BBK12; ದೊಡ್ಮನೆಯಲ್ಲಿ ಕೆಂಪೇಗೌಡ ಲುಕ್​ ಕೊಟ್ಟಿದ್ದ ಗಿಲ್ಲಿ ನಟ.. ಅರ್ಧ ಮೀಸೆ ಕಟ್!

ಕಾವ್ಯ ಹೇಳಿದ್ರು ಎನ್ನುವ ಕಾರಣಕ್ಕೆ ಗಿಲ್ಲಿ ಹೊಸ ಲುಕ್‌ ಪಡೆಯೋಕೆ ಮುಂದಾಗಿದ್ದರು. ಗಡ್ಡ ಮೀಸೆಯನ್ನು ಟ್ರಿಮ್‌ ಮಾಡಿ ಸುದೀಪ್‌ ಅವರ ಸಿನಿಮಾ ಕೆಂಪೇಗೌಡ ಮೂವಿ ಸ್ಟೈಲ್‌ನಲ್ಲಿ ಗಡ್ಡ ತೆಗೆದಿದ್ದರು. ಇದು ಅವರಿಗೆ ಚೆನ್ನಾಗೇ ಕಾಣಿಸ್ತಿತ್ತು ಕೂಡ. ಆದ್ರೀಗ ಅವರ ಈ ಹೊಸ ಲುಕ್‌ಗೆ ಮಣ್ಣು ಬಿದ್ದಿದೆ.

author-image
Bhimappa
BBK12_GILLI_MEESE
Advertisment

ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಟ್ಟಾಗಿನಿಂದಲೂ ಗಡ್ಡ ಮೀಸೆ ಲುಕ್‌ನಲ್ಲೇ ಗಿಲ್ಲಿ ಸಖತ್ ಆಗೇ ಕಾಣಿಸಿಕೊಂಡಿದ್ದರು. ಮೊನ್ನೆ ಮೊನ್ನೆಯಷ್ಟೆ ಕಾವ್ಯ ಮಾತು ಕೇಳಿ ಕೆಂಪೇಗೌಡ ಸ್ಟೈಲ್​ನಲ್ಲಿ ಮೀಸೆ ಬಿಟ್ಟು ಗಡ್ಡ ತೆಗೆದಿದ್ರು. ಈಗ ಅದಕ್ಕೂ ಸಂಚಕಾರ ಬಂದಿದೆ. 

ಗಿಲ್ಲಿ ಅಂದ್ರೆ ನಗುವಿನ ಚಟಾಕಿ. ಅವ್ರು ಹೇಳಬೇಕೆಂದಿರುವುದನ್ನು ಡೈರೆಕ್ಟ್‌ ಆಗಿ ಹೇಳ್ತಾರೆ. ಫುಲ್‌ ಸ್ಪಿರಿಟ್‌ನಲ್ಲಿ ಟಾಸ್ಕ್‌ ಆಡ್ತಾರೆ. ಇದೆಲ್ಲವನ್ನೂ ಹೊರತುಪಡಿಸಿ ಬಿಗ್‌ಬಾಸ್‌ ಮನೆಯಲ್ಲಿ ಗಿಲ್ಲಿ ಗುರುತಿಸಿಕೊಂಡಿದ್ದು ಅವ್ರ ಗಡ್ಡ ಮೀಸೆಯಿಂದಲೇ. ಮುಖದ ತುಂಬಾ ತುಂಬಿದ್ದ ಗಡ್ಡಕ್ಕೆ ಈ ವಾರವಷ್ಟೆ ಹೊಸ ಲುಕ್‌ ಸಿಕ್ಕಿತ್ತು.

ಇದನ್ನೂ ಓದಿ: ಅತಿ ವೇಗವಾಗಿ ಬಂದು ಏಕಾಏಕಿ ಜನರ ಮೇಲೆ ನುಗ್ಗಿದ SUV ಕಾರು.. ಜೀವ ಬಿಟ್ಟ 5 ಪಾದಚಾರಿಗಳು

BBK12_GILLI_1

ಕಾವ್ಯ ಹೇಳಿದ್ರು ಎನ್ನುವ ಕಾರಣಕ್ಕೆ ಗಿಲ್ಲಿ ಹೊಸ ಲುಕ್‌ ಪಡೆಯೋಕೆ ಮುಂದಾಗಿದ್ದರು. ಗಡ್ಡ ಮೀಸೆಯನ್ನು ಟ್ರಿಮ್‌ ಮಾಡಿ ಸುದೀಪ್‌ ಅವರ ಸಿನಿಮಾ ಕೆಂಪೇಗೌಡ ಮೂವಿ ಸ್ಟೈಲ್‌ನಲ್ಲಿ ಗಡ್ಡ ತೆಗೆದಿದ್ದರು. ಇದು ಅವರಿಗೆ ಚೆನ್ನಾಗೇ ಕಾಣಿಸ್ತಿತ್ತು ಕೂಡ. ಆದ್ರೀಗ ಅವರ ಈ ಹೊಸ ಲುಕ್‌ಗೆ ಮಣ್ಣು ಬಿದ್ದಿದೆ. 

ಕ್ಯಾಪ್ಟನ್ ರಘು ಆದೇಶದಂತೆ ಗಿಲ್ಲಿ ಅವರ ಮೀಸೆಯನ್ನೇ ಕಳೆದುಕೊಳ್ಳುವಂತಾಗಿದೆ. ಕ್ಯಾಪ್ಟನ್‌ ರಘು ಸ್ವತಃ ತಾವೇ ತಮ್ಮ ಕೈಯಾರೆ ಗಿಲ್ಲಿಯ ಗಡ್ಡ ತೆಗೆಯೋಕೆ ಮುಂದಾಗಿದ್ದಾರೆ. ಧನುಷ್‌ ಹಾಗೂ ಅಭಿಷೇಕ್‌ ಇದಕ್ಕೆ ಸಾಥ್‌ ನೀಡಿದ್ದು, ಗಡ್ಡ ತೆಗೆಯೋ ಭರದಲ್ಲಿ, ಗಿಲ್ಲಿಯ ತೊಯ್ದಾಟಗಳ ನಡುವೆ ಗಿಲ್ಲಿ ಅರ್ಧ ಮೀಸೆಯನ್ನೂ ಕಳೆದುಕೊಳ್ಳುವಂತಾಗಿದೆ. 

ಗಿಲ್ಲಿಯ ಈ ಹೊಸ ಲುಕ್‌ ಹೇಗಿದೆ? ಗಿಲ್ಲಿಗೆ ಈ ಪರಿಸ್ಥಿತಿ ಬರೋಕೆ ಕಾರಣವಾದ್ರೂ ಏನು ಅನ್ನೋದನ್ನ ನೋಡಿ ಇವತ್ತಿನ ಬಿಗ್‌ಬಾಸ್‌ ಎಪಿಸೋಡ್‌ನಲ್ಲಿ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

bigg boss jahnavi Bigg boss
Advertisment