/newsfirstlive-kannada/media/media_files/2025/10/28/gilli-gilli-song-2025-10-28-16-51-10.jpg)
ಬಿಗ್​ ಬಾಸ್​ ಮನೆಯಲ್ಲಿ ಗಿಲ್ಲಿ ಹವಾ ಜೋರಾಗಿದೆ. ಗಿಲ್ಲಿ ಹೊಡೆಯೋ ಡೈಲಾಗ್​ಗಳು ಗಲ್ಲಿ ಗಲ್ಲಿಯಲ್ಲಿಯೂ ಜನಪ್ರಿಯತೆ ಪಡೆಯುತ್ತಿವೆ. ಈಗಂತೂ ಸಿಕ್ಕಾಪಟ್ಟೆ ಟ್ರೆಂಡಿಂಗ್​ನಲ್ಲಿರೋ ಡೈಲಾಗ್​ ಅಂದ್ರೆ ಚಿಕ್ಕವ್ವ ಚಿಕ್ಕವ್ವ ದ್ವಾಸೆ ಕೊಡು.. ದೊಡ್ಡವ್ವ ದೊಡ್ಡವ್ವ ಚಟ್ನಿ ಕೊಡು..
ಹೌದು, ಗೆಜ್ಜೆ ಸೌಂಡ್​ ಮಾಡಿ ಇಡೀ ಮನೆಯ ಗೆಂಗಣ್ಣಿಗೆ ಗುರಿಯಾಗಿದ್ರು ಅಶ್ವಿನಿ ಹಾಗೂ ಜಾನ್ವಿ. ತಾವು ಮಾಡಿದ ತಪ್ಪನ್ನ ರಕ್ಷಿತಾ ತಲೆಗೆ ಕಟ್ಟಿದ್ರು. ಈ ಬಗ್ಗೆ ಭಾರಿ ಚರ್ಚೆಯಾಗಿತ್ತು. ರಕ್ಷಿತಾ ಪರ ಗಿಲ್ಲಿ ಧ್ವನಿ ಎತ್ತಿದ್ರು. ಗಿಲ್ಲಿ ನಡೆ ಮೆಚ್ಚಿ ಕಿಚ್ಚ ಚಪ್ಪಾಳೆ ನೀಡಿದ್ರು. ಇದೇ ಸಮಯದಲ್ಲಿ ಗಿಲ್ಲಿನ ಸಿಲ್ಲಿ ಅಂತಿದ್ದವ್ರಿಗೆ ಒಂದ್​ ಡೈಲಾಗ್​ ಹೊಡೆದಿದ್ರು.
ಇದನ್ನೂ ಓದಿ:BBK12; ರಾಶಿಕಾ-ರಘು ನಡುವೆ ಗಲಾಟೆ.. ಜಾಹ್ನವಿ, ರಿಷಾ, ಧನುಷ್ ಕಣ್ಣೀರು.. ಕಾರಣವೇನು?
ರಕ್ಷಿತಾಗೆ ಅಶ್ವಿನಿ ಹಾಗೂ ಜಾನ್ವಿ ಅವ್ರನ್ನ ತೋರಿಸಿ ಹಳ್ಳಿ ಸೊಗಡನಲ್ಲಿ ಪದ ಕಟ್ಟಿ ನೀವು ಮಾಡಿದ್ದು ತಪ್ಪು.. ತಪ್ಪು ಎಂದಿದ್ದ ಗಿಲ್ಲಿ. ಇದೇ ಈಗ ಟ್ರೆಂಡ್​ ಸೃಷ್ಟಿಸಿದೆ. ಗಿಲ್ಲಿ ಡೈಲಾಗ್​ಗೆ ಯುವ ಮ್ಯೂಸಿಕ್ ಪ್ರಡ್ಯೂಸರ್ ಐನ್‌ಸ್ಟನ್ ಫರ್ನಾಂಡಿಸ್ ಸಖತ್​ ಆಗಿರೋ ಬೀಟ್​ ಕಂಪೋಸ್ ಮಾಡಿದ್ದು, todays beats ಪೇಜ್​ನಲ್ಲಿ ಗಿಲ್ಲಿ ಹಾಡು ರಾರಾಜಿಸ್ತಿದೆ. ಇವ್ರ ಕ್ರಿಟಿವೀಟಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗ್ತಿದೆ.
ನಟಿಯರಾದ ಸಂಗೀತಾ ಶೃಂಗೇರಿ, ಐಶ್ವರ್ಯಾ ಶಿಂಧೋಗಿ, ಅನುಪಮಾ ಗೌಡ, ಅದ್ವಿತಿ ಶೆಟ್ಟಿ, ಅರ್ಚನಾ ಸೇರಿದಂತೆ ಲಕ್ಷಾಂತರ ಜನ ಈ ಬೀಟ್​ನ ಇಷ್ಟಪಟ್ಟಿದ್ದಾರೆ. 1.2 ಮಿಲೀಯನ್​ ವೀಕ್ಷಣೆ ಪಡೆದಿದ್ದು, 8,583 ಕಾಮೆಂಟ್​ಗಳು ಹರಿದುಬಂದಿವೆ.
ಗಿಲ್ಲಿ ಪಂಚ್​, ಐನ್‌ಸ್ಟನ್ ಬೀಟ್​ ಸೌಂಡ್​ ಕುಣಿಯುಂವಂತೆ ಮಾಡಿದ್ದು, ಇವ್ರ ಈ ಬೀಟ್​​ಗೆ ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ರೀಲ್ಸ್​ಗಳ ಸುರಿಮಳೆ ಆಗ್ತಿದೆ. ಗಿಲ್ಲಿ ಡೈಲಾಗ್​ ಮಾತ್ರವಲ್ಲ.. ರಕ್ಷಿತಾ ಮಾತ್ನಾಡೋ ಅರ್ಧಂಬರ್ಧ ಕನ್ನಡ್ಕೂ ಸಖತ್​ ಆಗಿರೋ ಬೀಟ್​ ಕಂಪೋಸ್ ಮಾಡಿದ್ರು ಐನ್‌ಸ್ಟನ್ ಫರ್ನಾಂಡಿಸ್. ರಕ್ಷಿತಾ, ಮಂಜು ಭಾಷಿಣಿ ಗಲಾಟೆಗೆ ಮ್ಯೂಸಿಕ್​ ಸೇರಿಸಿ ಸಖತ್​ ಕಿಕ್​ ಕೊಟ್ಟಿದ್ರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us