/newsfirstlive-kannada/media/media_files/2026/01/04/venezuelan-president-nicolas-maduro-2026-01-04-08-01-50.jpg)
ಅಮೆರಿಕ ವೆನಿಜುವೆಲಾದ ಮೇಲೆ ವೈಮಾನಿಕ ದಾಳಿ ನಡೆಸಿ, ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಮಧ್ಯರಾತ್ರಿ ಬಂಧಿಸಿದೆ. ಅಮೆರಿಕದ ಪಡೆಗಳು ತಕ್ಷಣವೇ ಅಧ್ಯಕ್ಷ ಮಡುರೊ ಅವರನ್ನು ಅಮೆರಿಕಕ್ಕೆ ವಿಮಾನದಲ್ಲಿ ಕರೆದೊಯ್ದದೆ. ಅಮೆರಿಕದ ಕಸ್ಟಡಿಯಲ್ಲಿರುವ ಮಡುರೊ ಅವರ ಮೊದಲ ಫೋಟೋ ಹೊರಬಿದ್ದಿದೆ. ಅದು ಎಲ್ಲರನ್ನೂ ಅಚ್ಚರಿಗೆ ದೂಡಿದೆ.
ಇದನ್ನೂ ಓದಿ:ವೆನಿಜುವೆಲಾ ಮೇಲೆ ಅಮೆರಿಕಾ ದಾಳಿ: ಅಧ್ಯಕ್ಷ ನಿಕೋಲಸ್ ಮಡುರೋ, ಪತ್ನಿ ಹೊತ್ತೊಯ್ದ ಅಮೆರಿಕಾ
/filters:format(webp)/newsfirstlive-kannada/media/media_files/2026/01/03/america-attacks-venezuela-capital-3-2026-01-03-17-50-35.jpg)
ಮಡುರೊಗೆ ಏನೂ ಕಾಣದಂತೆ ಕಣ್ಣುಗಳಿಗೆ ಬಟ್ಟೆ ಕಟ್ಟಲಾಗಿದೆ. ಅವರು ಕಿವಿಯನ್ನೂ ಬಿಗಿಯಾಗಿ ಮುಚ್ಚಲಾಗಿದೆ. ಕೈಗೆ ಕೋಳ ತೊಡೆಸಲಾಗಿದೆ. ವೆನಿಜುವೆಲಾದ ಅಧ್ಯಕ್ಷರನ್ನು ಕ್ಯಾರಕಾಸ್‌ನಿಂದ ಅಮೆರಿಕಕ್ಕೆ ಯುದ್ಧನೌಕೆಯ ಮೂಲಕ ಕರೆದುಕೊಂಡು ಹೋಗಲಾಗ್ತಿದೆ. ನಂತರ ಅವರನ್ನು ಹೆಲಿಕಾಪ್ಟರ್ ಮೂಲಕ ನ್ಯೂಯಾರ್ಕ್‌ಗೆ ಕರೆದೊಯ್ಯಲಾಗುತ್ತದೆ. ಅವರಿಗೆ ಹೊರಗಿನ ಯಾವುದೇ ಬೆಳಕು ಮತ್ತು ಶಬ್ಧಗಳು ತಿಳಿಯುತ್ತಿಲ್ಲ. ಜೊತೆಗೆ ಸಣ್ಣ, ಅರ್ಧ ಖಾಲಿಯಾದ ನೀರಿನ ಬಾಟಲಿಯನ್ನು ಸಹ ಹಿಡಿದಿದ್ದಾರೆ.
ಯಾರ ಒತ್ತಡಕ್ಕೂ ಮಣಿಯಲ್ಲ: ಡೊನಾಲ್ಡ್
ಫಾಕ್ಸ್ ನ್ಯೂಸ್ ಜೊತೆ ಮಾತನಾಡಿರುವ ಅಮೆರಿಕ ಅಧ್ಯಕ್ಷ ಟ್ರಂಪ್, ವೆನಿಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯ ಬಂಧನವು ಅಮೆರಿಕ ಯಾರಿಗೂ ತಲೆಬಾಗುವುದಿಲ್ಲ ಎಂಬುದರ ಸಂಕೇತ ಎಂದಿದ್ದಾರೆ. ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಅವರ ಮಲಗುವ ಕೋಣೆಯಿಂದ ಹೊರಗೆ ಎಳೆದೊಕೊಂಡು ಬಂದು ಬಂಧಿಸಲಾಗಿದೆ. ಕ್ಯಾರಕಾಸ್‌ನಲ್ಲಿರುವ ಫೋರ್ಟ್ ಟಿಯುನಾ ಮಿಲಿಟರಿ ಸಂಕೀರ್ಣದೊಳಗೆ ಇರುವ ನಿವಾಸದಲ್ಲಿ ದಂಪತಿ ಮಲಗಿದ್ದರು. ಆಗ ಅಮೆರಿಕದ ವಿಶೇಷ ಪಡೆಗಳು ಅವರ ನಿವಾಸಕ್ಕೆ ನುಗ್ಗಿದ್ದವು.
ಟಿವಿ ಲೈವ್ ಕಾರ್ಯಕ್ರಮದಂತೆ ಇತ್ತು
ಮಡುರೊ ಮತ್ತು ಅವರ ಪತ್ನಿಯನ್ನು ಯುದ್ಧನೌಕೆಯ ಮೂಲಕ ಅಮೆರಿಕಕ್ಕೆ ಸಾಗಿಸಲಾಗುತ್ತಿದೆ ಎಂದು ಟ್ರಂಪ್ ಘೋಷಿಸಿದರು. ಇಡೀ ಕಾರ್ಯಾಚರಣೆಯಲ್ಲಿ ಯಾವುದೇ ಅಮೆರಿಕನ್ನರ ಪ್ರಾಣಹಾನಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು. ನಾವು ನಾಲ್ಕು ದಿನಗಳಿಂದ ಈ ಕಾರ್ಯಾಚರಣೆಗಾಗಿ ಕಾಯುತ್ತಿದ್ದೆವು. ಮಡುರೊ ಸೆರೆಹಿಡಿಯುವಿಕೆಯ ನೇರ ಪ್ರಸಾರವನ್ನು ವೀಕ್ಷಿಸಿದ್ದೇವೆ. ಅದು ಟಿವಿ ಕಾರ್ಯಕ್ರಮದಂತಿತ್ತು ಎಂದು ಟ್ರಂಪ್ ಹೇಳಿದ್ದಾರೆ.
ಇದನ್ನೂ ಓದಿ: ಗಿಲ್ಲಿ ವೈರಲ್ ಹಾಡನ್ನು ಕ್ಯೂಟ್ ಆಗಿ ಹಾಡಿದ ಪುಟಾಣಿ - VIDEO
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us