/newsfirstlive-kannada/media/media_files/2025/09/13/sushila-karki-2025-09-13-08-29-48.jpg)
ಬೂದಿಮುಚ್ಚಿದ ಕೆಂಡವಾಗಿದ್ದ ನೇಪಾಳ ಶಾಂತವಾಗಿದೆ. ಭಾರಿ ಸರ್ಕಸ್ ಬಳಿಕ ಕೊನೆಗೂ ನೇಪಾಳದಲ್ಲಿ ಮಧ್ಯಂತರ ಸರ್ಕಾರ ರಚನೆಯಾಗಿದೆ. ನೇಪಾಳದ ಇತಿಹಾಸದಲ್ಲೇ ಮೊದಲ ಬಾರಿಗೆ ನಾರಿ ಶಕ್ತಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಸುಶೀಲಾ ಕರ್ಕಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಭಾರಿ ಕಸರತ್ತು.. ಅವರ್ಬಿಟ್ ಇವಱರು ಅಂತಿದ್ದ ನೇಪಾಳಕ್ಕೆ ಹಂಗಾಮಿ ಪ್ರಧಾನಿ ಆಯ್ಕೆಯಾಗಿದೆ. ನೇಪಾಳದ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಕಳೆದ ರಾತ್ರಿ ನೇಪಾಳದ ಮಧ್ಯಂತರ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಮೂಲಕ ನೇಪಾಳದ ಮೊದಲ ಮಹಿಳಾ ಪ್ರಧಾನಿ ಎಂಬ ಚರಿತ್ರೆ ಸೃಷ್ಟಿಸಿದ್ದಾರೆ. ಇನ್ನುಳಿದಂತೆ ಪ್ರಧಾನಿ ಸ್ಪರ್ಧೆಯಲ್ಲಿದ್ದ ಕುಲ್ಮನ್ ಘಿಸಿಂಗ್, ಸುಡಾನ್ ಗುರುಂಗ್ ಸೇರಿದಂತೆ ಅನೇಕ ಕ್ಯಾಬಿನೆಟ್ ಮಂತ್ರಿಗಳೊಂದಿಗೆ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಇದನ್ನೂ ಓದಿ:ನೇಪಾಳದ ಮಧ್ಯಂತರ ಪ್ರಧಾನಿ ಆಗ್ತಾರಾ ಸುಶೀಲಾ ಕರ್ಕಿ? ಭಾರತಕ್ಕೂ ಸುಶೀಲಾ ಕರ್ಕಿಗೂ ಇರೋ ನಂಟೇನು?
ನಿನ್ನೆ ಹೋರಾಟಗಾರರು ಸೇನಾ ಮುಖ್ಯಸ್ಥ ಮತ್ತು ಅಧ್ಯಕ್ಷರ ಜೊತೆ ಚರ್ಚಿಸಿದ ನಂತರ ಸುಶೀಲಾ ಕರ್ಕಿಯನ್ನು ಮಧ್ಯಂತರ ಸರ್ಕಾರದ ಮುಖ್ಯಸ್ಥರನ್ನಾಗಿ ನೇಮಿಸುವ ನಿರ್ಧಾರ ಕೈಗೊಳ್ಳಲಾಯ್ತು. ಬಳಿಕ ಸಂಸತ್ತನ್ನು ವಿಸರ್ಜಿಸಿ ಪ್ರಧಾನಿ ಪ್ರಮಾಣವಚನ ಸ್ವೀಕರಿಸಿದ್ರು. ನೇಪಾಳದ ಅಧ್ಯಕ್ಷರ ನಿವಾಸ ಶೀತಲ್ ನಿವಾಸದಲ್ಲಿ ಸುಶೀಲಾ ಕರ್ಕಿಗೆ ಅಧ್ಯಕ್ಷ ಪೌಡೆಲ್ ಪ್ರಮಾಣವಚನ ಬೋಧಿಸಿದರು.
ಸುಶೀಲಾ ಕರ್ಕಿ ಯಾರು?
ನೇಪಾಳದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಿ ಸುಶೀಲಾ ಕರ್ಕಿ ಅವರು ಜುಲೈ 2016 ರಿಂದ ಜೂನ್ 2017 ರವರೆಗೆ ಸೇವೆ ಸಲ್ಲಿಸುವ ಮೂಲಕ ಇತಿಹಾಸ ನಿರ್ಮಿಸಿದರು. ಜೂನ್ 7, 1952 ರಂದು ಬಿರಾಟ್‌ನಗರದಲ್ಲಿ ಜನಿಸಿದ ಸುಶೀಲಾ ಕರ್ಕಿ ಏಳು ಮಕ್ಕಳಲ್ಲಿ ಹಿರಿಯವರು. ಬಿರಾಟ್‌ನಗರದಲ್ಲಿ ಕಾನೂನು ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ 1979 ರಲ್ಲಿ ಅವರು ತಮ್ಮ ವಕೀಲಿ ವೃತ್ತಿಯನ್ನು ಪ್ರಾರಂಭಿಸಿದರು.
ಇದನ್ನೂ ಓದಿ:ನೇಪಾಳದ ಹಿಂಸಾಚಾರದ ವೇಳೆ ಭಾರತದ ಮಹಿಳೆ ದಾರುಣ ಸಾವು, ಹೋಟೇಲ್ ನಿಂದ ಜಿಗಿದು ಮಹಿಳೆ ಸಾವು, ಪತಿಗೆ ಗಾಯ
ಒಟ್ಟಾರೆ ದಂಗೆ ಬಳಿಕ ಭಾರಿ ಕಸರತ್ತು ನಡೆದು ಮಧ್ಯಂತರ ಸರ್ಕಾರ ರಚನೆಯಾಗಿದೆ. ಮುಂದಿನ ಚುನಾವಣೆವರೆಗೆ ಉಸ್ತುವಾರಿ ಸರ್ಕಾರ ಮುನ್ನಡೆಸಲು ಕರ್ಕಿ ನೇತೃತ್ವದಲ್ಲಿ ಹಂಗಾಮಿ ಸರ್ಕಾರ ರಚನೆಯಾಗಿದೆ. ಭಾರತದಲ್ಲಿ ವಿದ್ಯಾಭ್ಯಾಸ ಮಾಡಿದ ಹಾಗೂ ಭಾರತ ಪ್ರೇಮಿ ಸುಶೀಲಾ ಕರ್ಕಿ ಅಧಿಕಾರ ವಹಿಸಿಕೊಂಡಿದ್ದು ಮುಂದಿನ ದಿನಗಳಲ್ಲಿ ಎರಡು ದೇಶಗಳ ಸಂಬಂಧ ವೃದ್ಧಿಯಾಗುವ ಸಾಧ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ