ಮಿಲೇನಿಯಮ್ ಸಿಟಿಯಲ್ಲಿ 20 Km ಟ್ರಾಫಿಕ್​.. ಸವಾರರು, ಚಾಲಕರು, ಜನರು ಸುಸ್ತೋ ಸುಸ್ತು..!

ಟ್ರಾಫಿಕ್ ಎಂದರೆ ನಗರದಲ್ಲಿ ಇದ್ದವರಿಗೆ ಒಮ್ಮೆ ಎದೆ ಬಡಿತ ನಿಂತು ಹೋದಂಗೆ ಆಗುತ್ತದೆ. ಏಕೆಂದರೆ ಬಿಸಿಲು, ಮಳೆ, ಚಳಿಯಲ್ಲಿ ಆ ರಾಕ್ಷಿಸಿಯಂತಹ ಟ್ರಾಫಿಕ್​ನಲ್ಲಿ ನಿಂತವರಿಗೆ ಆ ಭಯಾನಕವಾದ ಅನುಭವ ಗೊತ್ತಿರುತ್ತದೆ.

author-image
Bhimappa
Traffic_gurugram
Advertisment

ಚಂಡೀಗಢ: ಟ್ರಾಫಿಕ್ ಎಂದರೆ ನಗರದಲ್ಲಿ ಇದ್ದವರಿಗೆ ಒಮ್ಮೆ ಎದೆ ಬಡಿತ ನಿಂತು ಹೋದಂಗೆ ಆಗುತ್ತದೆ. ಏಕೆಂದರೆ ಬಿಸಿಲು, ಮಳೆ, ಚಳಿಯಲ್ಲಿ ಆ ರಾಕ್ಷಿಸಿಯಂತಹ ಟ್ರಾಫಿಕ್​ನಲ್ಲಿ ನಿಂತವರಿಗೆ ಆ ಭಯಾನಕವಾದ ಅನುಭವ ಗೊತ್ತಿರುತ್ತದೆ. ಟ್ರಾಫಿಕ್​ನಲ್ಲಿ ವಾಹನದೊಳಗೆ ಒಮ್ಮೆ ಸಿಕ್ಕಿಕೊಂಡರೇ ದೇವರೇ ಕಾಪಾಡಬೇಕು ಅಷ್ಟೇ. ಸದ್ಯ ಇಂತಹದ್ದೇ ಬೃಹತ್ ಟ್ರಾಫಿಕ್​ ಗುರುಗ್ರಾಮ ನಗರದಲ್ಲಿ ನಡೆದಿದ್ದು ಎತ್ತ ನೋಡಿದರೂ ವಾಹನಗಳೇ.. ವಾಹನಗಳು. 

ಹರಿಯಾಣದ ಗುರುಗ್ರಾಮ ನಗರದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಇದರಿಂದ ತುಸು ಬೇಗ ಮನೆಗೆ ಹೋಗಬೇಕು ಎಂದು ರಸ್ತೆಗೆ ಇಳಿದವರು ರಾತ್ರಿ ಎಷ್ಟೋ ಸಮಯ ಆದರೂ ಮನೆಗೆ ತಲುಪಲಿಲ್ಲ. ಇದಕ್ಕೆ ಕಾರಣ ಟ್ರಾಫಿಕ್​. ಮಿಲೇನಿಯಂ ಸಿಟಿ ಎಂದೇ ಖ್ಯಾತಿಯಾದ ಗುರುಗ್ರಾಮ ನಗರದಲ್ಲಿ ನಿನ್ನೆ ಎಡೆ ಬಿಡದೇ ಮಳೆ ಸುರಿದಿದೆ. ಇದರಿಂದ ನಗರದ ರಾಷ್ಟ್ರೀಯ ಹೆದ್ದಾರಿ- 8ರಲ್ಲಿ ಸುಮಾರು 20 ಕಿಲೋಮೀಟರ್ ಅಷ್ಟು ಟ್ರಾಫಿಕ್ ಜಾಮ್ ಆಗಿದೆ ಎನ್ನಲಾಗಿದೆ. ಡ್ರೈವರ್​​ಗಳು, ಸವಾರರು, ಪ್ರಯಾಣಿಕರು, ಆ್ಯಂಬುಲೆನ್ಸ್​ ಸೇರಿದಂತೆ ಎಲ್ಲರೂ 6 ಗಂಟೆಗಳ ಕಾಲ ಟ್ರಾಫಿಕ್​ನಲ್ಲೇ ಕಳೆಯಬೇಕಾಯಿತು.    

ಇದನ್ನೂ ಓದಿ:ಭಯಾನಕ ಕಾರು ಅಪಘಾತದಲ್ಲಿ ಕೊನೆಯುಸಿರೆಳೆದ ಕರ್ನಾಟಕದ ಖ್ಯಾತ ಬಾಡಿ ಬಿಲ್ಡರ್

Traffic_gurugram_1

ಜೋರು ಮಳೆಗೆ ರಸ್ತೆಗಳು ನೀರಿನಿಂದ ತುಂಬಿಕೊಂಡಿದ್ದರಿಂದ ವಾಹನಗಳು ಯಾವ ಕಡೆ ಹೋಗುವುದು ಎಂದು ತಿಳಿಯಲಿಲ್ಲ. ನಗರದಲ್ಲಿನ ಈ ಬೃಹತ್​ ಟ್ರಾಫಿಕ್​ನಿಂದ ಎಲ್ಲರೂ ಸಮಸ್ಯೆ ಅನುಭವಿಸಿದರು. ಯಾವಾಗ ಮನೆ ಸೇರಿಕೊಳ್ಳುತ್ತಿವೋ ಎಂದು ಚಾಲಕರು ತಮ್ಮ ತಮ್ಮ ವಾಹನದಲ್ಲಿ ಕುಳಿತು ಸುತ್ತ ನೋಡುತ್ತಿದ್ದರು. ಸದ್ಯ ಈ ಸಂಬಂಧದ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿದೆ. ನೋಡುಗರ ಕಣ್ಣಿಗೆ ವಿಡಿಯೋ ಚೆಂದ ಕಾಣಿಸಿದರೂ ಆ ರಣಭೀಕರ ಟ್ರಾಫಿಕ್​ನಲ್ಲಿ ಇದ್ದವರಿಗೆ ಬಂದ ಕಷ್ಟ ಯಾರಿಗೂ ಬೇಡವೇ ಬೇಡ.  

ಇನ್ನು ಈ ಸಂಬಂಧ ಕಾಂಗ್ರೆಸ್​ನ ಹಿರಿಯ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ವಿಡಿಯೋವನ್ನು ಶೇರ್ ಮಾಡಿದ್ದು ಕೇವಲ 2 ಗಂಟೆಯಲ್ಲಿ 20 ಕಿಲೋ ಮೀಟರ್ ಟ್ರಾಫಿಕ್ ಆಗಿದೆ. ಸಿಎಂ ಕೇವಲ ಹೆಲಿಕಾಪ್ಟರ್​ನಲ್ಲೇ ಹಾರಾಡುತ್ತಾರೆ. ಟ್ರಿಪಲ್ ಎಂಜಿನ್ ಸರ್ಕಾರ ಮಿಲೇನಿಯಮ್ ಸಿಟಿಯಲ್ಲಿ ಫೇಲ್ ಆಗಿದೆ. ನಗರದಲ್ಲಿ ಒಳಚರಂಡಿ ಸೇರಿದಂತೆ ಯಾವುದನ್ನು ಸರಿಯಾಗಿ ನಿರ್ವಹಿಸಿಲ್ಲ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bangalore traffic fine concession Traffic
Advertisment