/newsfirstlive-kannada/media/media_files/2025/09/02/klr_body_bilder-2025-09-02-06-58-00.jpg)
ಕೋಲಾರ: ಕರ್ನಾಟಕದ ಖ್ಯಾತ ಬಾಡಿ ಬಿಲ್ಡರ್ವೊಬ್ಬರು ಅಮೆರಿಕದಲ್ಲಿ ಭೀಕರ ಕಾರು ಅಪಘಾತದಲ್ಲಿ ಜೀವ ಕಳೆದುಕೊಂಡಿದ್ದಾರೆ. ಇತ್ತೀಚೆಗಷ್ಟೇ ತಮ್ಮ ಕುಟುಂಬವನ್ನು ಅಮೆರಿಕಕ್ಕೆ ಕರೆದುಕೊಂಡು ಹೋಗಿದ್ದರು. ಇದರ ಬೆನ್ನಲ್ಲೇ ಈ ದುರ್ಘಟನೆ ಸಂಭವಿಸಿದೆ.
ಕೋಲಾರದ ಗಾಂಧಿನಗರದ ಚಲಪತಿ, ಮುನಿಯಮ್ಮ ದಂಪತಿ ಪುತ್ರನಾದ ಸುರೇಶ್ ಕುಮಾರ್ (42) ಭಯಾನಕ ಕಾರು ಅಪಘಾತದಲ್ಲಿ ಜೀವ ಕಳೆದುಕೊಂಡವರು. ಬಾಡಿ ಬಿಲ್ಡರ್ ಆಗಿದ್ದ ಸುರೇಶ್ ಕುಮಾರ್ ಅವರು ಅಮೆರಿಕದ ಫ್ಲೋರಿಡಾ ಹಾಗೂ ಟೆಕ್ಸಾಸ್ ನಗರದ ಮಧ್ಯೆ ಕಾರಿನಲ್ಲಿ ಕೆಲಸದ ನಿಮಿತ್ತ ತೆರಳುತ್ತಿದ್ದರು.
ಇದೇ ವೇಳೆ ಭೀಕರವಾದ ರಸ್ತೆ ಅಪಘಾತ ಸಂಭವಿಸಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮೂರು ದಿನಗಳ ಕಾಲ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದುಕೊಂಡಿದ್ದರು. ಆದರೆ ಅಪಘಾತದಲ್ಲಿ ತೀವ್ರವಾದ ಪೆಟ್ಟುಗಳು ಆಗಿದ್ದರಿಂದ ಚಿಕಿತ್ಸೆ ಫಲಕಾರಿ ಆಗದೇ ಬಾಡಿ ಬಿಲ್ಡರ್ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ: ಇದೇ ತಿಂಗಳಿಂದ ಬಿಗ್ಬಾಸ್- 12 ಆರಂಭ.. ಬರ್ತ್ಡೇಯಲ್ಲಿ ಕಿಚ್ಚ ಸುದೀಪ್ ಹೇಳಿದ್ದೇನು?
ಸುರೇಶ್ ಕುಮಾರ್ ಬಾಡಿ ಬಿಲ್ಡರ್ ಜೊತೆಗೆ ಮಾಡೆಲಿಂಗ್ನಲ್ಲೂ ಗುರುತಿಸಿಕೊಂಡಿದ್ದರು. ಇಷ್ಟೇ ಅಲ್ಲದೇ, ಫ್ಲೋರಿಡಾದಲ್ಲಿ ಫಿಸಿಯೋಥೆರಪಿಸ್ಟ್ ಆಗಿದ್ದರು. ಸ್ಯಾಂಡಲ್ವುಡ್ನ ಖ್ಯಾತ ಸಿನಿಮಾ ನಟ, ನಟಿಯರಿಗೆ ದೈಹಿಕ ತರಬೇತುದಾರರಾಗಿ ಕಾರ್ಯನಿರ್ವಹಿಸಿದ್ದರು. ತಮ್ಮ ವೈಯಕ್ತಿಕ ಜೀವನದಲ್ಲಿ ದೆಹಲಿ ಮೂಲದ ಯುವತಿಯನ್ನು ಪ್ರೀತಿಸಿ ವಿವಾವಾಗಿದ್ದರು.
ದೇಹದಾರ್ಢ್ಯ ಪಟು ಸುರೇಶ್ ಬಾಬು ರಾಜ್ಯ ಮಟ್ಟದ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದರು. ನಂತರ ರೂಪದರ್ಶಿಯಾಗಿ ದೇಶ ವಿದೇಶಗಳಲ್ಲಿ ಖ್ಯಾತಿ ಹೊಂದಿದ್ದರು. ಇತ್ತೀಚೆಗಷ್ಟೇ ಕೋಲಾರಕ್ಕೆ ಬಂದು ಪತ್ನಿ ಹಾಗೂ ಮಕ್ಕಳನ್ನು ಜೊತೆಯಲ್ಲೇ ಯುಎಸ್ಗೆ ಕರೆದುಕೊಂಡು ಹೋಗಿದ್ದರು. ಇದರ ಬೆನ್ನಲ್ಲೇ ಸುರೇಶ್ ಕುಮಾರ್ ಅಪಘಾತದಲ್ಲಿ ನಿಧನರಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ