Advertisment

IPL 2026; ಆಕ್ಷನ್​ಗೂ ಮೊದಲೇ​ ಹೆಸರು ಬಹಿರಂಗ.. CSK ಟೀಮ್​ನಿಂದ ಈ ಪ್ಲೇಯರ್ಸ್​​ಗೆ ಗೇಟ್​ಪಾಸ್​!​

ಡಿಸೆಂಬರ್​ 13 ಅಥವಾ 15 ರಂದು ಐಪಿಎಲ್​ ಆಕ್ಷನ್ ನಡೆಯುವ ಸಾಧ್ಯತೆ ಇದೆ. ಇದು ಈಗಿರುವಾಗಲೇ ಸಿಎಸ್​ಕೆ ತಂಡದಿಂದ ಯಾವ್ಯಾವ ಆಟಗಾರನಿಗೆ ಗೇಟ್​ ಪಾಸ್ ನೀಡಲಾಗುತ್ತಿದೆ ಎಂದು ಇತ್ತೀಚೆಗೆ ಸೋಷಿಯಲ್​ ಮೀಡಿಯಾದಲ್ಲಿ ಹೆಸರುಗಳು ವೈರಲ್ ಆಗಿವೆ.

author-image
Bhimappa
DHONI_CSK_AUCTION
Advertisment

2026 ಇಂಡಿಯನ್ ಪ್ರೀಮಿಯರ್ ಲೀಗ್​ ಆಕ್ಷನ್​ಗೆ ಈಗಾಗಲೇ ಫ್ರಾಂಚೈಸಿಗಳು ಯಾರನ್ನು ತಂಡದಿಂದ ಹೊರಗಿಡಬೇಕು, ಯಾರನ್ನ ಟೀಮ್​ಗೆ ಸೇರಿಸಿಕೊಳ್ಳಬೇಕು ಎಂದು ತಮ್ಮ.. ತಮ್ಮಲ್ಲಿ ಚರ್ಚೆ ಮಾಡುತ್ತಿವೆ. ಆದರೆ ಮೆಗಾ ಆಕ್ಷನ್​ಗೂ ಮೊದಲೇ ಚೆನ್ನೈ ಸೂಪರ್ ಕಿಂಗ್ಸ್​ ತಂಡ ಯಾರು ಯಾರನ್ನ ತಂಡದಿಂದ ಹೊರ ಹಾಕುತ್ತೆ ಎನ್ನುವುದು ಬಹಿರಂಗಗೊಂಡಿದೆ. ಇದರ ಬೆನ್ನಲ್ಲೇ ತನ್ನ ಎಕ್ಸ್​ ಅಕೌಂಟ್​ ಮೂಲಕ ಈ ಬಗ್ಗೆ ಚೆನ್ನೈ ಸ್ಪಷ್ಟನೆ ನೀಡಿದೆ.  

Advertisment

ಡಿಸೆಂಬರ್​ 13 ಅಥವಾ 15 ರಂದು ಐಪಿಎಲ್​ ಆಕ್ಷನ್ ನಡೆಯುವ ಸಾಧ್ಯತೆ ಇದೆ. ಇದು ಈಗಿರುವಾಗಲೇ ಸಿಎಸ್​ಕೆ ತಂಡದಿಂದ ಯಾವ್ಯಾವ ಆಟಗಾರನಿಗೆ ಗೇಟ್​ ಪಾಸ್ ನೀಡಲಾಗುತ್ತಿದೆ ಎಂದು ಇತ್ತೀಚೆಗೆ ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರಲ್ಲಿ ದೀಪಕ್ ಹೂಡಾ, ವಿಜಯ್ ಶಂಕರ್, ರಾಹುಲ್ ತ್ರಿಪಾಠಿ, ಸ್ಯಾಮ್ ಕರನ್ ಹಾಗೂ ವಿವೊನ್ ಕಾನ್ವೆ ಅವರನ್ನು ಹೊರಗಿಡಲು ಯೋಜಿಸಲಾಗಿದೆ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ:ಸೂರ್ಯಕುಮಾರ್​ಗೆ ಬಿಗ್ ಶಾಕ್​.. ಕ್ಯಾಪ್ಟನ್ ಸ್ಥಾನ​ದಿಂದ ಗೇಟ್​ಪಾಸ್​, ಕಾರಣವೇನು?

CSK_AUCTION

ಸದ್ಯ ಈ ಸಂಬಂಧ ತಮ್ಮ ಅಧಿಕೃತ ಎಕ್ಸ್​ ಖಾತೆಯಲ್ಲಿ ಮಾಹಿತಿ ನೀಡಿರುವ ಚೆನ್ನೈ ಸೂಪರ್ ಕಿಂಗ್ಸ್​ ಫ್ರಾಂಚೈಸಿಯು, ಯಾರು ಈ ಬಗ್ಗೆ ಚಿಂತಿಸಬೇಡಿ. ಸಮಯಕ್ಕೆ ಸರಿಯಾಗಿ ನಾವು ಎಲ್ಲವನ್ನು ಅಪ್​ಡೇಟ್ ಮಾಡುತ್ತಿರುತ್ತೇವೆ. ನಮ್ಮ ಎಕ್ಸ್​ ಅಕೌಂಟ್​ನಲ್ಲಿ ನೋಡುವವರೆಗೆ ಯಾವುದು ಅಧಿಕೃತವಲ್ಲ ಎಂದು ಹೇಳಿದ್ದಾರೆ. 

Advertisment

2025ರ ಐಪಿಎಲ್ ಟೂರ್ನಿಯಲ್ಲಿ ಹೀನಾಯ ಪ್ರದರ್ಶನ ನೀಡಿದ್ದ ಐದು ಟ್ರೋಫಿ ಗೆದ್ದ ತಂಡ ಈ ಬಾರಿ ಮಹತ್ವದ ಬದಲಾಣೆ ಮಾಡುವ ಯೋಜನೆಯಲ್ಲಿದೆ. ಏಕೆಂದರೆ 15 ವರ್ಷದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಹಾಗೂ 17 ವರ್ಷಗಳ ಬಳಿಕ ಆರ್​ಸಿಬಿ ವಿರುದ್ಧ ತವರಿನಲ್ಲಿ ಸಿಎಸ್​ಕೆ ಭಾರೀ ಅವಮಾನಕ್ಕೆ ಒಳಗಾಗಿತ್ತು. ತನ್ನ ಐಪಿಎಲ್ ಇತಿಹಾಸಲ್ಲಿ ಪಾಯಿಂಟ್ ಟೇಬಲ್​ನಲ್ಲಿ ಕಟ್ಟ ಕಡೆಯ ಸ್ಥಾನವನ್ನು ಚೆನ್ನೈ ಪಡೆದಿತ್ತು. 

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

IPL IPL brand valuable IPL 2026 auction
Advertisment
Advertisment
Advertisment