ಆಪರೇಷನ್ ಸಿಂಧೂರನಲ್ಲಿ ಮೌಲಾನಾ ಮಸೂದ್ ಫ್ಯಾಮಿಲಿ ಛಿದ್ರ ಛಿದ್ರ.. ಒಪ್ಪಿಕೊಂಡ ಪಾಪಿ ಪಾಕ್

ಭಾರತೀಯ ಸೇನೆ ಆಪರೇಷನ್ ಸಿಂಧೂರ ಮೂಲಕ ಪಾಪಿ ಪಾಕಿಸ್ತಾನದ ಮೇಲೆ ದಾಳಿ ಮಾಡಿ ತಿರುಗೇಟು ಕೊಟ್ಟಿತ್ತು. ಇದರಲ್ಲಿ ಜೈಶ್-ಇ-ಮೊಹಮ್ಮದ್ ಸಂಘಟನೆಯ ಸಂಸ್ಥಾಪಕ ಮೌಲಾನಾ ಮಸೂದ್ ಅಜರ್ ಕುಟುಂಬ ಛಿದ್ರ ಛಿದ್ರ ಆಗೋಗಿದೆ ಎನ್ನುವ ಮಾಹಿತಿ ಇದೀಗ ಬರಹಿರಂಗಗೊಂಡಿದೆ.

author-image
Bhimappa
Operation_Sindoor
Advertisment

ನವದೆಹಲಿ: ಜಮ್ಮುಕಾಶ್ಮೀರದ ಪಹಲ್ಗಾಮ್​ನಲ್ಲಿ ಭಯೋತ್ಪಾದಕರು​ ದಾಳಿ ಬಳಿಕ ಕೌಂಟರ್ ಅಟ್ಯಾಕ್ ಮಾಡಿದ್ದ ಭಾರತ, ಪಾಕಿಸ್ತಾನದ ಪ್ರಮುಖ ನೆಲೆಗಳನ್ನು ಧ್ವಂಸ ಮಾಡಿತ್ತು. ಭಾರತೀಯ ಸೇನೆ ಆಪರೇಷನ್ ಸಿಂಧೂರ ಮೂಲಕ ಪಾಪಿ ಪಾಕಿಸ್ತಾನದ ಮೇಲೆ ದಾಳಿ ಮಾಡಿ ತಿರುಗೇಟು ಕೊಟ್ಟಿತ್ತು. ಇದರಲ್ಲಿ ಜೈಶ್-ಇ-ಮೊಹಮ್ಮದ್ ಸಂಘಟನೆಯ ಸಂಸ್ಥಾಪಕ ಮೌಲಾನಾ ಮಸೂದ್ ಅಜರ್ ಕುಟುಂಬ ಛಿದ್ರ ಛಿದ್ರ ಆಗೋಗಿದೆ ಎನ್ನುವ ಮಾಹಿತಿ ಇದೀಗ ಬರಹಿರಂಗಗೊಂಡಿದೆ. 

ಜೈಶ್-ಇ-ಮೊಹಮ್ಮದ್ ಸಂಘಟನೆಯ ಮುಖ್ಯ ಭಯೋತ್ಪಾದಕ ಆಗಿರುವ ಮಸೂದ್​ ಇಲ್ಯಾಸ್ ಕಾಶ್ಮೀರಿ ಮಾತನಾಡಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಏರುಧ್ವನಿಯಲ್ಲಿ ಮಾತನಾಡಿರುವ ಮಸೂದ್​ ಇಲ್ಯಾಸ್ ಕಾಶ್ಮೀರಿ, ಭಾರತದ ಕೌಂಟರ್ ಅಟ್ಯಾಕ್​ ಆಪರೇಷನ್ ಸಿಂಧೂರ ವೇಳೆ, ಟೆರರ್ ಗ್ರೂಪ್ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಫ್ಯಾಮಿಲಿ ಎಲ್ಲ ಧ್ವಂಸ ಆಗಿದೆ. ಮೇ 7 ರಂದು ನಡೆದ ಆಪರೇಷನ್ ಸಿಂಧೂರ ಸ್ಟ್ರೈಕ್, ಪಾಕ್​ನ ಬಹವಾಲ್ಪುರದ ಮರ್ಕಜ್ ಸುಭಾನಲ್ಲಾನಲ್ಲಿ ಇರುವ ಜೈಶ್-ಇ-ಮೊಹಮ್ಮದ್ ಸಂಘಟನೆಯ ಪ್ರಧಾನ ಕಚೇರಿಯನ್ನು ಗುರಿಯಾಗಿಸಿತ್ತು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಟೀಮ್ ಇಂಡಿಯಾಗೆ ಗುಡ್​​ನ್ಯೂಸ್​​.. 579 ಕೋಟಿ ರೂಪಾಯಿಗೆ ಸ್ಪಾನ್ಸರ್​ಶಿಪ್ ಪಡೆದ ಟೈರ್​ ಕಂಪನಿ

Operation_Sindoor_1

ಈ ಭೂಮಿಯನ್ನು ಉಳಿಸಲು ನಾವು ಉಗ್ರಗಾಮಿತ್ವವನ್ನು ಸ್ವೀಕಾರ ಮಾಡಿದ್ದೇವೆ. ಅದನ್ನು ರಕ್ಷಣೆ ಮಾಡಲು ದೆಹಲಿ, ಕಾಬೂಲ್ ಮತ್ತು ಕಂದಹಾರ್​ನಲ್ಲಿ ಹೋರಾಟ ಮಾಡಿದ್ದೇವೆ. ಆದರೆ ಮೇ 7 ರಂದು ಭಾರತದ ಆಪರೇಷನ್ ಸಿಂಧೂರ, ಬಹವಾಲ್ಪುರದಲ್ಲಿದ್ದ ಮೌಲಾನಾ ಮಸೂದ್ ಅಜರ್ ಫ್ಯಾಮಿಲಿನ ಛಿದ್ರ ಮಾಡಿದೆ ಎಂದು ಹೇಳಿದ್ದಾರೆ. 

ಇದೇ ವರ್ಷದ ಏಪ್ರಿಲ್ 22 ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್​ನಲ್ಲಿ ಪ್ರವಾಸಿಗರ ಮೇಲೆ ಉಗ್ರ ಸಂಘಟನೆಯಾದ ಲಷ್ಕರ್ ಇ ತೈಬಾ ದಾಳಿ ಮಾಡಿತ್ತು. ಈ ವೇಳೆ ಭಯೋತ್ಪಾದಕರು ಧರ್ಮ ಕೇಳಿ..ಕೇಳಿ ಪ್ರವಾಸಿಗರ ಜೀವ ತೆಗೆದಿದ್ದರು. ಒಟ್ಟು 26 ಜನರನ್ನು ಉಸಿರು ನಿಲ್ಲಿಸಲಾಗಿತ್ತು. ಇದು ಇತ್ತೀಚಿನ ವರ್ಷಗಳಲ್ಲಿ ನಡೆದಂತಹ ಅತ್ಯಂತ ಭೀಕರ ಉಗ್ರ ಕೃತ್ಯ ಎಂದು ಹೇಳಲಾಗಿದೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

India Operation Sindoor Operation Sindoor
Advertisment