/newsfirstlive-kannada/media/media_files/2025/09/26/surya_asalanka-2025-09-26-15-58-15.jpg)
ಏಷ್ಯಾ ಕಪ್​ ಟೂರ್ನಿಯಲ್ಲಿ ಟೀಮ್ ಇಂಡಿಯಾ ಹಾಗೂ ಪಾಕಿಸ್ತಾನ ಈಗಾಗಲೇ ಫೈನಲ್​ಗೆ ಎಂಟ್ರಿಕೊಟ್ಟಿವೆ. ಇಂದಿನ ಪಂದ್ಯ ಯಾವುದಕ್ಕೂ ಉಪಯೋಗ ಇಲ್ಲ ಎಂದರೂ ನಿಯಮದ ಪ್ರಕಾರ ಆಡಲೇಬೇಕು. ಸೂರ್ಯಕುಮಾರ್ ನೇತೃತ್ವದ ತಂಡದಲ್ಲಿ ಇಂದು ದೊಡ್ಡ ಮಟ್ಟದ ಬದಲಾವಣೆಗಳನ್ನು ಮಾಡುವ ಸಾಧ್ಯತೆ ಕಾಣುತ್ತಿದೆ. ಇದರ ನಡುವೆ ಶ್ರೀಲಂಕಾ ಹಾಗೂ ಟೀಮ್ ಇಂಡಿಯಾದ ಬಲಾಬಲ ಹೇಗಿದೆ ಎನ್ನುವ ಮಾಹಿತಿ ಇದೆ.
ಸದ್ಯ ನಡೆಯುತ್ತಿರುವ ಏಷ್ಯಾ ಕಪ್​ನಲ್ಲೂ ಟೀಮ್ ಇಂಡಿಯಾವೇ ಟಾಪ್​ನಲ್ಲಿದೆ. ಸತತ ಗೆಲುವಿನ ಅಲೆಯಲ್ಲಿರುವ ಸೂರ್ಯಕುಮಾರ್ ಪಡೆ ಇಂದು ಕೂಡ ವಿಜಯದ ನಿರೀಕ್ಷೆಯಲ್ಲಿದೆ. ಇನ್ನು ಈವರೆಗೆ ಭಾರತ ಹಾಗೂ ಶ್ರೀಲಂಕಾ ನಡುವೆ ಟಿ20 ಪಂದ್ಯಗಳು ನಡೆದಿದ್ದು ಹೆಚ್ಚು ಬಾರಿ ಟೀಮ್ ಇಂಡಿಯಾನೇ ಮೇಲುಗೈ ಸಾಧಿಸಿದೆ. ಶ್ರೀಲಂಕಾ ಪ್ರತಿ ಬಾರಿಯೂ ಮಕಾಡೆ ಮಲಗಿರುವುದು ಟಿ20 ಇತಿಹಾಸ ಹೇಳುತ್ತದೆ.
ಇದನ್ನೂ ಓದಿ: ಟೀಮ್ ಇಂಡಿಯಾ ಜಯಭೇರಿ.. ಪಾಕ್​ಗೆ ಮತ್ತೆ ಮುಖಭಂಗ, ತಲೆ ತಗ್ಗಿಸಿದ ಬದ್ಧ ವೈರಿ..!
ಭಾರತ- ಶ್ರೀಲಂಕಾ ಟಿ20 ಪಂದ್ಯಗಳ ಬಲಾಬಲ ಹೇಗಿದೆ?
ಒಟ್ಟು ಪಂದ್ಯಗಳು | 32 |
ಭಾರತದ ಗೆಲುವು | 21 |
ಶ್ರೀಲಂಕಾ ಗೆಲುವು | 9 |
ಪಂದ್ಯ ಫಲಿತಾಂಶ ಇಲ್ಲ | 01 |
ಡ್ರಾ ಆಗಿರುವ ಪಂದ್ಯ | 01 |
2017ರಲ್ಲಿ ಇಂದೋರ್​ನಲ್ಲಿ ನಡೆದ ಟಿ20 ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಟೀಮ್ ಇಂಡಿಯಾ ಭರ್ಜರಿ ಬ್ಯಾಟಿಂಗ್ ಮಾಡಿ 5 ವಿಕೆಟ್​​ಗೆ 260 ರನ್​ ಗಳಿಸಿತ್ತು. ಇದೇ ರನ್​ ಈವರೆಗೆ ಎರಡು ತಂಡಗಳ ನಡುವೆ ಅತ್ಯಧಿಕವಾದ ಸ್ಕೋರ್ ಆಗಿದೆ. ಒಮ್ಮೆ ಭಾರತ 81 ರನ್​ಗೆ ಆಟ ಮುಗಿಸಿದ್ರೆ, ಶ್ರೀಲಂಕಾ 82 ರನ್​ಗೆ ಆಲೌಟ್ ಆಗಿತ್ತು. ಇದು ಎರಡು ತಂಡಗಳ ಅತ್ಯಂತ ಕಡಿಮೆ ಸ್ಕೋರ್ ಆಗಿದೆ.
ದುಬೈ ಇಂಟರ್​​ನ್ಯಾಷನಲ್​ ಸ್ಟೇಡಿಯಂನಲ್ಲಿ ಇಂದು ರಾತ್ರಿ 8 ಗಂಟೆಗೆ ಭಾರತ ಹಾಗೂ ಪಾಕಿಸ್ತಾನ ನಡುವೆ ಏಷ್ಯಾಕಪ್​ನ ಸೂಪರ್-4 ಪಂದ್ಯ ನಡೆಯಲಿದೆ.
ಭಾರತದ ಸಂಭಾವ್ಯ ಪ್ಲೇಯಿಂಗ್​- 11
ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಶುಭ್​ಮನ್ ಗಿಲ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ, ಕುಲದೀಪ್ ಯಾದವ್.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ