Advertisment

ಅಮೆಜಾನ್​​ನಿಂದ ಉದ್ಯೋಗಿಗಳಿಗೆ ಬಿಗ್ ಶಾಕ್​.. ಮ್ಯಾನೇಜರ್​ ಸೇರಿ 30,000 ಜಾಬ್​ಗಳಿಗೆ ಕತ್ತರಿ..!

ಹೊರ ಹೋಗುವ ಉದ್ಯೋಗಿಗಳ ಜೊತೆ ಯಾವ ರೀತಿ ಸಂವಹನ ಮಾಡಬೇಕು ಎಂದು ಮ್ಯಾನೇಜರ್​ಗಳಿಗೆ ಇಮೇಲ್​ಗಳನ್ನು ಮಾಡಲಾಗಿದೆ. ಈ ಸಂಬಂಧ ಮ್ಯಾನೇಜರ್​ಗಳಿಗೆ ತರಬೇತಿ ನೀಡಬೇಕು ಎಂದು ಕೇಳಲಾಗಿದೆ.

author-image
Bhimappa
AMAZON
Advertisment

ಜೆಫ್​ ಬೆಜಾಸ್​ ಒಡೆತನದ ವಿಶ್ವದ ದೈತ್ಯ ಕಂಪನಿಯಾದ ಅಮೆಜಾನ್ 30 ಸಾವಿರ ಉದ್ಯೋಗಿಗಳನ್ನು ತೆಗೆದು ಹಾಕುತ್ತದೆ ಎಂದು ಹೇಳಲಾಗುತ್ತಿದೆ. ಕಂಪನಿಯ ಖರ್ಚು ಹಾಗೂ ಹೆಚ್ಚವರಿ ನೇಮಕಾತಿಯನ್ನು ಸರಿದೂಗಿಸಲು ಅಮೆಜಾನ್ ಈ ನಿರ್ಧಾರ ಮಾಡಿದೆ ಎನ್ನಲಾಗುತ್ತಿದೆ.

Advertisment

ಸದ್ಯ ಅಮೆಜಾನ್​ನಲ್ಲಿ ಒಟ್ಟು 1.55 ಮಿಲಿಯನ್ (1,550,000)​ ಉದ್ಯೋಗಿಗಳು ಇದ್ದಾರೆ. ಕಾರ್ಪೋರೆಟ್ ಉದ್ಯೋಗಿಗಳಿಗೆ ಹೋಲಿಸಿದರೆ ಶೇಕಡಾ 10ರಷ್ಟು ಮಾತ್ರ ಅಮೆಜಾನ್ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುತ್ತಿದೆ. ಅಮೆಜಾನ್ ಕಂಪನಿಯಲ್ಲಿ ಈ ಬಾರಿ ಒಟ್ಟು 30,000 ಸಾವಿರ ಜನರಿಗೆ ಹುದ್ದೆಯಿಂದ ಗೇಟ್​ ಪಾಸ್ ನೀಡಲಾಗುತ್ತಿದೆ. 2022ಕ್ಕೆ ಹೋಲಿಸಿದರೆ ಇದು ಅತ್ಯಂತ ದೊಡ್ಡ ಉದ್ಯೋಗ ಕಡಿತವಾಗಿದೆ. 2022ರಲ್ಲಿ ಅಮೆಜಾನ್ 27,000 ಜನರನ್ನು ಹೊರಗೆ ಹಾಕಿತ್ತು. 

ಇದನ್ನೂ ಓದಿ: Ind vs Aus T20; ಅಭಿಷೇಕ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಅಂದ್ರೆ ಆಸ್ಟ್ರೇಲಿಯಾಗೆ ಭಯ..!

AI ಸ್ವಯಂಚಾಲಿತ ಕೆಲಸ.. ಹಲವು ಉದ್ಯೋಗಗಳಿಗೆ ಭಾರೀ ಹೊಡೆತ- Amazon CEO

ಕಳೆದ ಎರಡು ವರ್ಷಗಳಿಂದ ಅಮೆಜಾನ್ ಕಮ್ಯುನಿಕೇಶನ್ ಮತ್ತು ಪಾಡ್​ಕಾಸ್ಟಿಂಗ್​ನಲ್ಲಿ ಸಣ್ಣ ಉದ್ಯೋಗಗಳನ್ನು ಕಡಿತ ಮಾಡುತ್ತ ಬರುತ್ತಿದೆ. ಕಂಪನಿ ಈ ವಾರದಿಂದ ಉದ್ಯೋಗಗಳನ್ನು ಕಡಿತ ಮಾಡುತ್ತಿದ್ದು ಇದರಲ್ಲಿ ಹೆಚ್​ಆರ್​ (Human Resources), People Experience ಮತ್ತು  Technology ಡಿಪಾರ್ಟ್​ಮೆಂಟ್​ನವರು ಸೇರಿದ್ದಾರೆ ಎಂದು ಹೇಳಲಾಗಿದೆ.

Advertisment

ಹೊರ ಹೋಗುವ ಉದ್ಯೋಗಿಗಳ ಜೊತೆ ಯಾವ ರೀತಿ ಸಂವಹನ ಮಾಡಬೇಕು ಎಂದು ಮ್ಯಾನೇಜರ್​ಗಳಿಗೆ ಇಮೇಲ್​ಗಳನ್ನು ಮಾಡಲಾಗಿದೆ. ಈ ಸಂಬಂಧ ಮ್ಯಾನೇಜರ್​ಗಳಿಗೆ ತರಬೇತಿ ನೀಡಬೇಕು ಎಂದು ಕೇಳಲಾಗಿದೆ. ಅಮೆಜಾನ್ ಸಿಇಒ ಆಂಡಿ ಜಾಸ್ಸಿ ಅವರು ಮಿತಿಮೀರಿರುವ ಉದ್ಯೋಗಗಳನ್ನು ಕಡಿತ ಮಾಡಲು ಒಂದು ಉಪಕ್ರಮ ಕೈಗೊಂಡಿದ್ದಾರೆ. ಇದರಲ್ಲಿ ಹಲವಾರು ಮ್ಯಾನೇಜರ್​ಗಳು ಕೂಡ ಮನೆಗೆ ಹೋಗಲಿದ್ದಾರೆ ಎಂದು ಹೇಳಲಾಗುತ್ತಿದೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Job Amazon
Advertisment
Advertisment
Advertisment