/newsfirstlive-kannada/media/media_files/2025/10/28/jahnvi-and-ashwini-2025-10-28-15-55-01.jpg)
ಬಿಗ್​ಬಾಸ್​ ಸೀಸನ್-12 ದಿನದಿಂದ ದಿನಕ್ಕೆ ರೋಚಕ ತಿರುವು ಪಡೆಯುತ್ತಿದೆ. ಈಗಾಗಲೇ ಕಲರ್ಸ್​ ಕನ್ನಡ ಪ್ರೋಮೋ ರಿಲೀಸ್​ ಮಾಡಿದ್ದು, ಬಿಗ್​ಬಾಸ್ ನೀಡಿದ ಪ್ರೀತಿ ಟಾಸ್ಕ್​ ಕೆಲ ಸ್ಪರ್ಧಿಗಳ ಮನಸ್ತಾಪಕ್ಕೆ ಕಾರಣವಾಗಿದೆ.
ಬಿಗ್​ಬಾಸ್​12ರಲ್ಲಿ ಜೋಡೆತ್ತುಗಳಂತಿದ್ದ ಜಾಹ್ನವಿ ಹಾಗು ಅಶ್ವಿನಿ ಗೌಡ ನಡುವೆ ಬಿರುಕು ಮೂಡಿದೆ. ಈ ವೇಳೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದ ಅಶ್ವಿನಿ ಗೌಡ ನಿಸ್ವಾರ್ಥದಿಂದ ಕೊಡುವಂತದ್ದೇ ಪ್ರೀತಿ.. ಎಷ್ಟೋ ಜನ ನಮ್ಮ ಬೆನ್ನಹಿಂದೆ ದುಷ್ಮನ್​ಗಳು ಪಿತೂರಿ ಮಾಡ್ತಾರೆ. ಅವರ ಮೇಲೂ ಕೆಲವೊಮ್ಮೆ ಪ್ರೀತಿ ಆಗಬಹುದು ಎಂದು ಪರೋಕ್ಷವಾಗಿ ಜಾಹ್ನವಿಗೆ ಟಾಂಗ್​​ ಕೊಟ್ಟಿದ್ದಾರೆ.
/filters:format(webp)/newsfirstlive-kannada/media/media_files/2025/10/28/bb12-1-2025-10-28-15-30-43.jpg)
ಇದಕ್ಕೆ ಪ್ರತಿಕ್ರಿಯಿಸಿದ ಜಾಹ್ನವಿ ಪ್ರೀತಿನಾ ಗಳಿಸಬಹುದು. ಆದ್ರೆ ಉಳಿಸಿಕೊಳ್ಳೋದು ಕಷ್ಟ ಎಂದು ಅಶ್ವಿನಿ ಗೌಡ ಮಾತಿಗೆ ಟಕ್ಕರ್ ನೀಡಿದ್ದಾರೆ. ಒಟ್ಟಾರೆ ದಿನೇ ದಿನೇ ಒಂದಲ್ಲಾ ಒಂದು ತಿರುವುಗಳನ್ನು ಪಡೆಯುತ್ತಿರುವ ಬಿಗ್​ಬಾಸ್​ನಲ್ಲಿ, ಸ್ಪರ್ಧೆಯಲ್ಲಿ ಸಂಬಂಧಗಳು ಶಾಶ್ವತವಲ್ಲ ಎಂಬುದು ಸಾಬೀತಾಗಿದೆ.
ಇದನ್ನೂ ಓದಿ:ಶ್ರೇಯಸ್ ಅಯ್ಯರ್​ ಬಗ್ಗೆ ಬಿಗ್ ಅಪ್​ಡೇಟ್​.. ಕ್ಯಾಪ್ಟನ್ ಸೂರ್ಯಕುಮಾರ್ ಏನ್ ಹೇಳಿದರು?
ಬಿಗ್ ಬಾಸ್ ಮನೆಯಲ್ಲಿ ಪ್ರೀತಿ ಅಂದ್ರೆ....?
— Colors Kannada (@ColorsKannada) October 28, 2025
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9:30 | ಶನಿ-ಭಾನು ರಾತ್ರಿ 9#BiggBossKannada12#BBK12#ColorsKannada#AdeBeruHosaChiguru#ಕಲರ್ಫುಲ್ಕತೆ#colorfulstory#KicchaSudeep#ExpectTheUnexpected#CKPromopic.twitter.com/VI6K1MUd0Y
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us