/newsfirstlive-kannada/media/media_files/2025/10/12/mexico_rains_new-2025-10-12-19-43-32.jpg)
ಮೆಕ್ಸಿಕೋದ ಎಡೆಬಿಡದೇ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಹಲವಾರು ಪ್ರದೇಶಗಲ್ಲಿ ಭೀಕರ ಪ್ರವಾಹ ಹಾಗೂ ಭೂಕುಸಿತದಿಂದ 42 ಜನರು ಜೀವ ಬಿಟ್ಟಿದ್ದು, 27ಕ್ಕೂ ಅಧಿಕ ಮಂದಿ ಕಾಣೆಯಾಗಿದ್ದಾರೆ.
ಪ್ರಮುಖ ಆಯಿಲ್ ಉತ್ಪಾದಕ ಘಟಕಗಳಲ್ಲಿ ಒಂದಾದ ಮೆಕ್ಸಿಕೋದ ಪೊಜಾ ರಿಕಾ (Poza Rica) ದಲ್ಲಿ ಪ್ರವಾಹದ ಬಗ್ಗೆ ಯಾವುದೇ ಎಚ್ಚರಿಕೆಗಳು ಇರಲಿಲ್ಲ. ಇದರಿಂದ ಜನರು ಸಾಲು ಸಾಲು ಸಮಸ್ಯೆಗೆ ಸಿಲುಕಿಕೊಂಡರು. ಇದೇ ಅಕ್ಟೋಬರ್​ 6, 9 ರಂದು ಮೆಕ್ಸಿಕೋದ ಪೂರ್ವ ರಾಜ್ಯ ವೆರಾಕ್ರಜ್​ನಲ್ಲಿ ಬರೋಬ್ಬರಿ 540 ಮಿಲಿ ಮೀಟರ್ (21 ಇಂಚಿಗಿಂತಲೂ ಅಧಿಕ) ಮಳೆ ಆಗಿದೆ ಎನ್ನಲಾಗಿದೆ. ​
ಜೋರಾಗಿ ಬರುತ್ತಿರುವ ಮಳೆಯಿಂದ ಅಲ್ಲಾಲ್ಲಿ ದೊಡ್ಡ ಮಟ್ಟದಲ್ಲಿ ಪ್ರವಾಹಗಳು ಉಂಟಾಗಿದ್ದರಿಂದ ಸಾಕಷ್ಟು ಜನರು ಸಮಸ್ಯೆಗೆ ಸಿಲುಕಿದ್ದಾರೆ. ವಿದ್ಯುತ್​ ಕಂಬಗಳು, ಮರಗಳು ನೆಲಕ್ಕುರುಳಿದ್ದರಿಂದ ಸಂಪರ್ಕ ಕಟ್ ಆಗಿದೆ. ಕರೆಂಟ್ ಇಲ್ಲದೇ ಸ್ಥಳೀಯರು ರಾತ್ರಿಯನ್ನು ಕಳೆಯುವಂತ ಪರಿಸ್ಥತಿ ಎದುರಾಗಿದೆ. ಸುಮಾರು 16,000ಕ್ಕೂ ಹೆಚ್ಚು ಮನೆಗಳು ಹಾನಿಗೀಡಾಗಿದ್ದು ಹಲವಾರು ಜನರು ಕಾಣೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಭೀಕರ ಮಳೆಯಿಂದಾಗಿ ಮೆಕ್ಸಿಕೋ ನಗರದ ಪೂರ್ವದಲ್ಲಿರುವ ಪ್ಯೂಬ್ಲಾದಲ್ಲಿ ಸುಮಾರು 9 ಸಂತ್ರಸ್ತರು ಜೀವ ಬಿಟ್ಟಿದ್ದಾರೆ. ಸಾವಿರಾರು ಜನರು ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ವೆರಾಕ್ರಜ್​ನಲ್ಲಿ 15 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಪ್ರವಾಹ ಹಾಗೂ ಭಯಾನಕ ಭೂಕುಸಿತದಿಂದ ಸಿಲುಕಿರುವ 42 ಸಮುದಾಯದ (Isolated Communities) ವರನ್ನ ರಕ್ಷಣೆ ಮಾಡಲು ಮಿಲಿಟರಿ ಪಡೆಗಳು ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ