ನಿರಂತರ ಮಳೆ, ಕುಸಿದ ಬೃಹತ್ ಬೆಟ್ಟ.. 1000ಕ್ಕೂ ಹೆಚ್ಚು ಜನ ಭೂ ಸಮಾಧಿ, ಒಬ್ಬನು ಮಾತ್ರ..

ಬೆಟ್ಟ ಇಡೀ ಗ್ರಾಮದ ಮೇಲೆ ಕುಸಿದು ಬಿದ್ದಿದ್ದು 1 ಸಾವಿರಕ್ಕೂ ಹೆಚ್ಚು ಜನ ಭೂ ಸಮಾಧಿಯಾಗಿದ್ದಾರೆ. ಅದೃಷ್ಟ ಎನ್ನುವಂತೆ ಓರ್ವ ಮಾತ್ರ ಬದುಕುಳಿದಿದ್ದಾನೆ. ಈ ಗ್ರಾಮವು ಒಂದು ಕಾಲಕ್ಕೆ ಸಿಟ್ರಸ್ ಉತ್ಪಾದನೆಗೆ ಹೆಸರುವಾಸಿ.

author-image
Bhimappa
SUDAN_1000
Advertisment

ನಿರಂತರವಾದ ಮಳೆಯಿಂದ ಬೆಟ್ಟವೊಂದು ಗ್ರಾಮದ ಮೇಲೆ ಕುಸಿದು ಬಿದ್ದ ಪರಿಣಾಮ ಸಾವಿರಕ್ಕೂ ಅಧಿಕ ಗ್ರಾಮಸ್ಥರು ಜೀವ ಬಿಟ್ಟಿದ್ದಾರೆ. ಪವಾಡವೆಂಬಂತೆ ಇಡೀ ಗ್ರಾಮದಲ್ಲಿ ಒಬ್ಬನೇ ಒಬ್ಬ ಮಾತ್ರ ಬದುಕುಳಿದಿದ್ದಾನೆ. ಈ ದುರ್ಘಟನೆಯು ಪಶ್ಚಿಮ ಸುಡಾನ್​ನ ಉಮೋ ಜಿಲ್ಲೆಯ ಟಾರ್ಸಿನ್ ಗ್ರಾಮದ ಮರ್ರಾ ಪರ್ವತ ಪ್ರದೇಶದಲ್ಲಿ ನಡೆದಿದೆ. 

ಮರ್ರಾ ಪರ್ವತ ಪ್ರದೇಶದಲ್ಲಿ ಟಾರ್ಸಿನ್ ಗ್ರಾಮದಲ್ಲಿ ಸಾವಿರಾರು ಜನರು ಹಲವಾರು ವರ್ಷಗಳಿಂದ ಜೀವನ ನಡೆಸುತ್ತಿದ್ದರು. ಆದರೆ ಆಗಸ್ಟ್​ 31 ರಂದು ದೊಡ್ಡ ದುರಂತವೊಂದು ನಡೆದಿದೆ. ನಿರಂತರ ಮಳೆಯಿಂದಾಗಿ ದೊಡ್ಡ ಬೆಟ್ಟವೊಂದು ಕುಸಿದು ಇಡೀ ಗ್ರಾಮದ ಮೇಲೆ ಬಿದ್ದಿದೆ. ಇದರ ಪರಿಣಾಮ ಗ್ರಾಮದಲ್ಲಿದ್ದ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಜೊತೆಗೆ ಸಾಕು ಪ್ರಾಣಿಗಳು ಕೂಡ ಜೀವ ಕಳೆದುಕೊಂಡಿವೆ ಎಂದು ಹೇಳಲಾಗಿದೆ. 

ಇದನ್ನೂ ಓದಿ:ಮಿಲೇನಿಯಮ್ ಸಿಟಿಯಲ್ಲಿ 20 Km ಟ್ರಾಫಿಕ್​.. ಸವಾರರು, ಚಾಲಕರು, ಜನರು ಸುಸ್ತೋ ಸುಸ್ತು..!

SUDAN

ಈ ಸಂಬಂಧ ಮಾಹಿತಿ ನೀಡಿರುವ ಸುಡಾನ್ ವಿಮೋಚನಾ ಚಳುವಳಿ/ಸೇನೆಯು ತೀವ್ರ ದುಃಖ ಮತ್ತು ಕಳವಳ ವ್ಯಕ್ತಪಡಿಸಿದೆ. ಗ್ರಾಮದ ಮೇಲೆ ಇಡೀ ಬೆಟ್ಟವೇ ಕುಸಿದು ಬಿದ್ದಿದ್ದು 1 ಸಾವಿರಕ್ಕೂ ಹೆಚ್ಚು ಜನ ಭೂ ಸಮಾಧಿಯಾಗಿದ್ದಾರೆ. ಅದೃಷ್ಟ ಎನ್ನುವಂತೆ ಓರ್ವ ಮಾತ್ರ ಬದುಕುಳಿದಿದ್ದಾನೆ. ಈ ಟಾರ್ಸಿನ್ ಗ್ರಾಮವು ಒಂದು ಕಾಲಕ್ಕೆ ಸಿಟ್ರಸ್ ಉತ್ಪಾದನೆಗೆ ಹೆಸರುವಾಸಿಯಾಗಿತ್ತು. ಹೀಗಾಗಿ ಅಲ್ಲಿನವರಿಗೆ ಈ ಗ್ರಾಮ ಪರಿಚಿತ. ಇದೀಗ ಬೆಟ್ಟ ಕುಸಿದಿದ್ದರಿಂದ ಗ್ರಾಮವೇ ಸಂಪೂರ್ಣ ಭೂ ಸಮಾಧಿಯಾಗಿದ್ದು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಗ್ರಾಮದಲ್ಲಿದ್ದ ಮಹಿಳೆಯರು, ಮಕ್ಕಳು, ಪುರುಷರು, ವೃದ್ಧರು, ಗ್ರಾಮಸ್ಥರು ಸಾಕಿದಂತ ಸಾಕು ಪ್ರಾಣಿಗಳು ಎಲ್ಲವೂ ಭೂ ಸಮಾಧಿಯಾಗಿವೆ. ಗುಡ್ಡ ಕುಸಿದು ಬಿದ್ದಾಗ ಒಂದು ಕ್ಷಣ ಕೂಗಿ ಹೇಳಲು ಆಗಲಿಲ್ಲ. ಸದ್ಯ ಬೆಟ್ಟದಡಿ ಇರುವಂತ ಮೃತದೇಹಗಳನ್ನು ತೆಗೆಯಲು ಸಹಾಯ ಮಾಡುವಂತೆ ವಿಶ್ವಸಂಸ್ಥೆ ಹಾಗೂ ನೆರವು ನೀಡುವಂತಹ ಅಂತರಾಷ್ಟ್ರೀಯ ಸಂಸ್ಥೆಗಳಿಂದ ಸಹಾಯವನ್ನು ಕೇಳಲಾಗುತ್ತಿದೆ. ಈ ಹಿಂದೆ ಯುದ್ಧದ ಸಮಯದಲ್ಲಿ ಬದುಕುಳಿದವರು ಬಂದು ಈ ಗ್ರಾಮದಲ್ಲಿ ನೆಲೆಸಿದ್ದರು ಎಂದು ಹೇಳಲಾಗಿದೆ.  

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Jammu heavy rain Karnataka Rains Heavy Rain Landslide
Advertisment