/newsfirstlive-kannada/media/media_files/2025/10/11/pak_new-2025-10-11-15-08-31.jpg)
ಪಾಕಿಸ್ತಾನದಲ್ಲಿ ದಾಳಿಗಳು ಮುಂದುವರೆದಿದ್ದು ಮೊನ್ನೆ ಮೊನ್ನೆ ಅಷ್ಟೇ ಕ್ವೆಟ್ಟಾ ನಗರದಲ್ಲಿ ಕಾರು ಬಾಂಬ್​ ಸ್ಪೋಟಿಸಲಾಗಿತ್ತು. ಇದರ ಬೆನ್ನಲ್ಲೇ ಮತ್ತೊಂದು ದೊಡ್ಡ ದುರಂತ ನಡೆದಿದ್ದು ಪೊಲೀಸ್ ತರಬೇತಿ ಕೇಂದ್ರಕ್ಕೆ ಸ್ಫೋಟಕ ತುಂಬಿದ ಟ್ರಕ್​ ಅನ್ನು ನುಗ್ಗಿಸಿ ಭಯಾನಕವಾಗಿ ಸ್ಫೋಟಿಸಲಾಗಿದೆ. ಇದರ ಪರಿಣಾಮವಾಗಿ 7 ಪೊಲೀಸರ ಜೊತೆ 6 ಭಯೋತ್ಪಾದಕರು ಸಾವನ್ನಪ್ಪಿದ್ದಾರೆ.
ಪಾಕಿಸ್ತಾನದ ವಾಯುವ್ಯ ಭಾಗದಲ್ಲಿರುವ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಇರುವ ಪೊಲೀಸ್ ತರಬೇತಿ ಕೇಂದ್ರದ ಮುಖ್ಯ ದ್ವಾರದಲ್ಲಿ ಆತ್ಮಾಹುತಿ ದಾಳಿ ಮಾಡಲಾಗಿದೆ. ಸ್ಫೋಟಕಗಳನ್ನು ತುಂಬಿದ್ದ ಟ್ರಕ್​ ಅನ್ನು ತರಬೇತಿ ಕೇಂದ್ರದ ಮುಖ್ಯ ದ್ವಾರಕ್ಕೆ ನುಗ್ಗಿಸಿ ಸ್ಫೋಟಿಸಲಾಗಿದೆ. ಇದಾದ ಮೇಲೆ ಪೊಲೀಸರು ಹಾಗೂ ಭಯೋತ್ಪಾದಕರ ನಡುವೆ ಸತತ 5 ಗಂಟೆಗಳ ಕಾಲ ಗುಂಡಿನ ದಾಳಿ ನಡೆದಿದೆ.
ಶುಕ್ರವಾರ ರಾತ್ರಿ ನಡೆದ ದಾಳಿಯಲ್ಲಿ ಮೊದಲು 3ಕ್ಕೂ ಹೆಚ್ಚು ಉಗ್ರರು, 6 ಪೊಲೀಸರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಮತ್ತೊಬ್ಬ ಭದ್ರತಾ ಸಿಬ್ಬಂದಿನ ಉಗ್ರರು ಹತ್ಯೆ ಮಾಡಿದ್ದಾರೆ. 3 ಉಗ್ರರು ಬಲಿಯಾಗಿದ್ದಾರೆ. ಇದರಿಂದ ಒಟ್ಟು 7 ಪೊಲೀಸರು ಈಗಾಗಲೇ ಜೀವ ಕಳೆದುಕೊಂಡಿದ್ದು 13 ಪೊಲೀಸರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 6 ಉಗ್ರರು ಮಸಣ ಸೇರಿದ್ದಾರೆ ಎಂದು ಹೇಳಲಾಗುತ್ತಿದೆ.
ತರಬೇತಿ ನೇಮಕಾತಿದಾರರು ಹಾಗೂ ಸಿಬ್ಬಂದಿಯನ್ನ ಸುರಕ್ಷಿತಾ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಈ ಕಾರ್ಯಾಚರಣೆಯಲ್ಲಿ ಎಸ್​ಜಿ ಕಮಾಂಡೋ​ಗಳು, ಅಲ್​-ಬರ್ಕ್​ಪೋರ್ಸ್​, ಎಲೈಟ್​ ಪೋರ್ಸ್ ಮತ್ತು ಅಲ್ಲಿನ ಪೊಲೀಸರು ಭಾಗವಹಿಸಿದ್ದರು. ಟ್ರಕ್ ನಿಗ್ಗಿಸಿ ಸ್ಫೋಟಿಸಿರುವುದರಿಂದ ಸ್ಥಳದಲ್ಲಿ ಭಾರೀ ನಷ್ಟ ಉಂಟಾಗಿದೆ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ