Advertisment

ಫ್ಯಾನ್ಸ್​ಗೆ ಸರ್​​ಪ್ರೈಸ್.. ಹಾರ್ದಿಕ್​ ಪಾಂಡ್ಯ ಕಾರ್​ನಿಂದ ಇಳಿದ ಬ್ಯೂಟಿ.. ಯಾರು ಈ ಸುಂದರಿ?

ಫ್ಲೈಟ್​ ಹತ್ತೋಕೆ ಐಷಾರಾಮಿ ಕಾರ್​ನಲ್ಲಿ ಹಾರ್ದಿಕ್​ ಮುಂಬೈ ಏರ್​​ಪೋರ್ಟ್​ಗೆ ಬಂದಿದ್ರು. ಕಾರು ಇಳಿದು ​ಒಳಗಡೆ ಹೋಗ್ತಾ ಇದ್ದ ಸಡನ್​ ಆಗಿ ನಿಂತ್ರು. ಆಗಲೇ ಎಲ್ಲರಿಗೂ ಸರ್​​ಪ್ರೈಸ್​ ಶಾಕ್​ ಸಿಕ್ಕಿದ್ದು. ಕಾರ್​ನ ಇನ್ನೊಂದು ಡೋರ್​​ನಿಂದ ಸುಂದರಿಯೊಬ್ಬಳು ಕೆಳಗಿಳಿದಳು.

author-image
Bhimappa
HARDIK_PANDYA_Mahieka_Sharma
Advertisment

ಏಷ್ಯಾಕಪ್​ ಮುಗಿಸಿ ದುಬೈನಿಂದ ವಾಪಾಸ್ಸಾದ ಹಾರ್ದಿಕ್​ ಪಾಂಡ್ಯ ಕ್ರಿಕೆಟ್​​ ಫೀಲ್ಡ್​ನಿಂದ ಹೊರಗುಳಿದಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದಿಂದಲೂ ರೆಸ್ಟ್​​ ಪಡೆದಿರೋ ಹಾರ್ದಿಕ್​, ಜಾಲಿ ಜಾಲಿ ಅಂತಾ ವಿದೇಶಕ್ಕೆ ಹಾರಿದ್ದಾರೆ. ಒಬ್ಬರೇ ಅಲ್ಲ, ಹೊಸ ಹುಡುಗಿ ಜೊತೆಗೆ ಫ್ಲೈಟ್​ ಹತ್ತಿದ್ದಾರೆ. ಹಾಗಾದ್ರೆ, ಹಾರ್ದಿಕ್​ ಮತ್ತೆ ಲವ್​ನಲ್ಲಿ ಬಿದ್ರಾ.? ಆ ಹುಡುಗಿ ಯಾರು?.

Advertisment

ಟೀಮ್​ ಇಂಡಿಯಾ ಆಲ್​​​ರೌಂಡರ್​ ಹಾರ್ದಿಕ್​ ಪಾಂಡ್ಯ ಕಳೆದೊಂದು ತಿಂಗಳಿಂದ ಸಖತ್​ ಸುದ್ದಿಯಲ್ಲಿದ್ದಾರೆ. ಏಷ್ಯಾಕಪ್​ ಟೂರ್ನಿಯಲ್ಲಿ ನೀಡಿದ ಬ್ಯಾಟಿಂಗ್​, ಬೌಲಿಂಗ್​ ಪರ್ಫಾಮೆನ್ಸ್​ ಕಥೆ ಬಿಡಿ. ಆಫ್​​ ದ ಫೀಲ್ಡ್​​ ವಿಚಾರಕ್ಕೆ ಹೆಚ್ಚು ಸುದ್ದಿಯಾಗಿದ್ದಾರೆ. ದುಬೈನಲ್ಲಿ ಹೇರ್​​ ಕಟಿಂಗ್​, ಕೊದಲಿಗೆ ವಿಚಿತ್ರ ಕಲರಿಂಗ್​, 20 ಕೋಟಿಯ ವಾಚ್​, ದುಬಾರಿ ಜಾಕೆಟ್​​ ಈ ಎಲ್ಲಾ ಕಾರಣದಿಂದ ಸಖತ್​ ಸೌಂಡ್​ ಮಾಡಿದ್ದರು. ಇದೀಗ ಮತ್ತೆ ಆಫ್​​ ಫೀಲ್ಡ್​ ವಿಚಾರಕ್ಕೆ ಹಾರ್ದಿಕ್​ ಟ್ರೆಂಡಿಂಗ್​ನಲ್ಲಿದ್ದಾರೆ. ಅದೂ ಹುಡುಗಿ ವಿಚಾರಕ್ಕೆ.

HARDIK_PANDYA

ಮತ್ತೆ ಲವ್​ನಲ್ಲಿ ಬಿದ್ರಾ ಆಲ್​​ರೌಂಡರ್​ ಹಾರ್ದಿಕ್​ ಪಾಂಡ್ಯ.?

ಬಹುಕಾಲ ಪ್ರೀತಿಸಿ ವಿವಾಹವಾದ ನತಾಶ ಡಿವೋರ್ಸ್​​ ಕೊಟ್ಟು ಹೋಗಿದ್ದಾಯ್ತು. ಆ ನಂತರದ ಜಾಸ್ಮಿನ್​ ವಾಲಿಯಾ ಜೊತೆಗಿನ ಲವ್​ ಕೂಡ ಬ್ರೇಕ್​ ಅಪ್​ ಆಗಿದ್ದಾಯ್ತು. ಸದ್ಯ ಒಂಟಿಯಾಗಿ ಜೀವನ ನಡೆಸ್ತಾ ಇದ್ದ ಹಾರ್ದಿಕ್​ ಪಾಂಡ್ಯ ಮತ್ತೆ ಜಂಟಿಯಾಗಿದ್ದಾರೆ ಅನ್ನೋ ಸುದ್ದಿ ಓಡಾಡ್ತಿದೆ. ಕ್ರಿಕೆಟ್​ ಹಾಗೂ ಬಾಲಿವುಡ್​ ಲೋಕದಲ್ಲಿ ಈ ಬಿಸಿಬಿಸಿ ಗಾಸಿಪ್​ ಬಿರುಗಾಳಿಯಂತೆ ಹಬ್ಬಿದೆ. 

ಕ್ರಿಕೆಟ್​ನಿಂದ ರೆಸ್ಟ್​, ವಿದೇಶಕ್ಕೆ ಹಾರಿದ ಹಾರ್ದಿಕ್.!

ಇಂಜುರಿ ಕಾರಣ ನೀಡಿ ಮುಂಬರೋ ಆಸ್ಟ್ರೇಲಿಯಾ ಪ್ರವಾಸದಿಂದಲೂ ವಿಶ್ರಾಂತಿ ಪಡೆದಿರೋ ಹಾರ್ದಿಕ್​ ಪಾಂಡ್ಯ, ರಜಾ ದಿನ ಕಳೆಯೋಕೆ ವಿದೇಶಕ್ಕೆ ಹಾರಿದ್ದಾರೆ. ಫ್ಲೈಟ್​ ಹತ್ತೋಕೆ ಐಷಾರಾಮಿ ಕಾರ್​ನಲ್ಲಿ ಹಾರ್ದಿಕ್​ ಮುಂಬೈ ಏರ್​​ಪೋರ್ಟ್​ಗೆ ಬಂದಿದ್ರು. ಕಾರು ಇಳಿದು ​ಒಳಗಡೆ ಹೋಗ್ತಾ ಇದ್ದ ಸಡನ್​ ಆಗಿ ನಿಂತ್ರು. ಆಗಲೇ ಎಲ್ಲರಿಗೂ ಸರ್​​ಪ್ರೈಸ್​ ಶಾಕ್​ ಸಿಕ್ಕಿದ್ದು. ಯಾಕಂದ್ರೆ, ಹಾರ್ದಿಕ್​ ಒಂಟಿಯಾಗಿರಲಿಲ್ಲ. ಕಾರ್​ನ ಇನ್ನೊಂದು ಡೋರ್​​ನಿಂದ ಸುಂದರಿಯೊಬ್ಬಳು ಕೆಳಗಿಳಿದಳು. ಇಬ್ಬರೂ ಒಟ್ಟಾಗಿ ಸೀದಾ ಏರ್​​​ಪೋರ್ಟ್​​ ಒಳಗೆ ಹೋದರು. 

Advertisment

ಹೊಸ ಹುಡುಗಿಯ ಜೊತೆಗೆ ಹಾರ್ದಿಕ್​ ಪಾಂಡ್ಯ ಕಾಣಿಸಿಕೊಂಡ ಬೆನ್ನಲ್ಲೇ ಯಾರಿವಳು ಎಂಬ ಪ್ರಶ್ನೆಯ ಹುಡುಕಾಟ ಜೋರಾಗಿ ನಡೆದಿದೆ. ಸೋಷಿಯಲ್​ ಮೀಡಿಯಾದಲ್ಲಂತೂ ಇದರ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಗಳು ನಡೆದಿವೆ. ಕೊನೆಗೆ ಉತ್ತರವೂ ಸಿಕ್ಕಿದೆ. ಅಂದ್ಹಾಗೆ ಆ ಬೆಡಗಿಯ ಹೆಸರು ಮಹಿಕಾ ಶರ್ಮಾ. ಬಾಲಿವುಡ್​ ನಟಿ ಕಮ್​ ಮಾಡೆಲ್​. 

ನಟಿ ಮಹಿಕಾ ಶರ್ಮಾ ಜೊತೆ ಹಾರ್ದಿಕ್​ ಡೇಟಿಂಗ್​.?

ಕಳೆದ ಕೆಲ ತಿಂಗಳಿಂದ ಇವರಿಬ್ಬರ ಡೇಟಿಂಗ್​ ಬಗ್ಗೆ ಬಗೆಬಗೆಯ ಗಾಸಿಪ್​ಗಳು ಹರಿದಾಡಿದ್ವು. ಏಷ್ಯಾಕಪ್​​ ಟೂರ್ನಿಯ ವೇಳೆ ಮಹೈಕಾ ಶರ್ಮಾ ಒಂದು ಸೋಷಿಯಲ್​ ಮೀಡಿಯಾದಲ್ಲಿ ಒಂದು ಸೆಲ್ಫಿ ಶೇರ್​ ಮಾಡಿದರು. ಆ ಸೆಲ್ಫಿಯಲ್ಲಿ ಒಬ್ಬ ವ್ಯಕ್ತಿ ಕಾಣಿಸಿಕೊಂಡಿದ್ರು. ಆಗಲೇ ಅದು ಹಾರ್ದಿಕ್​ ಪಾಂಡ್ಯ ಎಂಬ ಗುಲ್​ ಎದ್ದಿತ್ತು. ಡೇಟಿಂಗ್​ ರೂಮರ್ಸ್​ ಕೂಡ ಜೋರಾಗಿ ಸದ್ದು ಮಾಡ್ತಿತ್ತು. ಇದೀಗ ಇಬ್ಬರೂ ಏರ್​​ಪೋರ್ಟ್​​ನಲ್ಲಿ ಕಾಣಿಕೊಂಡಿರೋದು ಆ ರೂಮರ್ಸ್​ಗೆ ಮತ್ತಷ್ಟು ಪುಷ್ಠಿ ನೀಡಿದೆ. 

ಇದನ್ನೂ ಓದಿ:ದ್ವಿಶತಕ ಹೊಸ್ತಿಲಲ್ಲಿದ್ದ ಯಶಸ್ವಿ ಜೈಸ್ವಾಲ್​ನ ಔಟ್ ಮಾಡಿದ ಕ್ಯಾಪ್ಟನ್ ಶುಭ್​ಮನ್ ಗಿಲ್​.. ಹೇಗೆ?

Advertisment

Hardik_Pandya_Mahieka_Sharma

ಖ್ಯಾತ ಬ್ರ್ಯಾಂಡ್​ಗಳ ರೂಪದರ್ಶಿ ಮಹಿಕಾ 

ಮಹಿಕಾ ಶರ್ಮಾ ಮಾಡೆಲ್​ ಕಮ್​​ ನಟಿ. ಹಲವು ಮ್ಯೂಸಿಕ್​ ವಿಡಿಯೋಸ್​​, ವೆಬ್​ ಸರಣಿಗಳಲ್ಲಿ ಬಣ್ಣ ಹಚ್ಚಿರುವ ಈಕೆ, ತನಿಷ್ಕ್​, ವಿವೋ ಸೇರಿದಂತೆ ಹಲವು ಖ್ಯಾತ ಬ್ರ್ಯಾಂಡ್​ಗಳ ರೂಪದರ್ಶಿ ಆಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಬಾಲಿವುಡ್​ನ ಖ್ಯಾತ ಫ್ಯಾಷನ್​ ಡಿಸೈನರ್ ಮನೀಷ್​ ಮಲ್ಹೋತ್ರ, ಅನಿತಾ ಡೋಂಗ್ರೆ ಜೊತೆಗೆ ಕೆಲ ಪ್ರಾಜೆಕ್ಟ್​​ಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ. 

ಸದ್ಯ, ಏರ್​​​ಪೋರ್ಟ್​​​ನಲ್ಲಿ ಹಾರ್ದಿಕ್​ ಪಾಂಡ್ಯ- ಮಹಿಕಾ ಶರ್ಮಾ ಕಾಣಿಸಿಕೊಂಡ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಹಲ್​ಚಲ್​ ಎಬ್ಬಿಸಿದೆ. ಡೇಟಿಂಗ್​ ರೂಮರ್ಸ್​ ಕೂಡ ಜೋರಾಗಿ ಸದ್ದು ಮಾಡ್ತಿದೆ. ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಹಾರ್ದಿಕ್​ -ಮಹೈಕಾ ಶರ್ಮಾ ಫ್ಲೈಟ್​​ ಹತ್ತಿ ವಿದೇಶಕ್ಕೆ ತೆರಳಿ ಪ್ರವಾಸವನ್ನ ಎಂಜಾಯ್​ ಮಾಡ್ತಿದ್ದಾರೆ. ಟ್ರಿಪ್​ ಮುಗಿದ ಬಳಿಕವಾದರೂ ಇಬ್ಬರೂ ಈ ಬಗ್ಗೆ ಏನಾದರೂ ಮಾತನಾಡ್ತಾರಾ ಕಾದು ನೋಡೋಣ. 

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Advertisment
Hardik Pandya Girlfriend Hardik Pandya
Advertisment
Advertisment
Advertisment