/newsfirstlive-kannada/media/media_files/2025/10/28/kenya-plan-1-2025-10-28-17-52-18.jpg)
ಕೀನ್ಯಾದಲ್ಲಿ ಪತನಗೊಂಡ ವಿಮಾನ Photograph: (ಸೋಶಿಯಲ್ ಮೀಡಿಯಾ)
ಕೀನ್ಯಾದಲ್ಲಿ ಲಘು ವಿಮಾನ ಪತನಗೊಂಡು ಕನಿಷ್ಠ 12 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕರಾವಳಿ ಪ್ರದೇಶವಾದ ಕ್ವಾಲೆ ಕೌಂಟಿಯ (Kenya’s Kwale County) ಸಿಂಬಾ ಗೋಲಿನಿ ಪ್ರದೇಶದಲ್ಲಿ ಮಂಗಳವಾರ ಬೆಳಗ್ಗೆ ವಿಮಾನ ಪತನಗೊಂಡಿದೆ.
ವಿಮಾನವು 0530Z ನಲ್ಲಿ ಡಯಾನಿಯಿಂದ ಹೊರಟು ಕಿಚ್ವಾ ಟೆಂಬೊಗೆ (Diani to Kichwa Tembo) ಗೆ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದಾಗ ದುರಂತ ಸಂಭವಿಸಿದೆ. ಇಂದು ಬೆಳಗ್ಗೆ 8:30 ರ ಸುಮಾರಿಗೆ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಪತನಗೊಂಡಿದೆ. ಡಯಾನಿ ವಾಯುನೆಲೆಯಿಂದ ಸುಮಾರು 40 ಕಿಲೋಮೀಟರ್ ದೂರದಲ್ಲಿರುವ ಗುಡ್ಡಗಾಡು ಮತ್ತು ಅರಣ್ಯ ಪ್ರದೇಶದಲ್ಲಿ ಅಪಘಾತವಾಗಿದೆ ಎಂದು ನಾಗರಿಕ ವಿಮಾನಯಾನ ಪ್ರಾಧಿಕಾರ ತಿಳಿಸಿದೆ.
ಇದನ್ನೂ ಓದಿ:ಈಗ ಟಾರ್ಗೆಟ್ ಕಂಪನಿಯಲ್ಲಿ ಲೇ ಆಫ್ ಸರದಿ : 1,800 ಉದ್ಯೋಗಿಗಳಿಗೆ ಗೇಟ್ ಪಾಸ್!
ವಿಮಾನ ಪತನಗೊಂಡಿರುವ ದೃಶ್ಯವು ಮೊಬೈಲ್​ನಲ್ಲಿ ಸೆರೆಯಾಗಿದ್ದು, ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವ ದೃಶ್ಯಗಳ ಪ್ರಕಾರ, ವಿಮಾನ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಇನ್ನು, ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ತುರ್ತು ಸೇವೆಗಳ ಘಟಕಗಳು ಘಟನಾ ಸ್ಥಳಕ್ಕೆ ತ್ವರಿತವಾಗಿ ಆಗಮಿಸಿದ್ದವು.
ಮಸುಕಾದ ಗೋಚರತೆ ಮತ್ತು ಅಹಿತಕರ ಹವಾಮಾನ ಪರಿಸ್ಥಿಗಳು ಅಪಘಾತಕ್ಕೆ ಕಾರಣವಾಗಿರಬಹುದೆಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಈ ವಿಮಾನಯಾನ ಸಂಸ್ಥೆಯು , ಮೊಂಬಾಸವನ್ನು ಸಂಪರ್ಕಿಸುವ ಮಾಸಾಯಿ ಮಾರಾ ಮತ್ತು ನೈರೋಬಿ ಸೇರಿದಂತೆ ಕೀನ್ಯಾದಾದ್ಯಂತ ಪ್ರಮುಖ ಪ್ರವಾಸಿ ತಾಣಗಳೊಂದಿಗೆ ವಿಮಾನಗಳನ್ನು ನಿರ್ವಹಿಸುತ್ತದೆ.
ಇದನ್ನೂ ಓದಿ: ಚಿಕ್ಕವ್ವ ಚಿಕ್ಕವ್ವ ದ್ವಾಸೆ ಕೊಡು.. ದೊಡ್ಡವ್ವ ದೊಡ್ಡವ್ವ ಚಟ್ನಿ ಕೊಡು.. ಗಿಲ್ಲಿ ಸಾಂಗ್ ಸಖತ್ ಟ್ರೆಂಡ್..! VIDEO
First responders at Tsimba Kwale area where a plane carrying 12 people crashed on Tuesday pic.twitter.com/CNg8wW7sna
— NTV Kenya (@ntvkenya) October 28, 2025
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us