Advertisment

ಟಾಸ್​ನಲ್ಲೂ ಕ್ಯಾಪ್ಟನ್​ ಗಿಲ್​ಗೆ ಹ್ಯಾಟ್ರಿಕ್ ಸೋಲು​.. ಟೀಮ್ ಇಂಡಿಯಾದ ಪ್ಲೇಯಿಂಗ್- 11ನಲ್ಲಿ ಭಾರೀ ಬದಲಾವಣೆ

ಅಂತಿಮ ಹಾಗೂ 3ನೇ ಏಕದಿನ ಪಂದ್ಯದಲ್ಲಿ ಆಸಿಸ್​ ನಾಯಕ ಮಿಚೆಲ್ ಮಾರ್ಷ್​ ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಆಯ್ಕೆ ಮಾಡಿದ್ದಾರೆ. ಈ ಮೂಲಕ ಸತತ ಮೂರು ಬಾರಿಯೂ ಟಾಸ್ ಆಸ್ಟ್ರೇಲಿಯಾದ ಪರವಾಗಿಯೇ ಬಂದಿರುವುದು ಗಿಲ್​ಗೆ ಬೇಸರ ತರಿಸಿದೆ.

author-image
Bhimappa
GILL_AUS
Advertisment

3ನೇ ಏಕದಿನ ಪಂದ್ಯದಲ್ಲೂ ಟಾಸ್ ಆಸ್ಟ್ರೇಲಿಯಾದ ನಾಯಕ ಮಿಚೆಲ್ ಮಾರ್ಷ್​ ಪಾಲಾಗಿದ್ದು ಮೊದಲ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಇದರಿಂದ ಟೀಮ್ ಇಂಡಿಯಾ ಫೀಲ್ಡಿಂಗ್ ಮಾಡಲಿದೆ. 

Advertisment

ಆಸ್ಟ್ರೇಲಿಯಾದ ಸಿಡ್ನಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಅಂತಿಮ ಹಾಗೂ 3ನೇ ಏಕದಿನ ಪಂದ್ಯದಲ್ಲಿ ಆಸಿಸ್​ ನಾಯಕ ಮಿಚೆಲ್ ಮಾರ್ಷ್​ ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಆಯ್ಕೆ ಮಾಡಿದ್ದಾರೆ. ಈ ಮೂಲಕ ಸತತ ಮೂರು ಬಾರಿಯೂ ಟಾಸ್ ಆಸ್ಟ್ರೇಲಿಯಾದ ಪರವಾಗಿಯೇ ಬಂದಿರುವುದು ಗಿಲ್​ಗೆ ಬೇಸರ ತರಿಸಿದೆ ಎನ್ನಬಹುದು. ಇನ್ನು 2 ಬಾರಿ ಮೊದಲ ಫೀಲ್ಡಿಂಗ್ ಆಯ್ಕೆ ಮಾಡಿದ್ದ ಮಿಚೆಲ್ ಮಾರ್ಷ್ ಈ ಬಾರಿ ಫಸ್ಟ್ ಬ್ಯಾಟಿಂಗ್ ಮಾಡುವುದಾಗಿ ಹೇಳಿದ್ದಾರೆ.  

ಇದನ್ನೂ ಓದಿ:ಟಾಸ್​ನಲ್ಲೂ ಕ್ಯಾಪ್ಟನ್​ ಗಿಲ್​ಗೆ ಹ್ಯಾಟ್ರಿಕ್ ಸೋಲು​.. ಟೀಮ್ ಇಂಡಿಯಾದ ಪ್ಲೇಯಿಂಗ್- 11ನಲ್ಲಿ ಭಾರೀ ಬದಲಾವಣೆ

ROHIT_SHARMA_AUS

ಶುಭ್​ಮನ್ ಗಿಲ್ ಅವರು ಟೀಮ್ ಇಂಡಿಯಾದಲ್ಲಿ ಭಾರೀ ಬದಲಾವಣೆ ಮಾಡಿದ್ದು ಇಬ್ಬರು ಆಟಗಾರರನ್ನು ಹೊರಗಿಟ್ಟು ಇನ್ನಿಬ್ಬರಿಗೆ ಚಾನ್ಸ್ ನೀಡಿದ್ದಾರೆ. ಕಳೆದ ಪಂದ್ಯದಲ್ಲಿ ಇಂಜುರಿಗೆ ಒಳಗಾಗಿದ್ದ ನಿತೀಶ್ ಕುಮಾರ್​ ಹಾಗೂ ಆರ್ಷದೀಪ್ ಸಿಂಗ್​ರನ್ನು ಪಂದ್ಯದಿಂದ ಕೈಬಿಡಲಾಗಿದೆ. ಈ ಇಬ್ಬರ ಬದಲಿ ಆಟಗಾರರಾಗಿ ಮ್ಯಾಜಿಕ್ ಸ್ಪಿನ್ನರ್ ಕುಲ್​​ದೀಪ್ ಯಾದವ್ ಹಾಗೂ ಕನ್ನಡಿಗ ಪ್ರಸಿದ್ಧ ಕೃಷ್ಣ ಅವರಿಗೆ ಅವಕಾಶ ನೀಡಲಾಗಿದೆ. 

Advertisment

ಇನ್ನುಳಿದಂತೆ ತಂಡದಲ್ಲಿ ಕಳೆದ ಪಂದ್ಯಗಳಲ್ಲಿದ್ದ ಎಲ್ಲ ಆಟಗಾರರು ಇದ್ದಾರೆ. ಓಪನರ್ ಆಗಿ ರೋಹಿತ್ ಶರ್ಮಾ, ಗಿಲ್ ಕ್ರೀಸ್​ಗೆ ಆಗಮಿಸುವರು. ವಿರಾಟ್ ಕೊಹ್ಲಿ 3ನೇ ಬ್ಯಾಟರ್ ಆಗಿ ಕಣಕ್ಕೆ ಇಳಿಯಲಿದ್ದಾರೆ. ವಾಷಿಂಗ್ಟನ್ ಸುಂದರ್, ಹರ್ಷಿತ್ ರಾಣಾ, ಕುಲ್​​ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ಬೌಲಿಂಗ್​ನಲ್ಲಿ ಶಕ್ತಿ ಪ್ರದರ್ಶನ ಮಾಡಬೇಕಿದೆ.      

ಟೀಮ್ ಇಂಡಿಯಾದ ಪ್ಲೇಯಿಂಗ್- 11

ರೋಹಿತ್ ಶರ್ಮಾ, ಶುಭಮನ್ ಗಿಲ್ (ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ಕೆ.ಎಲ್ ರಾಹುಲ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಹರ್ಷಿತ್ ರಾಣಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Advertisment
Virat Kohli IND vs AUS
Advertisment
Advertisment
Advertisment