/newsfirstlive-kannada/media/media_files/2025/10/28/bbk12_rashika-2025-10-28-08-42-49.jpg)
ಕಿಚ್ಚ ಸುದೀಪ್​ ಅವರು ನಡೆಸಿಕೊಡುಂತಹ ಬಿಗ್ ಬಾಸ್ ಸೀಸನ್​ 12 ಅದ್ಧೂರಿಯಾಗಿ ಮುನ್ನುಗ್ಗುತ್ತಿದೆ. ಕಂಟೆಸ್ಟೆಂಟ್​ಗಳು ಕೂಡ ಒಬ್ಬರ ಮೇಲೆ ಒಬ್ಬರ ಮೇಲೆ ಮುಗಿ ಬಿದ್ದಿದ್ದು ಜಗಳ, ಮಾತಿನ ಸಮರ ಸಾಮಾನ್ಯವಾಗಿ ಬಿಟ್ಟಿದೆ. ಇದರ ಬೆನ್ನಲ್ಲೇ ಸ್ಪರ್ಧಿಗಳ ಸಂಬಂಧಿಕರಿಗೆ ಮನೆಯ ಕ್ಯಾಪ್ಟನ್ ಫೋನ್ ಮಾಡಿದ್ದಾರೆ. ಇದಕ್ಕಾಗಿ ರಾಶಿಕಾ ಹಾಗೂ ಕ್ಯಾಪ್ಟನ್ ನಡುವೆ ಗಲಾಟೆಯೇ ನಡೆದು ಹೋಗಿದೆ.
ಬಿಗ್ ಬಾಸ್ ಮನೆಯಲ್ಲಿ ಜಾಹ್ನವಿ, ರಿಷಾ ಸೇರಿದಂತೆ ಕೆಲವು ಕಂಟೆಸ್ಟೆಂಟ್​ಗಳು ಕಣ್ಣೀರು ಹಾಕಿರುವುದು ರಿಲೀಸ್ ಆಗಿರುವ ಪ್ರೋಮೋದಿಂದ ಗೊತ್ತಾಗುತ್ತದೆ. ಕ್ಯಾಪ್ಟನ್ ರಘು ಅವರು ಬಿಗ್ ಬಾಸ್ ಸ್ಪರ್ಧಿಗಳ ಸಂಬಂಧಿಕರಿಗೆ ಫೋನ್ ಮಾಡಿ ಮಾತನಾಡಿದ್ದಾರೆ. ಈ ವೇಳೆ ಧನುಷ್ ಅವರ ತಾಯಿಗೆ ಫೋನ್ ಮಾಡಿದ್ದು ಧನುಷ್ ನಾಮಿನೇಟ್​ ಆಗಿದ್ದಾರೆ ಎಂದು ಹೇಳಿದ್ದಾರೆ. ಇದಕ್ಕೆ ಧನುಷ್ ಎಲ್ಲರ ಜೊತೆಯೂ ಚೆನ್ನಾಗಿ ಆಟ ಆಡಬೇಕಂತ ತಾಯಿ ಹೇಳಿದ್ದಕ್ಕೆ ಧನುಷ್ ಕಣ್ಣೀರು ಹಾಕಿದ್ದಾರೆ.
ಇದನ್ನೂ ಓದಿ: BBK12; ದೊಡ್ಮನೆಯಲ್ಲಿ ಕೆಂಪೇಗೌಡ ಲುಕ್​ ಕೊಟ್ಟಿದ್ದ ಗಿಲ್ಲಿ ನಟ.. ಅರ್ಧ ಮೀಸೆ ಕಟ್!
/filters:format(webp)/newsfirstlive-kannada/media/media_files/2025/10/28/bbk12_raghu-1-2025-10-28-08-43-03.jpg)
ರಾಶಿಕಾ ಅವರ ತಮ್ಮನಿಗೆ ಫೋನ್ ಮಾಡಿದ್ದ ಕ್ಯಾಪ್ಟನ್ ರಘು ಅವರು, ಬಿಗ್ ಬಾಸ್​ನಿಂದ ರಾಶಿಕಾ ಅವರು ಲಾಸ್ಟ್ ಆಗಿದ್ದಾರೆ ಎಂದಿದ್ದಾರೆ. ಸೂರಜ್ ಮುಖದಲ್ಲಿ ಬೇಸರ ಕಾಣಿಸಿದೆ. ಫೋನ್ ಮಾಡಿ ರೂಮ್​ನಿಂದ ಹೊರ ಬಂದ ರಘು ಅವರ ಜೊತೆ ರಾಶಿಕಾ ಜಗಳಕ್ಕೆ ಇಳಿದಿದ್ದಾರೆ. ನಾನು ಲಾಸ್ಟ್​ ಆಗಿದ್ದಕ್ಕೆ ಕಾರಣ ಹೇಳು ಎಂದು ರಾಶಿಕಾ ಜೋರು ಜೋರಾಗಿಯೇ ಪ್ರಶ್ನೆ ಮಾಡಿದ್ದಾರೆ.
ನಿಮ್ಮ ಬಗ್ಗೆ ಏನು ಅನಿಸಿತೋ ಅದನ್ನೇ ನಾನು ಫೋನ್​​ನಲ್ಲಿ ಹೇಳಿದ್ದು, ನೀನು ಇಲ್ಲೇ ಕೂಗಿಕೊಂಡು ನಿಂತ್ಕೋ ಅಂತ ರಘು ಕಿರುಚಾಡಿದ್ದಾರೆ. ಮೊದಲು ರೀಸನ್ ಹೇಳು, ಹೋಗು ಬಾ ಅಂತ ನೀನು ಹೇಳಂಗಿಲ್ಲ. ನೀನು ಕ್ಯಾಪ್ಟನ್ ಆಗೋಕೆ ಲಾಯಕ್ಕೇ ಇಲ್ಲ ಎಂದು ರಾಶಿಕಾ ರಘು ಜೊತೆ ಜಗಳನೇ ಮಾಡಿದ್ದಾರೆ. ಇವತ್ತು ಏನೆಲ್ಲಾ ಆಗಲಿದೆ ಎಂದು ತಿಳಿಯಬೇಕಾದರೆ ಎಪಿಸೋಡ್ ಮಿಸ್ ಮಾಡಲೇಬೇಡಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us