/newsfirstlive-kannada/media/media_files/2025/10/11/gill_100-2025-10-11-13-30-49.jpg)
ವೆಸ್ಟ್​ ಇಂಡೀಸ್​ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್​ ಪಂದ್ಯದ ಎರಡನೇ ದಿನದಾಟದಲ್ಲಿ ಟೀಮ್ ಇಂಡಿಯಾದ ಕ್ಯಾಪ್ಟನ್​ ಶುಭ್​ಮನ್ ಗಿಲ್ ಅವರು ಅಮೋಘವಾದ ಸೆಂಚುರಿ ಬಾರಿಸಿದ್ದಾರೆ. ಈ ಮೂಲಕ ಟೆಸ್ಟ್​ ವೃತ್ತಿ ಜೀವನದಲ್ಲಿ 10ನೇ ಶತಕವನ್ನು ಗಿಲ್ ಗಳಿಸಿದರು. ಇನ್ನು ಬೃಹತ್​ ಮೊತ್ತದ ರನ್​ಗಳಿಗೆ ಟೀಮ್ ಇಂಡಿಯಾ ಇನ್ನಿಂಗ್ಸ್​ ಡಿಕ್ಲೇರ್ ಮಾಡಿಕೊಂಡಿದೆ.
ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವೆಸ್ಟ್​ ವಿರುದ್ಧದ ಟೆಸ್ಟ್​ ಪಂದ್ಯದಲ್ಲಿ ಶುಭ್​ಮನ್ ಗಿಲ್ ಅವರು ಈ ಸಾಧನೆ ಮಾಡಿದ್ದಾರೆ. ವೆಸ್ಟ್​ ಇಂಡೀಸ್​ ಬೌಲರ್​ಗಳ ವಿರುದ್ಧ ಕೆಂಡವಾದ ಶುಭ್​ಮನ್ ಗಿಲ್​ ಏಕದಿನ ಮಾದರಿಯಲ್ಲಿ ಬ್ಯಾಟಿಂಗ್ ಮಾಡಿದರು. ಇದರಿಂದ ಮೊದಲ ಇನ್ನಿಂಗ್ಸ್​ನಲ್ಲಿ 177 ಎಸೆತ ಎದುರಿಸಿದ ಗಿಲ್ 12 ಸೊಗಸಾದ ಬೌಂಡರಿಗಳು ಹಾಗೂ 1 ಭರ್ಜರಿ ಸಿಕ್ಸರ್​ನಿಂದ ಶತಕ ಬಾರಿಸಿದರು.
ವಿರಾಟ್ ಕೊಹ್ಲಿ ಅವರು ಒಂದೇ ವರ್ಷದಲ್ಲಿ 2017ರಲ್ಲಿ 5 ಶತಕ ಹಾಗೂ 2018ರಲ್ಲಿ 5 ಸೆಂಚುರಿಗಳನ್ನು ಬಾರಿಸಿದ್ದರು. ಇದಾದ ಮೇಲೆ ಇದೀಗ ಕ್ಯಾಪ್ಟನ್​ ಶುಭ್​​ಮನ್ ಗಿಲ್ ಅವರು 2025ರ ವರ್ಷದಲ್ಲಿ 5 ಶತಕ ಪೂರೈಸಿದ್ದಾರೆ. ಇದು ಅಲ್ಲದೇ ನಾಯಕನಾಗಿ ಗಿಲ್ ಅವರು 12 ಇನ್ನಿಂಗ್ಸ್​ನಲ್ಲಿ 5 ಬಾರಿ 100 ಗಳನ್ನು ಸಿಡಿಸಿದ್ದಾರೆ. ಗಿಲ್​ಗಿಂತ ವೇಗವಾಗಿ ಅಲಸ್ಟೈರ್ ಕುಕ್ (9 ಇನ್ನಿಂಗ್ಸ್) ಹಾಗೂ ಸುನಿಲ್ ಗವಾಸ್ಕರ್ (10 ಇನ್ನಿಂಗ್ಸ್) ಐದು ಶತಕ ಬಾರಿಸಿ ಮೊದಲಿಗರು ಆಗಿದ್ದಾರೆ.
ಇಂದಿನ ಇನ್ನಿಂಗ್ಸ್​ ಡಿಕ್ಲೇರ್ ಮಾಡಿಕೊಂಡ ಟೀಮ್ ಇಂಡಿಯಾ 5 ವಿಕೆಟ್​ಗೆ 518 ರನ್​ಗಳ ಗಳಿಸಿದೆ. ಇಂದಿಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಯಶಸ್ವಿ ಜೈಸ್ವಾಲ್, ಗಿಲ್ ಜೋಡಿ ಜಾಸ್ತಿ ಸಮಯ ಆಡಲಿಲ್ಲ. ಏಕೆಂದರೆ ಜೈಸ್ವಾಲ್ ಇವತ್ತು ಕೇವಲ 2 ರನ್ ಗಳಿಸಿ ಆಡುವಾಗ ರನೌಟ್ ಆದರು. ಒಟ್ಟು 175 ರನ್​ಗೆ ಜೈಸ್ವಾಲ್ ಬ್ಯಾಟಿಂಗ್ ಮುಗಿಸಿದರು.
ಜೈಸ್ವಾಲ್ ಬಳಿಕ ಕ್ರೀಸ್​ಗೆ ಬ್ಯಾಟಿಂಗ್ ಮಾಡಲು ಬಂದ ನಿತೀಶ್​ ಕುಮಾರ್ ರೆಡ್ಡಿ ಬಿರುಸಿನ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಕೇವಲ 54 ಎಸೆತಗಳಲ್ಲಿ 4 ಫೋರ್, 2 ಸಿಕ್ಸರ್​ಗಳಿಂದ 43 ರನ್​ ಬಾರಿಸಿ ಅರ್ಧಶಕತದ ಹೊಸ್ತಿಲಲ್ಲಿ ಔಟ್ ಆದರು. ನಿತೀಶ್​ ಕುಮಾರ್ ಬಳಿಕ ಬ್ಯಾಟಿಂಗ್​ ಬಂದ ವಿಕೆಟ್​ ಕೀಪರ್ ಧೃವ್ ಜುರೇಲ್ ಕ್ಯಾಪ್ಟನ್​ ಗಿಲ್​ಗೆ ಉತ್ತಮ ಸಾಥ್ ಕೊಟ್ಟರು.
ಇನ್ನಿಂಗ್ಸ್​ನಲ್ಲಿ 5 ಬೌಂಡರಿಗಳಿಂದ 44 ರನ್​ ಗಳಿಸಿ ಆಡುತ್ತಿದ್ದ ಧೃವ್ ಜುರೆಲ್ ಕ್ಲೀನ್ ಬೋಲ್ಡ್ ಆದರು. ಇದರಿಂದ ಶುಭ್​ಮನ್ ಗಿಲ್ ಅವರು ಮೈದಾನದಲ್ಲೇ ಡಿಕ್ಲೇರ್ ಘೋಷಣೆ ಮಾಡಿದರು. ಟೀಮ್ ಇಂಡಿಯಾ 5 ವಿಕೆಟ್​ಗೆ 518 ರನ್​ಗಳಿಗೆ ಡಿಕ್ಲೇರ್ ಮಾಡಿದ್ದು ವೆಸ್ಟ್​ ಇಂಡೀಸ್​ ಆಟಗಾರರು ಮೊದಲ ಇನ್ನಿಂಗ್ಸ್​ನ ಬ್ಯಾಟಿಂಗ್​ ಮಾಡಲಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ