/newsfirstlive-kannada/media/media_files/2025/10/28/suryakumar_gautam-2025-10-28-07-56-55.jpg)
ಟೀಮ್ ಇಂಡಿಯಾದ ಟಿ20 ತಂಡಕ್ಕೆ ರೋಹಿತ್ ಶರ್ಮಾ ಬಳಿಕ ಸೂರ್ಯಕುಮಾರ್ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡ ಮೇಲೆ ಬ್ಯಾಟಿಂಗ್​ನಲ್ಲಿ ಹೀನಾಯ ಪ್ರದರ್ಶನ ನೀಡುತ್ತಿದ್ದಾರೆ. ಐಪಿಎಲ್​ನಲ್ಲಿ ಅಬ್ಬರಿಸುವ ಸೂರ್ಯಕುಮಾರ್ ಭಾರತದ ಟಿ20 ತಂಡದಲ್ಲಿ ಬ್ಯಾಟಿಂಗ್ ಮಾಡೋದು ಅಷ್ಟಕ್ಕೆ ಅಷ್ಟೇ. ಈ ಹಿನ್ನೆಲೆಯಲ್ಲಿ ಅಪಸ್ವರ ಕೇಳಿ ಬರುತ್ತಿವೆ. ನಾಯಕನಿಂದ ತಂಡಕ್ಕೆ ರನ್​ಗಳು ಬೇಕೇ ಹೊರತು, ಪಂಚ್ ಡೈಲಾಗ್​ಗಳಲ್ಲ ಎಂದು ಹೆಡ್​ ಕೋಚ್ ಗೌತಮ್ ಗಂಭೀರ್ ಅವರು ಖಡಕ್​ ಆಗಿ ಹೇಳಿದ್ದಾರೆ.
ಇನ್ನೇನು ಕೆಲವೇ ತಿಂಗಳಲ್ಲೇ ಟಿ20 ವರ್ಲ್ಡ್​ಕಪ್​ ಬರಲಿದ್ದು ವಿಶ್ವದ ಎಲ್ಲ ತಂಡಗಳು ಬಲಿಷ್ಠ ಟೀಮ್​​ನೊಂದಿಗೆ ಅಖಾಡಕ್ಕೆ ಇಳಿಯಲಿವೆ. ಈ ಹಿನ್ನೆಲೆಯಲ್ಲಿ ಈ ಸಮಯದಲ್ಲಿ ಸೂರ್ಯಕುಮಾರ್ ಅವರ ಜವಾಬ್ದಾರಿ ಅತ್ಯಂತ ಮುಖ್ಯವಾಗಿದೆ. ತಂಡಕ್ಕೆ ದೊಡ್ಡ ಮಟ್ಟದಲ್ಲಿ ರನ್​ಗಳನ್ನು ತಂದು ಕೊಡಬೇಕಿದೆ. ಈಗಾಗಲೇ ಅವರು ಆಡಿರುವ ಇನ್ನಿಂಗ್ಸ್​ಗಳಲ್ಲಿ ಕೆಟ್ಟದಾಗಿ ಬ್ಯಾಟಿಂಗ್ ಮಾಡಿರುವುದು ಎಲ್ಲರ ಕಣ್ಣಂಚಿನಲ್ಲಿವೆ ಎಂದು ಹೇಳಲಾಗಿದೆ.
/filters:format(webp)/newsfirstlive-kannada/media/media_files/2025/09/16/suryakumar-yadav-and-tilak-varma-2025-09-16-09-54-26.jpg)
ಕ್ಯಾಪ್ಟನ್​ ಆದಾಗಿನಿಂದ ಸೂರ್ಯಕುಮಾರ್ ಅವರ ಫಾರ್ಮ್​ ಕುಸಿದಿದೆ. ಮೈದಾನದ ಹೊರಗೆ ಅವರ ಪಂಚ್ ಡೈಲಾಗ್​ಗಳಿಂದ ಅವರು ಸಾಕಷ್ಟು ಸುದ್ದಿಯಲ್ಲಿರಬಹುದು. ಏಷ್ಯಾ ಕಪ್ ಗೆದ್ದ ಮೇಲೆ 100ಕ್ಕೂ ಹೆಚ್ಚ ಸಂದರ್ಶನ ನೀಡಿರಬಹುದು. ಅವರಿಗೆ ಸಾರ್ವಜನಿಕವಾದ ಬೆಂಬಲ ಇದ್ದರೂ ತಂಡದಲ್ಲಿ ರನ್​ಗಳು ಮುಖ್ಯ. ಈ ವರ್ಷ ಸೂರ್ಯಕುಮಾರ್ 100 ರನ್​ ಮಾತ್ರ ಗಳಿಸಿದ್ದಾರೆ. ಅವರ ಡೈಲಾಗ್​ಗಳು ಫ್ಯಾನ್ಸ್​ಗೆ ಖುಷಿ ನೀಡಬಹುದು, ಆದರೆ ತಂಡಕ್ಕೆ ನಾಯಕನಿಂದ ರನ್​ಗಳು ಬೇಕು ಎಂದು ಗೌತಮ್ ಗಂಭೀರ್ ಅವರು ಹೇಳಿದ್ದಾರೆ.
ಸೂರ್ಯಕುಮಾರ್ ಅವರು 2025ರಲ್ಲಿ 11 ಇನ್ನಿಂಗ್ಸ್‌ಗಳಲ್ಲಿ 105.26 ಸ್ಟ್ರೈಕ್ ರೇಟ್‌ನಲ್ಲಿ ಕೇವಲ 100 ರನ್ ಮಾತ್ರ ಗಳಿಸಿದ್ದಾರೆ. ನಾಯಕನಾದ ನಂತರ 20 ಇನ್ನಿಂಗ್ಸ್​​ನಿಂದ 2 ಅರ್ಧಶತಕ ಸೇರಿ 330 ರನ್ ಗಳಿಸಿದ್ದಾರೆ ಅಷ್ಟೇ. ಅದೇ 2025ರ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ಪರ 16 ಇನ್ನಿಂಗ್ಸ್‌ಗಳಲ್ಲಿ 167.90 ರ ಸ್ಫೋಟಕ ಸ್ಟ್ರೈಕ್ ರೇಟ್‌ನಲ್ಲಿ 717 ರನ್ ಬಾರಿಸಿದ್ದರು. ಮುಂದೆ ವಿಶ್ವಕಪ್​ ಟೂರ್ನಿ ಬರುವುದರಿಂದ ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ ಸೂರ್ಯಕುಮಾರ್​ ಭವಿಷ್ಯ ಏನೆಂಬುದು ನಿರ್ಧಾರ ಆಗಬಹುದು ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us