/newsfirstlive-kannada/media/media_files/2025/10/25/up_car-2025-10-25-11-12-46.jpg)
ನವದೆಹಲಿ: ಅತಿ ವೇಗವಾಗಿ ಬಂದ ಎಸ್​​ಯುವಿ ಕಾರೊಂದು ಪಾದಚಾರಿಗಳ ಮೇಲೆ ನುಗ್ಗಿದ ಪರಿಣಾಮ ಓರ್ವ ಮಹಿಳೆ ಸೇರಿ ಐವರು ಪ್ರಾಣ ಬಿಟ್ಟಿದ್ದು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಉತ್ತರ ಪ್ರದೇಶದ ಆಗ್ರಾದ ನಗ್ಲಾ ಬುಧಿಯ ಸೆಂಟ್ರಲ್​ ಹಿಂದಿ ಇನ್​ಸ್ಟಿಟ್ಯೂಟ್​ ಬಳಿ ನಡೆದಿದೆ.
ಕಾರು ಅಪಘಾತದಲ್ಲಿ ಮೃತಪಟ್ಟವರನ್ನು ಬಬ್ಲಿ (33), ಭಾನು ಪ್ರತಾಪ್ (25), ಕಮಾಲ್ (23), ಕೃಷ್ಣ (20) ಹಾಗೂ ಬಂತೇಶ್ (21) ಎಂದು ಗುರುತಿಸಲಾಗಿದೆ. ಭಾನು ಪ್ರತಾಪ್ ಖಾಸಗಿ ಡೆಲಿವರಿ ಕಂಪನಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಸದ್ಯ ಈ ಐದು ಜನರೂ ಪ್ರಾಣ ಕಳೆದುಕೊಂಡಿದ್ದಾರೆ. ರಾಹುಲ್ ಮತ್ತು ಗೋಲು ಬದುಕುಳಿದಿದ್ದು, ಈ ಇಬ್ಬರು ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.
/filters:format(webp)/newsfirstlive-kannada/media/media_files/2025/10/25/up_car_1-2025-10-25-11-12-59.jpg)
ಕಾರು ಅತಿ ವೇಗವಾಗಿ ಬಂದು ಏಕಾ ಏಕಿ ಪಾದಚಾರಿಗಳ ಮೇಲೆ ನುಗ್ಗಿದ್ದರಿಂದ ಐವರು ಗಂಭೀರವಾಗಿ ಗಾಯಗೊಂಡು ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದರು. ತಕ್ಷಣ ಗಾಯಾಳುಗಳನ್ನು ಸರೋಜಿನಿ ನಾಯ್ಡು ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿತ್ತು. ಆದರೆ ಕಾರು ಗುದ್ದಿದ ರಭಸಕ್ಕೆ ಗಂಭೀರವಾದ ಗಾಯಗಳು ಆಗಿದ್ದರಿಂದ ಐವರು ಜೀವ ಹೋಗಿದೆ ಎಂದು ವೈದ್ಯರು ಹೇಳಿದ್ದಾರೆ.
ಕಾರು ವೇಗವಾಗಿ ಬಂದು ಡಿವೈಡರ್​ಗೆ ಡಿಕ್ಕಿ ಹೊಡೆದು, ಜನರ ಏಕಾಏಕಿ ನುಗ್ಗಿ ನಂತರ ಪಲ್ಟಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಒಟ್ಟು ಏಳು ಪಾದಚಾರಿಗಳ ಮೇಲೆ ಕಾರು ಹರಿದಿದ್ದು ಇದರಲ್ಲಿ ಐವರು ಜೀವ ಕಳೆದುಕೊಂಡಿದ್ದು ಇನ್ನಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಘಟನೆ ಸಂಬಂಧ ಪೊಲೀಸರು ಚಾಲಕನನ್ನು ಅರೆಸ್ಟ್ ಮಾಡಿದ್ದು ಮದ್ಯಪಾನ ಮಾಡಿದ್ದನೋ, ಇಲ್ವೋ ಎಂಬುದರ ಕುರಿತು ವಿಚಾರಣೆ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us