/newsfirstlive-kannada/media/post_attachments/wp-content/uploads/2024/11/Suryakumar-Yadav.jpg)
ಟೀಮ್ ಇಂಡಿಯಾದ ಟಿ20 ತಂಡದ ಕ್ಯಾಪ್ಟನ್​ ಸೂರ್ಯಕುಮಾರ್ ಯಾದವ್ ಅವರನ್ನು ರಣಜಿ ಟ್ರೋಫಿಯ ಮುಂಬೈ ತಂಡದಿಂದ ಹೊರಗಿಡಲಾಗಿದೆ. ಈ ಹಿಂದೆ ಏಷ್ಯಾಕಪ್​​ನಲ್ಲಿ ಅವರ ಕಳಪೆ ಬ್ಯಾಟಿಂಗ್​ ಫಾರ್ಮ್​ನಿಂದ ತಂಡಕ್ಕೆ ಆಯ್ಕೆ ಮಾಡಿಲ್ಲ ಎಂದು ಹೇಳಲಾಗುತ್ತಿದೆ.
ಸೂರ್ಯಕುಮಾರ್ ಅವರನ್ನು ತಂಡದಿಂದ ಹೊರಗಿಟ್ಟು ಈಗಾಗಲೇ ಮುಂಬೈ ಟೀಮ್​ನ ಆಟಗಾರರ ಹೆಸರನ್ನು ಘೋಷಣೆ ಮಾಡಲಾಗಿದೆ. ಆಲ್​ರೌಂಡರ್​ ಶಾರ್ದುಲ್ ಟಾಕೂರ್ ನೇತೃತ್ವದಲ್ಲಿ ಮುಂಬೈ ತಂಡ, ರಣಜಿ ಟ್ರೋಫಿಯಲ್ಲಿ ಅಖಾಡಕ್ಕೆ ಇಳಿಯಲಿದೆ. ಇತ್ತೀಚೆಗಷ್ಟೇ ಅಜಿಂಕ್ಯಾ ರಹಾನೆ ಅವರು ತಮ್ಮ ನಾಯಕತ್ವ ಸ್ಥಾನದಿಂದ ಹಿಂದೆ ಸರಿದ ಬೆನ್ನಲ್ಲೇ ತಂಡಕ್ಕೆ ಹೊಸ ನಾಯಕನನ್ನು ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ:ರೋಹಿತ್ ಶರ್ಮಾ ಐಷಾರಾಮಿ Tesla ಕಾರು ಖರೀದಿ.. ಎಲಾನ್​ ಮಸ್ಕ್​ ಗಮನ ಸೆಳೆದ ವಿಡಿಯೋ
ಅಕ್ಟೋಬರ್​ 15 ರಂದು ಶ್ರೀನಗರದ ಕ್ರಿಕೆಟ್​ ಮೈದಾನದಲ್ಲಿ ಮುಂಬೈ ಟೀಮ್ ಹಾಗೂ ಜಮ್ಮು ಕಾಶ್ಮೀರದ ತಂಡದ ನಡುವೆ ಮೊದಲ ಪಂದ್ಯ ನಡೆಯಲಿದೆ. ಸೂರ್ಯಕುಮಾರ್ ನೇತೃತ್ವದಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಅಕ್ಟೋಬರ್​ 29 ರಿಂದ 5 ಪಂದ್ಯಗಳ ಟಿ20 ಸರಣಿ ಆಡಲಿದೆ. ಇದಕ್ಕಿಂತ ಮೊದಲೇ ಮುಂಬೈನ ರಣಜಿ ತಂಡದಿಂದ ಸೂರ್ಯಕುಮಾರ್​ರನ್ನ ಕಡೆಗಣಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಇತ್ತೀಚೆಗಷ್ಟೇ ಬುಚಿ ಬಾಬು ಟೂರ್ನ್​ಮೆಂಟ್​ನಲ್ಲಿ ಇಂಜುರಿಗೆ ಒಳಗಾಗಿದ್ದ ಯುವ ಬ್ಯಾಟರ್​ ಸರ್ಫರಾಜ್​ ಖಾನ್ ಅವರನ್ನು ಮುಂಬೈಗೆ ಆಯ್ಕೆ ಮಾಡಲಾಗಿದೆ. ಇದರ ಜೊತೆಗೆ ಇವರ ಸಹೋದರ ಮುಶೀರ್​ ಖಾನ್​ಗೂ ಅವಕಾಶ ನೀಡಲಾಗಿದೆ. ಹೀಗಾಗಿ ಮುಂಬೈ ತಂಡದಲ್ಲಿ ಸಹೋದರರ ದರ್ಬಾರ್ ನಡೆಯಲಿದೆ. ಉಳಿದಂತೆ ಶಾರ್ದುಲ್ ಟಾಕೂರ್ ನಾಯಕನಾಗಿದ್ರೆ, ಆಕಾಶ್ ಆನಂದ್ ಅವರಿಗೆ ವಿಕೆಟ್​ ಜವಾಬ್ದಾರಿ ವಹಿಸಲಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ