Advertisment

Ind vs Aus T20; ಅಭಿಷೇಕ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಅಂದ್ರೆ ಆಸ್ಟ್ರೇಲಿಯಾಗೆ ಭಯ..!

ಕ್ರಿಕೆಟ್​ ಲೋಕದಲ್ಲಿ ಸೆನ್ಸೇಷನ್​ ಹುಟ್ಟು ಹಾಕಿರೋ ಮಾಡ್ರನ್​ ಡೇ ಮಾಂತ್ರಿಕ. ದಡಂ ದಶಗುಣಂ, ಬಾಲ್ ಇರೋದೆ ದಂಡಿಸೋಕೆ ಅನ್ನೋದೆ ಈತನ ಮಂತ್ರ. ಎದುರಿಸೋ ಮೊದಲ ಎಸೆತದಿಂದ ಕೊನೆಯ ಎಸೆತವರೆಗೆ ಬ್ಯಾಟಿಂಗ್​ ಸ್ಟೈಲ್​ ಬದಲಾಗಲ್ಲ.

author-image
Bhimappa
ABHISHEK_SHARMA_75
Advertisment

ಒನ್​ ಡೇ ಸಿರೀಸ್​ ಆಯ್ತು. ನಾಳೆಯಿಂದ ಇಂಡೋ-ಆಸಿಸ್​​ ಚುಟುಕು ಕದನ ಆರಂಭವಾಗಲಿದೆ. ಅಭಿಮಾನಿಗಳ ಚಿತ್ತ ಕೂಡ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾರಿಂದ ಅಭಿಷೇಕ್​ ಶರ್ಮಾ ಕಡೆಗೆ ಶಿಫ್ಟ್​ ಆಗಿದೆ. ಟಿ20 ಕ್ರಿಕೆಟ್​​ನ ನಯಾ ಡಾನ್​ ಆಸ್ಟ್ರೇಲಿಯಾ ಹೇಗೆ ಪರ್ಫಾಮ್​ ಮಾಡ್ತಾರೆ ಅನ್ನೋ ಕುತೂಹಲ ಫ್ಯಾನ್ಸ್​ ವಲಯದಲ್ಲಿದೆ. ಇನ್ನೊಂದೆಡೆ ಕಾಂಗರೂಗಳ ಕ್ಯಾಂಪ್​ನಲ್ಲಿ ಪಂಜಾಬ್​​ ಪುತ್ತರ್​ ಫಿಯರ್​ ಶುರುವಾಗಿದೆ. 

Advertisment

ಇಂಡೋ-ಆಸಿಸ್​ ಟಿ20 ಸರಣಿ ಆರಂಭಕ್ಕೆ ಕೌಂಟ್​ಡೌನ್​ ಶುರುವಾಗಿದೆ. ಕ್ಯಾನ್​ಬೆರಾದಲ್ಲಿ ನಾಳೆ ಮೊದಲ ಪಂದ್ಯ ನಡೆಯಲಿದ್ದು ಚುಟುಕು ಕ್ರಿಕೆಟ್​ ಕದನಕ್ಕೆ ಮದಗಜಗಳ ತಯಾರಿ ಜೋರಾಗಿದೆ. ಏಕದಿನ ಸರಣಿ ಕೈ ಚೆಲ್ಲಿರೋ ಟೀಮ್​ ಇಂಡಿಯಾ, ಟಿ20 ಸರಣಿ ಗೆಲ್ಲೋ ಹಠಕ್ಕೆ ಬಿದ್ದಿದೆ. ಕಠಿಣ ಅಭ್ಯಾಸ ನಡೆಸಿ ಸೂರ್ಯನ ಸೈನ್ಯ ಕಾಂಗರೂ ಬೇಟೆಯಾಡಲು ರೆಡಿಯಾಗ್ತಿದೆ. 

ABHISHEK_SHARMA_50 (1)

ಆಸ್ಟ್ರೇಲಿಯನ್ನರಿಗೆ ಪಂಜಾಬ್​ ಪುತ್ತರ್​​ ಭಯ​.!

ಅಭಿಷೇಕ್ ಶರ್ಮಾ... ಆಡಿದ ಟಿ20 ಪಂದ್ಯಗಳಿಂದಲೇ ಕ್ರಿಕೆಟ್​ ಲೋಕದಲ್ಲಿ ಸೆನ್ಸೇಷನ್​ ಹುಟ್ಟು ಹಾಕಿರೋ ಮಾಡ್ರನ್​ ಡೇ ಮಾಂತ್ರಿಕ. ದಡಂ ದಶಗುಣಂ, ಬಾಲ್ ಇರೋದೆ ದಂಡಿಸೋಕೆ ಅನ್ನೋದೆ ಈತನ ಮಂತ್ರ. ಎದುರಿಸೋ ಮೊದಲ ಎಸೆತದಿಂದ ಕೊನೆಯ ಎಸೆತವರೆಗೆ ಬ್ಯಾಟಿಂಗ್​ ಸ್ಟೈಲ್​ ಬದಲಾಗಲ್ಲ. ಕ್ರಿಸ್​ನಲ್ಲಿ ಸೆಟಲ್​ ಆದ ಮೇಲೆ ಬೌಂಡರಿಗಳ ಬೋರ್ಗರೆತ, ಸಿಕ್ಸರ್​​ ಸುರಿಮಳೆ ಸುರಿಸೋ ಈ ಯಂಗ್​​​ ಬ್ಯಾಟರ್​​ ತನ್ನ ಟೆರರ್​​ ಆಟದಿಂದಲೇ ನಡುಕ ಹುಟ್ಟಿಸಿದ್ದಾರೆ. ಈಗ ಆಸ್ಟ್ರೇಲಿಯಾ ಪಡೆಯಲ್ಲೂ ಅಷ್ಟೇ.. ಢವ..ಢವ.. ಶುರುವಾಗಿದೆ. 

T20 ಸರಣಿಯಲ್ಲಿ ಕಾಂಗರೂಗಳಿಗೆ ಕಾದಿದೆ ಮಾರಿ ಹಬ್ಬ.!

ಆಟ & ಆ್ಯಟಿಟ್ಯೂಡ್​ ಎರಡರಿಂದಲೂ ಗಮನ ಸೆಳೆದಿರೋ ಅಭಿಷೇಕ್​ ಶರ್ಮಾ ಕಾಂಗರೂ ನಾಡಲ್ಲೂ ಕಮಾಲ್​ ಮಾಡೋಕೆ ರೆಡಿಯಾಗಿದ್ದಾರೆ. ಭರ್ಜರಿ ಸಿದ್ಧತೆ ನಡೆಸಿ ಅಭಿಷೇಕ್​ ಯುದ್ಧಕ್ಕೆ ಸಜ್ಜಾಗ್ತಿದ್ದಾರೆ. ಇನ್ನೊಂದೆಡೆ ಟೀಮ್​ ಇಂಡಿಯಾದ ಫೈರಿ ಓಪನರ್​ ಹೆಸ್ರು ಆಸ್ಟ್ರೇಲಿಯಾ ಡ್ರೆಸ್ಸಿಂಗ್​ ರೂಮ್​ನಲ್ಲಿ ಸಖತ್​ ಚರ್ಚೆಯಲ್ಲಿದೆ. ಜೋಷ್​ ಹೇಜಲ್​ವುಡ್​, ಸೀನ್​ ಅಬಾಟ್​, ನಥನ್​ ಎಲ್ಲೀಸ್​ರಂತಾ ದಿಗ್ಗಜ ಬೌಲರ್​​ಗಳಿದ್ರೂ ಯುವ ಆಟಗಾರನ ಫಿಯರ್ ಆಸಿಸ್​ ಪಡೆಯಲ್ಲಿ ಶುರುವಾಗಿದೆ. 

Advertisment

ಏಷ್ಯಾಕಪ್​ನಲ್ಲಿ ಧೂಳೆಬ್ಬಿಸಿದ ಪಂಜಾಬ್​ ಪುತ್ತರ್.!

ಯುಎಇನಲ್ಲಿ ನಡೆದ ಏಷ್ಯಾಕಪ್​​ನಲ್ಲಿ ಅತಿ ಹೆಚ್ಚು ಸದ್ದು ಮಾಡಿದ್ದು ಅಭಿಷೇಕ್​ ಶರ್ಮಾ ಆಟ. ಅರಬ್ಬರ ನಾಡಲ್ಲಿ ಅಬ್ಬರದ ಬ್ಯಾಟಿಂಗ್​ ನಡೆಸಿದ್ದ ಅಭಿಷೇಕ್​ ಶರ್ಮಾ ಅಕ್ಷರಶಃ ಧೂಳೆಬ್ಬಿಸಿದರು. ನಿರ್ಭೀತಿಯಿಂದ ಬೌಲರ್​ಗಳನ್ನ ಬೆಂಡೆತ್ತಿದ್ದ ಅಭಿಷೇಕ್​ 200ರ ಸ್ಟ್ರೈಕ್​ರೇಟ್​ನಲ್ಲಿ ರನ್​ ಕೊಳ್ಳೆ ಹೊಡೆದಿದರು. 7 ಪಂದ್ಯದಿಂದ 44.85ರ ಸರಾಸರಿಯಲ್ಲಿ 314 ರನ್​ಗಳಿಸಿ ಪಂಜಾಬ್​ ಪುತ್ತರ್​ ಮಿಂಚಿದ್ರು. ಕ್ರಿಕೆಟ್​ ಲೋಕ ಕಂಡ ಲೆಜೆಂಡ್ಸ್​, ಎಕ್ಸ್​ಪರ್ಟ್ಸ್​​​, ಫ್ಯಾನ್ಸ್​ ಎಲ್ಲರ ಬಾಯಲ್ಲೂ ಅಭಿಷೇಕ್​ ಶರ್ಮಾ ಬಗ್ಗೆನೇ ಚರ್ಚೆಗಳು ನಡೆದಿತ್ತು. 

ಆಸಿಸ್​​ ನೆಲದಲ್ಲಿ ಅಭಿಷೇಕ್​ ಶರ್ಮಾಗೆ ಅಗ್ನಿಪರೀಕ್ಷೆ​.!

ಆಡಿದ 24 ಟಿ20 ಪಂದ್ಯಗಳಲ್ಲಿ 196ರ ಸ್ಟ್ರೈಕ್​ರೇಟ್​ನಲ್ಲಿ ರನ್​ ಕೊಳ್ಳೆ ಹೊಡೆದು ಅಭಿಷೇಕ್​ ಶರ್ಮಾ ಅಬ್ಬರಿಸಿರಬಹುದು. ಕ್ರಿಕೆಟ್​ ಲೋಕದಲ್ಲಿ ಹೊಸ ಸೆನ್ಸೇಷನ್​ ಅನ್ನೇ ಸೃಷ್ಟಿಸಿರಬಹುದು. ಆದ್ರೆ, ಅಭಿಷೇಕ್​ಗೆ ಅಸಲಿ ಅಗ್ನಿಪರೀಕ್ಷೆ ಎದುರಾಗ್ತಿರೋದು ಈಗ. ಅದೂ ಆಸ್ಟ್ರೇಲಿಯಾದಲ್ಲಿ. ಭಾರತ, ಯುಎಇ ಕಂಡಿಷನ್ಸ್​ನಲ್ಲಿ ಆಡಿದಂತೆ ಆಸ್ಟ್ರೇಲಿಯಾದಲ್ಲಿ ಆಡೋಕಾಗಲ್ಲ. ಬೌಲರ್​ಗಳಿಗೆ ಹೆಚ್ಚು ನೆರವಾಗೋ ಪೇಸ್ ​& ಬೌನ್ಸಿ ಟ್ರ್ಯಾಕ್​ನಲ್ಲಿ ಬ್ಯಾಟರ್ಸ್​ ರಿಯಲ್​ ಟೆಸ್ಟ್​​ ನಡೆಯುತ್ತೆ. ಜೊತೆಗೆ ವರ್ಲ್ಡ್​​​ ಕ್ಲಾಸ್​ ಬೌಲರ್ಸ್​​ ಆಸ್ಟ್ರೇಲಿಯಾ ತಂಡದಲ್ಲಿದ್ದಾರೆ. ಈ ಅಗ್ನಿಪರೀಕ್ಷೆಯನ್ನ ಗೆದ್ದು ಅಭಿಷೇಕ್​​ ಸಾಮರ್ಥ್ಯ ನಿರೂಪಿಸ್ತಾರಾ ಅನ್ನೋದು ಎಲ್ಲರಲ್ಲೂ ಕುತೂಹಲ ಹೆಚ್ಚಿಸಿದೆ. 

ಇದನ್ನೂ ಓದಿ: ಪಂಚ್​ ಡೈಲಾಗ್​ ಬೇಕಿಲ್ಲ, ಕ್ಯಾಪ್ಟನ್​ನಿಂದ ರನ್​ಗಳು​ ಬೇಕು.. ಸೂರ್ಯಗೆ ಕೋಚ್ ಗಂಭೀರ್​ ಟಾರ್ಚ್..!

Advertisment

ABHISHEK_SHARMA (1)

ಗುರುವಿನ ಗರಡಿಯಲ್ಲಿ ಅಭಿಷೇಕ್​ ಸ್ಪೆಷಲ್​ ಅಭ್ಯಾಸ.!

ಆಸ್ಟ್ರೇಲಿಯಾದ ಟಫ್​ ಕಂಡಿಷನ್ಸ್​ನಲ್ಲಿ ಬ್ಯಾಟಿಂಗ್​ ನಡೆಸೋದು ಕಷ್ಟ ಅನ್ನೋದು ಸ್ವತಃ ಅಭಿಷೇಕ್​ ಶರ್ಮಾಗೂ ಗೊತ್ತು. ಇದಕ್ಕಾಗಿ ವಿಶೇಷ ಸಿದ್ಧತೆಯನ್ನ ನಡೆಸಿಯೇ ಅಭಿಷೇಕ್​ ಆಸಿಸ್​ ಫ್ಲೈಟ್​ ಹತ್ತಿದ್ದಾರೆ. ಕೆಲ ದಿನಗಳಿಂದ ಗುರು ಯುವರಾಜ್ ಸಿಂಗ್​ ಗರಡಿಗೆ ತೆರಳಿದ್ದ ಅಭಿಷೇಕ್​ ವಿಶೇಷ ಅಭ್ಯಾಸ ನಡೆಸಿದ್ರು. ಆಸ್ಟ್ರೇಲಿಯಾ ಕಂಡಿಷನ್ಸ್​ ಬಗ್ಗೆ ಚನ್ನಾಗೆ ತಿಳಿದಿರೋ ಯುವಿ ಅಭಿಷೇಕ್​ ಸಿದ್ಧತೆಗೆ ನೆರವಾಗಿದ್ರು. ಯುವರಾಜ್​ ಮಾರ್ಗದರ್ಶನದಲ್ಲಿ ಅಭ್ಯಾಸ ನಡೆಸಿ ಅಗತ್ಯ ಟಿಪ್ಸ್​ ಪಡೆದುಕೊಂಡೆ ಅಭಿಷೇಕ್​ ಕಾಂಗರೂ ನಾಡಿಗೆ ಕಾಲಿಟ್ಟಿದ್ದಾರೆ. 

ಟಿ20 ಕ್ರಿಕೆಟ್​ನ ನಯಾ ಡಾನ್​, ನಂಬರ್​ 1 ಟಿ20 ಬ್ಯಾಟರ್​​ ಅಭಿಷೇಕ್​ ಶರ್ಮಾ ಮೇಲೆ ಕ್ರಿಕೆಟ್​ ಲೋಕ ಕುತೂಹಲ ಕಣ್ಣಿದೆ. ಏಷ್ಯಾಕಪ್​ನಂತೆ ಆಸಿಸ್​ ಪ್ರವಾಸದಲ್ಲೂ ಅಭಿಷೇಕ್​ ರನ್​ ಸುನಾಮಿ ಸೃಷ್ಟಿಸ್ತಾರಾ.? ಕಾದು ನೋಡೋಣ. 

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Advertisment
IND vs AUS Abhishek Sharma
Advertisment
Advertisment
Advertisment