ಓಪನರ್​ ಆಗಿ ಸೆಲೆಕ್ಟ್​ ಮಾಡೋ ಸಾಧ್ಯತೆ ದಟ್ಟವಾಗಿದೆ. 

ಮತ್ತೊಬ್ಬ ಸೆಹ್ವಾಗ್​ ಮಾಡಿ.. ಮ್ಯಾನೇಜ್​ಮೆಂಟ್​ಗೆ ಸೂಚನೆ.!

ಅಭಿಷೇಕ್​ ಶರ್ಮಾ ಆರ್ಭಟಕ್ಕೆ ಬಿಸಿಸಿಐ ಬಾಸ್​​ಗಳು ಕೂಡ ಕ್ಲೀನ್​ಬೋಲ್ಡ್​ ಆಗಿದ್ದಾರೆ. ಈಗಾಗಲೇ ಟೀಮ್​ ಮ್ಯಾನೇಜ್​ಮೆಂಟ್​​ಗೆ ಸೂಚನೆ ಕಳುಹಿಸಿದ್ದಾರೆ. ಟೀಮ್ ಇಂಡಿಯಾದ ಮಾಜಿ ಓಪನರ್​​ ವಿರೇಂದ್ರ ಸೆಹ್ವಾಗ್​ರಂತೆ ಮತ್ತೊಬ್ಬ ಆಲ್​​​ಫಾರ್ಮೆಟ್​​​ ವಿಸ್ಪೋಟಕ ಓಪನರ್​ ಆಗಿ ತಯಾರು ಮಾಡಿ ಎಂದು ಸೂಚನೆ ಕಳುಹಿಸಿದ್ದಾರೆ. ಈ ನಿಟ್ಟಿನಲ್ಲಿ ಟೀಮ್​ ಮ್ಯಾನೇಜ್​ಮೆಂಟ್​​ ಕಾರ್ಯಪ್ರವೃತ್ತವಾಗಿದೆ ಕೂಡ.

ಇದನ್ನೂ ಓದಿ: ಟೀಮ್ ಇಂಡಿಯಾ vs ಶ್ರೀಲಂಕಾ; ಹೆಡ್​ ಟು ಹೆಡ್​ ಹೇಗಿದೆ.. ಯಾವ ತಂಡಕ್ಕೆ ಎಷ್ಟು ಜಯ?

Advertisment

ABHISHEK_SHARMA_50

ಅಭಿಷೇಕ್​ ಶರ್ಮಾ ಲೆಫ್ಟ್​ ಹ್ಯಾಂಡ್​​ ಬ್ಯಾಟರ್​, ಸೆಹ್ವಾಗ್​ ರೈಟ್​ ಹ್ಯಾಂಡ್​ ಬ್ಯಾಟರ್​ ಅನ್ನೋದನ್ನ ಬಿಟ್ರೆ ಬೇರೆ ಯಾವುದೇ ವ್ಯತ್ಯಾಸವಿಲ್ಲ. ಇಬ್ಬರ ಬ್ಯಾಟಿಂಗ್​ ಸ್ಟೇಲ್​ ಸೇಮ್ ಟು ಸೇಮ್​.. ಸೆಹ್ವಾಗ್​ ಹೇಗೆ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿ ಅಕೌಂಟ್​ ಓಪನ್​ ಮಾಡ್ತಿದ್ರೋ, ಅಭಿಷೇಕ್​ ಶರ್ಮಾ ಕೂಡ ಅಷ್ಟೇ.. ಬೌಂಡರಿ, ಸಿಕ್ಸರ್​ನಲ್ಲೇ ರನ್​ ಖಾತೆ ತೆಗೆಯುತ್ತಾರೆ. ಹಾಫ್​ ಸೆಂಚುರಿ, ಸೆಂಚುರಿ ಹೊಸ್ತಿಲ್ಲಿದ್ರೂ, ಬೌಂಡರಿ, ಸಿಕ್ಸರ್​​ ಬಾರಿಸೋಕೆ ಕಿಂಚಿತ್ತೂ ಹಿಂಜರಿಯಲ್ಲ. ಫಿಯರ್​​ಲೆಸ್​​ ಬ್ಯಾಟಿಂಗ್​ ವಿಚಾರದಲ್ಲಿ ಇಬ್ಬರೂ ಸೇಮ್​ ಟು ಸೇಮ್​. 

ಅಭಿಷೇಕ್​ ಶರ್ಮಾನ ಆಲ್​​​ಫಾರ್ಮೆಟ್​​​ ಪ್ಲೇಯರ್​ ಆಗಿ ಬೆಳೆಸೋಕೆ ಹೊರಟಿರೋ ಬಿಸಿಸಿಐನ ನಿರ್ಧಾರ ಸ್ವಾಗತಾರ್ಹವಾದುದು. ಈಗಾಗಲೇ ಟಿ20 ಸಾಮರ್ಥ್ಯ ನಿರೂಪಿಸಿರೋ ಅಭಿಷೇಕ್​, ಫಸ್ಟ್​ ಕ್ಲಾಸ್​ ಹಾಗೂ ಲಿಸ್ಟ್​ ಎ ಕ್ರಿಕೆಟ್​ನಲ್ಲಿ ಉತ್ತಮ ಸಾಧನೆ ಮಾಡಿರೋ ರೆಕಾರ್ಡ್​ ಹೊಂದಿದ್ದಾರೆ. ಸೆಹ್ವಾಗ್​ ರೀತಿಯ ಒಬ್ಬ ಡೇರಿಂದ ಓಪನರ್​ ಟೀಮ್​ ಇಂಡಿಯಾಗೆ ಬೇಕಿದೆ. ಇದಕ್ಕೆ ಅಭಿಷೇಕ್​ ಉತ್ತಮ ಆಯ್ಕೆ ಬೇರೊಬ್ಬ ಇಲ್ಲ. 

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Asia Cup 2025 Asia cup final Abhishek Sharma IND vs SL
Advertisment
Advertisment
Advertisment