/newsfirstlive-kannada/media/media_files/2025/11/04/nepal-2025-11-04-07-57-51.jpg)
ಪ್ರಕೃತಿ ಯಾವಾಗ ಮುನಿಯುತ್ತೆ, ಯಾವಾಗ ಜನರ ಜೀವಗಳಿಗೆ ಸಂಚಕಾರ ತರುತ್ತೆ ಅನ್ನೋದು ಊಹಿಸೋಕು ಅಸಾಧ್ಯ. ಹೀಗೆ ತಮ್ಮ ಸಾವು ಪರ್ವತದ ಮೇಲೆ ಆಗುತ್ತೆ ಎಂಬ ಪರಿವಿಲ್ಲದೇ ನೇಪಾಳದಲ್ಲಿ ಹಿಮಪರ್ವತ ಏರಲು ಹೋದವರು ಜೀವಂತ ಸಮಾಧಿಯಾಗಿದ್ದಾರೆ.
ಮೋಡವೇ ಕಳಚಿ ಬಿದ್ದಂತೆ ಕಾಣ್ತಿರೋ ದಟ್ಟ ಹಿಮ
ಹಿಮಪಾತದ ಘೋರ ಅಷ್ಟೊಂದು ಭಯಾನಕವಾಗಿದೆ. ಸುಂದರವಾಗಿ ಕಾಣುವ ಹಿಮ ಉಗ್ರರೂಪ ತಾಳಿದ್ರೆ ಆಗೋದು ನಿಜಕ್ಕೂ ಅನಾಹುತ. ಈಗ ನಡೆದಿರೋದು ಹಾಲಿನಂತೆ ಕಾಣುವ ಸ್ನೋ ಹಾಲಾಹಲವಾಗಿ ಜೀವ ತೆಗೆದಿರೋ ನೈಜ ಸನ್ನಿವೇಶ.
/filters:format(webp)/newsfirstlive-kannada/media/media_files/2025/11/04/nepal_2-2025-11-04-07-58-00.jpg)
ಹಿಮಪಾತದಿಂದ 7 ಜನ ಪರ್ವತಾರೋಹಿಗಳು ಸಾವು
ನೇಪಾಳದಲ್ಲಿ ಭಾರೀ ಹಿಮಪಾತವಾಗಿ ದುರಂತ ನಡೆದುಹೋಗಿದೆ. ಹಿಮ ಪರ್ವತ ಏರಲು ಹೋಗಿದ್ದವರು ಸಾವಿನ ಮನೆಯ ಕದ ತಟ್ಟಿದ್ದಾರೆ. ಈಶಾನ್ಯ ನೇಪಾಳದ ಯಾಲುಂಗ್ ಶಿಖರದಲ್ಲಿ ಡೋಲ್ಮಾಖಾಂಗ್​ ಪರ್ವತ ಏರಲು ಪರ್ವತರೋಹಿಗಳು ತೆರಳುತ್ತಿದರು. ಇದರಲ್ಲಿ ವಿದೇಶಿ ಪರ್ವತರೋಹಿಗಳು ಭಾಗಿಯಾಗಿದ್ದರು.
ಹೀಗೆ ಪರ್ವತರೋಹಣ ಮಾಡುತ್ತಿರುವ ವೇಳೆ ಭಾರೀ ಹಿಮಪಾತವಾಗಿದೆ. ಹಿಮ ಜಾರಿ ರಭಸವಾಗಿ ನುಗ್ಗಿ ಬರ್ತಿದ್ದಂತೆ ಪರ್ವತರೋಹಣಕ್ಕೆ ತೆರಳಿದ್ದ 7 ಮಂದಿ ಪರ್ವತರೋಹಿಗಳು ಹಿಮದಲ್ಲಿ ಹುದುಗಿ ಹೋಗಿದ್ದಾರೆ. 7 ಮಂದಿಯೂ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಇದೆ. ಇನ್ನು ಪರ್ವತ ಏರಲು ಹೋಗಿದ್ದ ಐವರು ಪರ್ವತಾರೋಹಿಗಳು ಗಾಯಗೊಂಡಿದ್ದಾರೆ.
ಹಿಮಪಾತದಲ್ಲಿ ಸಾವನ್ನಪ್ಪಿದವರಲ್ಲಿ 3 ಮಂದಿ ಅಮೆರಿಕನ್ನರು, ಇಬ್ಬರು ನೇಪಾಳಿಗಳು, ಒಬ್ಬ ಇಟಾಲಿಯನ್, ಒಬ್ಬ ಕೆನಡಾ ಮೂಲದ ಪರ್ವತರೋಹಿಗಳು ಅಂತ ತಿಳಿದುಬಂದಿದೆ. ಪ್ರತಿಕೂಲ ಹವಾಮಾನದಿಂದ ಈ ದುರ್ಘಟನೆ ಸಂಭವಿಸಿದೆ.
ಇದನ್ನೂ ಓದಿ: ಟ್ರಾಫಿಕ್​ನಲ್ಲಿ 17 ವಾಹನಗಳಿಗೆ ಬೆಂಜ್ ಲಾರಿ ಡಿಕ್ಕಿ.. ಉಸಿರು ಚೆಲ್ಲಿದ 14 ಜನ, 13 ಮಂದಿ ಸ್ಥಿತಿ ಚಿಂತಾಜನಕ!
/filters:format(webp)/newsfirstlive-kannada/media/media_files/2025/11/04/nepal_1-2025-11-04-07-58-25.jpg)
ಈಶಾನ್ಯ ನೇಪಾಳದ ಯಾಲುಂಗ್ ಕ್ಯಾಂಪ್ ಸುಮಾರು 6 ಸಾವಿರದ 332 ಮೀಟರ್ ಎತ್ತರದಲ್ಲಿದೆ. ಸದ್ಯ ಹಿಮಪಾತದ ನಡುವೆಯೇ ನಾಪತ್ತೆಯಾದವರ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿದಿದೆ.
ಹಿಮ ಪರ್ವತಗಳು ನೋಡಲು ಎಷ್ಟು ಸುಂದರವೋ, ಅಷ್ಟೇ ದುರ್ಗಮ. ಆದ್ರೆ, ಹವ್ಯಾಸಿ ಪರ್ವತಾರೋಹಿಗಳು ತಮ್ಮ ಜೀವವನ್ನೇ ಪಣಕ್ಕಿಟ್ಟು ಪರ್ವತರೋಹಣ ಮಾಡುವ ಸಾಹಸ ಮಾಡ್ತಿರ್ತಾರೆ. ಆದ್ರೆ, ಹೀಗೆ ಪರ್ವತ ಏರಲು ಹೋದ ಜನರು ಹಿಮದಿಂದಲೇ ಪ್ರಾಣ ಬಿಡುವಂತೆ ಆಗಿರೋದು ನಿಜಕ್ಕೂ ದುರಂತ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
 Follow Us