/newsfirstlive-kannada/media/media_files/2025/09/24/tiger-2025-09-24-07-56-14.jpg)
ಅಮೆರಿಕದ ಒಕ್ಲಹೋಮ (Oklahoma) ರಾಜ್ಯದಿಂದ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಗ್ರೋಲರ್ ಪೈನ್ಸ್ ಟೈಗರ್ ಪ್ರಿಸರ್ವ್ (Growler Pines Tiger Preserve) ಆಪರೇಟರ್​ ಹಾಗೂ ಟೈಗರ್ ಕಿಂಗ್ ಖ್ಯಾತಿಯ ರಯಾನ್ ಈಸ್ಲಿ (Ryan Easley) ಮೇಲೆ ಹುಲಿ ದಾಳಿ ಮಾಡಿದೆ. ವರದಿಗಳ ಪ್ರಕಾರ, ಅವರ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತೊಂದು ಕಡೆ ಅವರು ನಿಧನರಾಗಿದ್ದಾರೆ ಎಂದು ಸೋಶಿಯಲ್ ಮೀಡಿಯಾಗಳು ಹೇಳುತ್ತಿವೆ.
ರಯಾನ್ ಈಸ್ಲಿ ಯಾರು?
ರಯಾನ್ ಈಸ್ಲಿ, ಟೈಗರ್ ಕಿಂಗ್ ಎಂದೇ ಪ್ರಸಿದ್ಧಿ ಪಡೆದವರು. ಇವರಿಗೆ ಹುಲಿ, ಸಿಂಹಗಳು ಅಂದರೆ ಪಂಚಪ್ರಾಣ. ಇವರು ತುಂಬಾ ವರ್ಷಗಳಿಂದ ಹುಲಿ ಮತ್ತು ದೊಡ್ಡ ದೊಡ್ಡ ಪ್ರಾಣಿಗಳ ಜೊತೆ ಭಾವನಾತ್ಮಕ ಒಡನಾಟ ಹೊಂದಿದ್ದಾರೆ. ‘ಶೋಮಿ ಟೈಗರ್ಸ್’ ಎಂಬ ಬ್ಯುಸಿನೆಸ್ ನಡೆಸ್ತಿರುವ ರಯಾನ್, ಹುಲಿಯಂತ ಪ್ರಾಣಿಗಳನ್ನು ಹೇಗೆ ಕೇರ್ ಮಾಡಬೇಕು. ಹಾಗೂ ಅವುಗಳನ್ನು ಹೇಗೆ ಸಾಕಬೇಕು ಅಂತಾ ಕಳೆದ 10 ವರ್ಷಗಳಿಂದ ಹೇಳಿಕೊಡುತ್ತ ಬಂದಿದ್ದಾರೆ. ಹುಲಿಗಳೊಂದಿಗೆ ಜೀವನ ನಡೆಸುವ ಇವರು, ಅನೇಕ ಡಾಕ್ಯುಮೆಂಟರಿಗಳನ್ನೂ ಮಾಡಿದ್ದಾರೆ.
ಈಸ್ಲಿ ಯಾವಾಗಲೂ ಪ್ರಾಣಿಗಳನ್ನು ಪ್ರೀತಿ ಮತ್ತು ಗೌರವದಿಂದ ನಡೆಸಿಕೊಳ್ಳುತ್ತಿದ್ದರು ಎಂದು ಗ್ರೋಲರ್ ಪೈನ್ಸ್ ಟೈಗರ್ ಪ್ರಿಸರ್ವ್ ಹೇಳಿದೆ. ಅವರ ಕೆಲಸ ಕೇವಲ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗಿಲ್ಲ. ಪ್ರಾಣಿಗಳೊಂದಿಗೆ ಸಂಪರ್ಕ ಸಾಧಿಸುವುದು ಮತ್ತು ಅವುಗಳನ್ನು ನೋಡಿಕೊಳ್ಳುವುದರ ಬಗ್ಗೆ ಆಗಿದೆ. ಈಸ್ಲಿ ಪ್ರತಿಯೊಂದು ಹುಲಿಯನ್ನು ತನ್ನ ಕುಟುಂಬದ ಸದಸ್ಯನಂತೆ ನೋಡಿಕೊಂಡಿದ್ದಾರೆ ಎಂದು ಅಲ್ಲಿನ ಸದಸ್ಯರು ಹೇಳಿದ್ದಾರೆ.
ಇದನ್ನೂ ಓದಿ:14 SC ಉಪ ಜಾತಿಗಳಿಗೆ ಕೊಕ್; ಕೋರ್ಟ್​ನಲ್ಲಿ ಇವತ್ತು ಜಾತಿ ಗಣತಿ ಭವಿಷ್ಯ
🚨 BREAKING: Tiger handler — and known Joe Exotic associate — Ryan Easley was fatally mauled this weekend at Growler Pines Tiger Preserve in Oklahoma.
— Wienerdogwifi (@wienerdogwifi) September 22, 2025
Easley once acquired tigers from “Tiger King” himself for his own business ShowMe Tigers. The preserve says his work was driven… pic.twitter.com/6JGApTjYEg
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ