Advertisment

ಕುಲ್​ದೀಪ್ ವರ್ಲ್ಡ್​ ರೆಕಾರ್ಡ್.. ಚೈನಾಮನ್ ಸ್ಪಿನ್​ಗೆ ವೆಸ್ಟ್​ ಇಂಡೀಸ್ ಮೊದಲ ಇನ್ನಿಂಗ್ಸ್​​ ಉಡೀಸ್​!

ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ 3ನೇ ದಿನದಾಟದಲ್ಲಿ ಟೀಮ್ ಇಂಡಿಯಾ ಪರ ಎಡಗೈ ಸ್ಪಿನ್ನರ್ ಕುಲ್​​ದೀಪ್ ಯಾದವ್ 5 ವಿಕೆಟ್​ ಗೊಂಚಲು ಪಡೆದು ರೆಕಾರ್ಡ್ ಮಾಡಿದ್ದಾರೆ. ಅಲ್ಲದೇ ಕುಲ್​ದೀಪ್​ ಮಾರಕ ಸ್ಪಿನ್​ಗೆ ವೆಸ್ಟ್​ ಇಂಡೀಸ್​ ಕೇವಲ 248 ರನ್​ಗಳಿಗೆ ಆಲೌಟ್ ಆಗಿ ಫಾಲೋಆನ್​ಗೆ ಒಳಗಾಗಿದೆ.

author-image
Bhimappa
KULDEEP_YADAV
Advertisment

ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ 3ನೇ ದಿನದಾಟದಲ್ಲಿ ಟೀಮ್ ಇಂಡಿಯಾ ಪರ ಎಡಗೈ ಸ್ಪಿನ್ನರ್ ಕುಲ್​​ದೀಪ್ ಯಾದವ್ 5 ವಿಕೆಟ್​ ಗೊಂಚಲು ಪಡೆದು ರೆಕಾರ್ಡ್ ಮಾಡಿದ್ದಾರೆ. ಅಲ್ಲದೇ ಕುಲ್​ದೀಪ್​ ಯಾದವ್ ಮಾರಕ ಬೌಲಿಂಗ್​ಗೆ ವೆಸ್ಟ್​ ಇಂಡೀಸ್​ ಮೊದಲ ಇನ್ನಿಂಗ್ಸ್​ನಲ್ಲೇ ಕೇವಲ 248 ರನ್​ಗಳಿಗೆ ಆಲೌಟ್ ಆಗಿ ಫಾಲೋಆನ್​ಗೆ ಒಳಗಾಗಿದೆ. 

Advertisment

ವೆಸ್ಟ್​ ಇಂಡೀಸ್​ ಜೊತೆಗಿನ ಪಂದ್ಯದಲ್ಲಿ ಕುಲ್​ದೀಪ್ ಯಾದವ್ ಅವರು 5 ವಿಕೆಟ್​ಗಳನ್ನು ಉರುಳಿಸಿದ್ದಾರೆ. ಈ ಮೂಲಕ 5 ಬಾರಿ ಐದೈದು ವಿಕೆಟ್​ಗಳ ಗೊಂಚಲನ್ನು ಅತಿ ಕಡಿಮೆ ಇನ್ನಿಂಗ್ಸ್​ನಲ್ಲಿ ಪಡೆದ ವಿಶ್ವದ ಮೊದಲ ಎಡಗೈ ಸ್ಪಿನ್ನರ್ ಆಗಿದ್ದಾರೆ. ಇಂಗ್ಲೆಂಡ್​ನ ಜಾನಿ ವಾರ್ಡಲ್ ಅವರು 25 ಇನ್ನಿಂಗ್ಸ್​ನಲ್ಲಿ 5 ಬಾರಿ ಐದೈದು ಗೊಂಚಲುಗಳ ವಿಕೆಟ್​ ಉರುಳಿಸಿದ್ದಾರೆ. ಹಾಗೇ ಪೌಲ್​ ಅ್ಯಂಡಮ್ಸ್​ 45 ಇನ್ನಿಂಗ್ಸ್​ನಲ್ಲಿ 4 ಬಾರಿ 5 ವಿಕೆಟ್​ಗಳನ್ನ ಪಡೆದಿದ್ದರು. 

ಇದನ್ನೂ ಓದಿ: ದಾಖಲೆ ಹೊಸ್ತಿಲಿನಲ್ಲಿ ಸ್ಮೃತಿ ಮಂದಾನ.. ಮಹತ್ವದ ರೆಕಾರ್ಡ್​ ಬ್ರೇಕ್ ಮಾಡ್ತಾರಾ?

kuldeep yadav

ಆದರೆ ಕುಲ್​ದೀಪ್ ಯಾದವ್ ಅವರು ಕೇವಲ 15 ಇನ್ನಿಂಗ್ಸ್​ಗಳಲ್ಲೇ 5 ಬಾರಿ ಐದೈದು ವಿಕೆಟ್​ಗಳ ಗೊಂಚಲನ್ನು ಅತಿ ಕಡಿಮೆ ಇನ್ನಿಂಗ್ಸ್​ನಲ್ಲಿ ಪಡೆದ ಎಡಗೈ ಸ್ಪಿನ್ನರ್ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ. ವೇಗವಾಗಿ 5 ವಿಕೆಟ್​ಗಳ ಗೊಂಚಲು 5 ಬಾರಿ ಪಡೆಯುವ ಮೂಲಕ ಕುಲ್​ದೀಪ್ ಯಾದವ್ ಅವರು ಹೊಸ ಇತಿಹಾಸ ಬರೆದಂತೆ ಆಗಿದೆ. ಇಬ್ಬರ ಹೆಸರಲ್ಲಿದ್ದ ದಾಖಲೆಯನ್ನು ಕುಲ್​ದೀಪ್ ಅಳಿಸಿ ಹಾಕಿದ್ದಾರೆ. 

Advertisment
  • 5 ಕುಲ್​ದೀಪ್ ಯಾದವ್ (15 ಟೆಸ್ಟ್)
  • 5 ಜಾನಿ ವಾರ್ಡ್ಲ್ (28)
  • 4 ಪಾಲ್ ಆಡಮ್ಸ್ (45)

ಟೀಮ್ ಇಂಡಿಯಾದ ಬ್ಯಾಟರ್​ಗಳು ಮೊದಲ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾಡಿ ವೆಸ್ಟ್​ ಇಂಡೀಸ್​ ಬೌಲರ್​ಗಳನ್ನು ಮನಬಂದಂತೆ ಚಚ್ಚಿದ್ದರು. ಕೇವಲ 5 ವಿಕೆಟ್​ಗೆ 518 ಬೃಹತ್​​ ರನ್​ಗೆ ಭಾರತ ಡಿಕ್ಲೇರ್ ಮಾಡಿಕೊಂಡಿತ್ತು. ಬಳಿಕ ಬ್ಯಾಟಿಂಗ್ ಮಾಡಿದ್ದ ವೆಸ್ಟ್​ ಇಂಡೀಸ್​ ಆಟಗಾರರು 248 ರನ್​ಗೆ ಆಲೌಟ್​ ಆಗಿ  ಫಾಲೋಆನ್​ಗೆ ಒಳಗಾಗಿದ್ದರು. ಹೀಗಾಗಿ ಮತ್ತೆ ವೆಸ್ಟ್​ ಇಂಡೀಸ್​ ಆಟಗಾರರು ಬ್ಯಾಟಿಂಗ್ ಮಾಡುತ್ತಿದ್ದು 119ಕ್ಕೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಇದೆ. 
 
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

IND vs WI Kuldeep Yadav
Advertisment
Advertisment
Advertisment