/newsfirstlive-kannada/media/media_files/2025/10/28/shreyas_iyer_surya-2025-10-28-12-53-17.jpg)
ಶ್ರೇಯಸ್ ಅಯ್ಯರ್ ಮೂರನೇ ಏಕದಿನ ಪಂದ್ಯದ ನಡುವೆ ಪಕ್ಕೆಲುಬಿನ ಗಾಯಕ್ಕೆ ಒಳಗಾಗಿ ಆಸ್ಟ್ರೇಲಿಯಾದ ಸಿಡ್ನಿಯಲ್ಲಿನ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು. ಅಲ್ಲಿ ಅವರಿಗೆ ಮೊದಲು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಇದೀಗ ಶ್ರೇಯಸ್ ಅಯ್ಯರ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು ಈ ಬಗ್ಗೆ ಟೀಮ್ ಇಂಡಿಯಾದ ಟಿ20 ಕ್ಯಾಪ್ಟನ್​ ಸೂರ್ಯಕುಮಾರ್ ಅವರು ಮಾತನಾಡಿದ್ದಾರೆ.
ಆಸ್ಟ್ರೇಲಿಯಾದ ಕ್ಯಾನ್​ಬೇರಾದಲ್ಲಿ ನಾಳೆ ನಡೆಯುವ ಟಿ20 ಪಂದ್ಯಕ್ಕೂ ಮೊದಲು ಆಯೋಜಿಸಿದ್ದ ಮಾಧ್ಯಮಗೋಷ್ಠಿಯಲ್ಲಿ ಸೂರ್ಯಕುಮಾರ್ ಅವರು ಮಾತನಾಡಿ, ಶ್ರೇಯಸ್ ಅಯ್ಯರ್ ಟಿ20 ತಂಡದಲ್ಲಿ ಇಲ್ಲದಿದ್ದರೂ ಇಡೀ ಭಾರತ ತಂಡ ಅವರೊಂದಿಗೆ ಸಂಪರ್ಕದಲ್ಲಿದೆ. ಅವರ ಆರೋಗ್ಯ ಸ್ಥಿರವಾಗಿದ್ದು ಐಸಿಯುನಿಂದ ಈಗಾಗಲೇ ಹೊರ ಬಂದಿದ್ದಾರೆ. ಅಯ್ಯರ್ ಎಲ್ಲರ ಜೊತೆ ಮಾತನಾಡುತ್ತಿದ್ದಾರೆ. ಮೆಸೇಜ್​ಗಳಿಗೆ ರಿಪ್ಲೇ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ನನಗೆ ಯಾವಾಗ ಶ್ರೇಯಸ್ ಅಯ್ಯರ್ ಇಂಜುರಿಗೆ ಒಳಗಾಗಿದ್ದಾರೆ ಎಂದು ಗೊತ್ತಾಯಿತೋ ತಕ್ಷಣ ಭೌತಚಿಕಿತ್ಸಕ ಕಮಲೇಶ್ ಜೈನ್ ಅವರಿಗೆ ಫೋನ್ ಮಾಡಿ ಅಪ್​ಡೇಟ್ ತೆಗೆದುಕೊಂಡೆ. ಬಳಿಕ ಅಯ್ಯರ್​ಗೆ ಮೆಸೇಜ್ ಮಾಡಿದೆ. ಅದಕ್ಕೆ ಅವರು ರಿಪ್ಲೇ ಮಾಡಿದ್ದಾರೆ. ಅಂದರೆ ಶ್ರೇಯಸ್​ ಆರೋಗ್ಯ ಸ್ಥಿರವಾಗಿದೆ. ವೈದ್ಯರು ಅವರ ಜೊತೆ ಇದ್ದು, ಎಲ್ಲರ ಜೊತೆ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
/filters:format(webp)/newsfirstlive-kannada/media/media_files/2025/10/26/shreyas_iyer_injury-2025-10-26-07-18-04.jpg)
ಶ್ರೇಯಸ್ ಅಯ್ಯರ್ ಅಂತಹ ಟ್ಯಾಲೆಂಟ್​ ಪ್ಲೇಯರ್​ಗೆ ಅಪರೂಪಕ್ಕೆ ಒಮ್ಮೆ ಅಪರೂಪದ ಗಾಯಗಳು ಸಂಭವಿಸುತ್ತವೆ. ಇಂತಹ ಆಕಸ್ಮಿಕ ಘಟನೆಗಳು ಯಾವಗಲೋ ಒಮ್ಮೆ ನಮ್ಮ ಅದೃಷ್ಟ ಕೆಟ್ಟಾಗ ಸಂಭವಿಸುತ್ತವೆ. ಸದ್ಯ ಅವರಿಗೆ ಏನು ಆಗಿಲ್ಲ, ಚೆನ್ನಾಗಿದ್ದಾರೆ. ನಾವು ಟಿ20 ಸರಣಿ ಮುಗಿಸಿಕೊಂಡು ಹೋಗುವಾಗ ಶ್ರೇಯಸ್ ಅಯ್ಯರ್​ ಅವರನ್ನು ಜೊತೆಯಲ್ಲಿ ಭಾರತಕ್ಕೆ ಕರೆದುಕೊಂಡು ಹೋಗುತ್ತೇವೆ ಎಂದು ಸೂರ್ಯಕುಮಾರ್ ಹೇಳಿದರು.
ಈಗಾಗಲೇ ಒಡಿಐ ಸರಣಿಯನ್ನು ಸೋತಿರುವ ಟೀಮ್ ಇಂಡಿಯಾ 5 ಪಂದ್ಯಗಳ ಟಿ20 ಸರಣಿಯನ್ನು ಆಸ್ಟ್ರೇಲಿಯಾ ವಿರುದ್ಧ ಆಡಲಿದೆ. ನಾಳೆ ಮೊದಲ ಮ್ಯಾಚ್ ಕ್ಯಾನ್​ಬೇರಾದಲ್ಲಿ ನಡೆಯಲಿದ್ದು ಎಲ್ಲ ಆಟಗಾರರು ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ. ಏಷ್ಯಾ ಕಪ್​ನಲ್ಲಿ ಗೆಲುವು ಪಡೆದಿರುವ ಸೂರ್ಯಕುಮಾರ್ ಪಡೆ ಆಸ್ಟ್ರೇಲಿಯಾ ವಿರುದ್ಧ ಗೆಲ್ಲುವ ಭರವಸೆಯಲ್ಲಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us