Advertisment

ದ್ವಿಶತಕ ಹೊಸ್ತಿಲಲ್ಲಿದ್ದ ಯಶಸ್ವಿ ಜೈಸ್ವಾಲ್​ನ ಔಟ್ ಮಾಡಿದ ಕ್ಯಾಪ್ಟನ್ ಶುಭ್​ಮನ್ ಗಿಲ್​.. ಹೇಗೆ?

ವೆಸ್ಟ್​ ಇಂಡೀಸ್​ ವಿರುದ್ಧದ ಎರಡನೇ ಟೆಸ್ಟ್​ ಮ್ಯಾಚ್​ನ 2ನೇ ದಿನದಾಟದಲ್ಲಿ ಬ್ಯಾಟಿಂಗ್​ಗೆ ಆಗಮಿಸಿದ್ದ ಯಶಸ್ವಿ ಜೈಸ್ವಾಲ್​ ಡಬಲ್ ಹಂಡ್ರೆಡ್​ ಕನಸು ಕಾಣುತ್ತಿದ್ದರು. ಆದರೆ ಅದು ನೆರವೇರಲಿಲ್ಲ. ಇದಕ್ಕೆ ಕಾರಣ ಕ್ಯಾಪ್ಟನ್ ಶುಭ್​ಮನ್ ಗಿಲ್ ಎಂದು ಹೇಳಬಹುದು.

author-image
Bhimappa
Jaiswal_RUN_OUT
Advertisment

ಟೀಮ್ ಇಂಡಿಯಾದ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರು 2ನೇ ಟೆಸ್ಟ್​ ಪಂದ್ಯದಲ್ಲಿ ದ್ವಿಶತಕದ ಹೊಸ್ತಿಲಲ್ಲಿ ಔಟ್ ಆಗಿದ್ದಾರೆ. ನಿನ್ನೆ 173 ರನ್​ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಜೈಸ್ವಾಲ್ ಇಂದು ಕೇವಲ 2 ರನ್​ ಗಳಿಸಿ ಬಲಿಯಾಗಿದ್ದಾರೆ. 

Advertisment

ದೆಹಲಿಯಲ್ಲಿ ನಡೆಯುತ್ತಿರುವ ವೆಸ್ಟ್​ ಇಂಡೀಸ್​ ವಿರುದ್ಧದ ಎರಡನೇ ಟೆಸ್ಟ್​ ಮ್ಯಾಚ್​ನ 2ನೇ ದಿನದಾಟದಲ್ಲಿ ಬ್ಯಾಟಿಂಗ್​ಗೆ ಆಗಮಿಸಿದ್ದ ಯಶಸ್ವಿ ಜೈಸ್ವಾಲ್​ ಡಬಲ್ ಹಂಡ್ರೆಡ್​ ಕನಸು ಕಾಣುತ್ತಿದ್ದರು. ಆದರೆ ಅದು ನೆರವೇರಲಿಲ್ಲ. ಇದಕ್ಕೆ ಕಾರಣ ಕ್ಯಾಪ್ಟನ್ ಶುಭ್​ಮನ್ ಗಿಲ್ ಎಂದು ಹೇಳಬಹುದು. ಏಕೆಂದರೆ ಸಿಂಗಲ್ ರನ್​ ಓಡಲು ಜೈಸ್ವಾಲ್ ಅರ್ಧ ಕ್ರೀಸ್​ ದಾಟಿ ಬಂದಿದ್ದರೂ ಇನ್ನೊಂದೆಡೆ ಶುಭ್​ಮನ್ ಗಿಲ್ ಕ್ರೀಸ್​ನ ಗೆರೆ ಕೂಡ ಬಿಟ್ಟಿರಲಿಲ್ಲ. ಇದರಿಂದ ಜೈಸ್ವಾಲ್ ರನೌಟ್​ ಆಗಿ ಭಾರೀ ನಿರಾಸೆ ಅನುಭವಿಸಿದ್ದಾರೆ. ​ 

ಇದನ್ನೂ ಓದಿ:IPL 2026; ಆಕ್ಷನ್​ಗೂ ಮೊದಲೇ​ ಹೆಸರು ಬಹಿರಂಗ.. CSK ಟೀಮ್​ನಿಂದ ಈ ಪ್ಲೇಯರ್ಸ್​​ಗೆ ಗೇಟ್​ಪಾಸ್​!​

0 ರನ್​, 2 ವಿಕೆಟ್​​..! ಗೆದ್ದೇ ಬಿಟ್ವಿ ಅನ್ನೋ ಆಂಗ್ಲರ ಸೊಕ್ಕನ್ನ ಗಿಲ್ ಮುರಿದ್ದೇ ರೋಚಕ..

ಇಂಡೀಸ್ ಪರ ಜೇಡನ್ ಸೀಲ್ಸ್ 92ನೇ ಓವರ್​ ಮೊದಲ ಬಾಲ್​ ಅನ್ನು ಹಾಕಿದರು. ಈ ಫುಲ್​ ಬಾಲ್ ಅನ್ನು ಸ್ಟ್ರೇಟ್​​ ಮಿಡ್​ ಆಫ್​ನಲ್ಲಿ ಸ್ವೀಟ್​ ಆಗಿ ಡ್ರೈವ್ ಮಾಡಿದ ಯಶಸ್ವಿ ಜೈಸ್ವಾಲ್ 1​ ರನ್​ಗಾಗಿ ಓಡಿದರು. ಆದರೆ ಇನ್ನೊಂದು ಬದಿಯಲ್ಲಿದ್ದ ನಾಯಕ ಶುಭ್​ಮನ್ ಗಿಲ್ ಕ್ರೀಸ್​ ಬಿಟ್ಟು ರನ್​ ಓಡಲೇ ಇಲ್ಲ. ಇದರಿಂದ ಅರ್ಧ ಕ್ರೀಸ್​ವರೆಗೆ ಬಂದಿದ್ದ ಜೈಸ್ವಾಲ್ ಮತ್ತೆ ವಾಪಸ್ ಓಡಲು ಯತ್ನಿಸಿದರು. ಆದರೆ ಅಷ್ಟೊತ್ತಿಗೆ ಬಾಲ್​ ಕೀಪರ್ ಕೈ ಸೇರಿದ್ದರಿಂದ ಯಶಸ್ವಿ ಜೈಸ್ವಾಲ್​ ತಮ್ಮ ಯಶಸ್ವಿ ಬ್ಯಾಟಿಂಗ್​ ಕೈಚೆಲ್ಲಿದರು.  

Advertisment

ಮೊದಲ ದಿನವೇ 150ಕ್ಕೂ ಅಧಿಕ ರನ್ ಬಾರಿಸಿದ್ದ ಓಪನರ್ ಯಶಸ್ವಿ ಜೈಸ್ವಾಲ್ ಕೆಲವು ದಾಖಲೆಗಳನ್ನು ಮಾಡಿದ್ದರು. ಅದರಂತೆ ಇವತ್ತೂ ಕೂಡ ಡಬಲ್ ಹಂಡ್ರೆಡ್​ ಬಾರಿಸಿ ದಾಖಲೆ ಬರೆಯುವ ಹುಮ್ಮಸ್​ನಿಂದ ಕ್ರೀಸ್​ಗೆ ಆಗಮಿಸಿದ್ದರು. ಆದರೆ ಡಬಲ್ ಹಂಡ್ರೆಡ್​ ಕನಸು ಹರಿಯೋ ನೀರಲ್ಲಿ ಹುಣೆಸೆಹಣ್ಣು ತೊಳೆದಂತೆ ಆಯಿತು. ಸದ್ಯ ಟೀಮ್ ಇಂಡಿಯಾ 3 ವಿಕೆಟ್​ಗೆ 379 ರನ್​ಗಳು ಗಳಿಸಿದ್ದು ಕ್ರೀಸ್​ನಲ್ಲಿ ನಾಯಕ ಗಿಲ್​ 57 ಹಾಗೂ ನಿತೀಶ್​ ಕುಮಾರ್ ರೆಡ್ಡಿ 21 ರನ್​ ಗಳಿಸಿ ಆಡುತ್ತಿದ್ದಾರೆ.  

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Advertisment
IND vs WI Yashasvi Jaiswal
Advertisment
Advertisment
Advertisment