/newsfirstlive-kannada/media/media_files/2025/09/16/high-court-of-karnataka-2025-09-16-15-16-25.jpg)
ಜಾತಿ ಗಣತಿ ಸಮೀಕ್ಷೆ ಇವತ್ತು ರೋಷಾವೇಶಕ್ಕೆ ತಿರುಗಿದೆ. ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷರಿಗೆ ಬಿಜೆಪಿ ತರಾಟೆಗೆ ತಗೊಂಡಿದೆ. ಇದರ ಬೆನ್ನಲ್ಲೇ ಕ್ರಿಶ್ಚಿಯನ್​ ಹೆಸರಿನ ಜೊತೆ ಸೇರಿದ್ದ 14 ಉಪಜಾತಿಗಳನ್ನು ಆಯೋಗ ಕೈಬಿಟ್ಟಿದೆ. ಇಂದು ಜಾತಿ ಗಣತಿ ಸಂಬಂಧ ಕೋರ್ಟ್​ ತೀರ್ಪು ಹೊರ ಬೀಳಲಿದೆ.
ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ.. ರಾಜ್ಯ ರಾಜಕಾರಣದಲ್ಲಿ ಮುಗಿಯದ ಕದನವಾಗಿದೆ. ಸರ್ಕಾರದ ವಿರುದ್ಧ ವಿಪಕ್ಷಗಳು, ಸಂಘ ಸಂಸ್ಥೆಗಳು, ಮಠಗಳು, ಸ್ವಾಮೀಜಿಗಳು ಅಷ್ಟೇ ಅಲ್ಲ. ಸ್ವಪಕ್ಷದ ಸಚಿವರೇ ಮುಗಿಬಿದ್ರೂ, ಸಿಎಂ ಸಿದ್ರಾಮಯ್ಯ ಯಾವುದೇ ಒತ್ತಡಕ್ಕೆ ಜಗ್ಗದೆ-ಕುಗ್ಗದೇ ಜಗಜ್ಜಟ್ಟಿ ನಿಲುವು ಕೈಗೊಂಡಿದ್ದಾರೆ. ಈಗಾಗಲೇ ಸಮೀಕ್ಷೆ ಆರಂಭವಾಗಿದ್ದು, ಜಾತಿ ಜ್ವಾಲೆ, ಮತ್ತಷ್ಟು ಧಗಧಗಿಸಿದೆ.
ಇದನ್ನೂ ಓದಿ:ನವರಾತ್ರಿ ಉಪವಾಸ.. ಆರೋಗ್ಯದ ಎಚ್ಚರಿಕೆ ಏನು, ಈ ರೀತಿಯಾಗಿ ಮಾಡಲೇಬೇಡಿ!
14 ಎಸ್​​ಸಿ ಉಪ ಜಾತಿಗಳಿಗೆ ಕೊಕ್​
ಜಾತಿಗಳನ್ನ ಕ್ರಿಶ್ಚಿಯನ್​ಗೆ ಟ್ಯಾಗ್ ಮಾಡಿದ್ದಕ್ಕೆ ಆಕ್ರೋಶ ಹೊರಹಾಕಿದ ಬಿಜೆಪಿ ನಿಯೋಗ, ಮಧುಸೂಧನ್ ನಾಯಕ್​ರನ್ನ ಬೆವರಿಳಿಸಿದೆ. ಈ ಬೆನ್ನಲ್ಲೆ ಸಭೆ ನಡೆಸಿದ ಆಯೋಗವು, ಹಿಂದೂ ಉಪಜಾತಿಗಳನ್ನ ಕ್ರೈಸ್ತರ ಜೊತೆ ಸೇರ್ಪಡೆ ಲಿಸ್ಟ್​​ನಿಂದ ಕೈಬಿಟ್ಟಿದ್ದು, 14 ಹೆಸರು ಆಯೋಗದ ಪಟ್ಟಿಯಲ್ಲಿಲ್ಲ ಅಂತ ಪ್ರಕಟಣೆ ಹೊರಡಿಸಿದೆ.
ಕ್ರಿಶ್ಚಿಯನ್​​ನಿಂದ ಯಾವ ಜಾತಿ ಔಟ್​​
- ಆದಿ ಆಂಧ್ರ ಕ್ರಿಶ್ಚಿಯನ್, ಆದಿ ಕರ್ನಾಟಕ ಕ್ರಿಶ್ಚಿಯನ್
- ಆದಿ ದ್ರಾವಿಡ ಕ್ರಿಶ್ಚಿಯನ್, ಬಂಜಾರ ಕ್ರಿಶ್ಚಿಯನ್, ಬುಡುಗ ಜಂಗಮ ಕ್ರಿಶ್ಚಿಯನ್,
- ಹೊಲೆಯ ಕ್ರಿಶ್ಚಿಯನ್, ಲಮಾಣಿ ಕ್ರಿಶ್ಚಿಯನ್, ಲಂಬಾಣಿ ಕ್ರಿಶ್ಚಿಯನ್,
- ಮಾದಿಗ ಕ್ರಿಶ್ಚಿಯನ್, ಮಹಾರ್ ಕ್ರಿಶ್ಚಿಯನ್, ಮಾಲಾ ಕ್ರಿಶ್ಚಿಯನ್,
- ಪರಯ ಕ್ರಿಶ್ಚಿಯನ್, ವಡ್ಡ ಕ್ರಿಶ್ಚಿಯನ್, ವಾಲ್ಮೀಕಿ ಕ್ರಿಶ್ಚಿಯನ್
ಒಂದ್ಕಡೆ ಸಮೀಕ್ಷೆ ನಡೀತಿದ್ರೆ ಇತ್ತ ರಾಜಕೀಯ ಸಂಘರ್ಷ ನಿಂತಿಲ್ಲ.. ಮತ್ತೊಂದ್ಕಡೆ ಸಮೀಕ್ಷೆಗೆ ಹೋದ ಶಿಕ್ಷಕರಿಗೆ ಸಮಸ್ಯೆಗಳ ಸರಮಾಲೆಯೇ ಸೃಷ್ಟಿ ಆಗಿದ್ದು, ಪರದಾಡುವಂತಾಗಿದೆ. ಜಾತಿ ಗಣತಿ ಸಮೀಕ್ಷೆಗೆ ವಿಕಲಚೇತನ ಶಿಕ್ಷಕರು, ವಯಸ್ಸಾದ ಶಿಕ್ಷಕರು, ಇದೇ ತಿಂಗಳಲ್ಲಿ ನಿವೃತ್ತಿ ಹೊಂದಿತ್ತಿರುವ ಶಿಕ್ಷಕರಿಗೂ ಜವಾಬ್ದಾರಿ ನೀಡಲಾಗಿದೆ. 7 ತಿಂಗಳ ಗರ್ಭಿಣಿ ಶಿಕ್ಷಕರಿಗೆ ಸರ್ವೇಗೆ ನೇಮಕ ಮಾಡಲಾಗಿದೆ. ಮರಣ ಹೊಂದಿರುವ ಶಿಕ್ಷಕರ ಹೆಸರು ಗಣತಿ ಕಾರ್ಯಕ್ಕೆ ಆಯ್ಕೆ ಮಾಡಿರೋದು ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ:ಈ ಒಂದು ಬಲವಾದ ಕಾರಣಕ್ಕಾಗಿ ಬಾಂಗ್ಲಾ ವಿರುದ್ಧ ಟೀಮ್ ಇಂಡಿಯಾ ಇಂದು ಗೆಲ್ಲಲೇಬೇಕಿದೆ..!
ದಸರಾ ರಜೆ ಹಿನ್ನಲೆ ಅನೇಕರು ಮನೆ ಖಾಲಿ ಮಾಡಿ, ಟ್ರಿಪ್​, ಸಂಬಂಧಿಕರ ಮನೆಗೆ ತೆರಳಿದ್ದಾರೆ. ಹೀಗಾಗಿ ಮನೆಯಲ್ಲಿ ಜನರೇ ಇಲ್ಲದೆ ಇದ್ದರೆ ಸಮೀಕ್ಷೆ ಮಾಡೋದೇಗೆ. ಇದರಿಂದ ಒಂದೇ ಮನೆಗೆ ಎರಡೆರಡು ಬಾರಿ ಭೇಟಿ ಕೊಡಬೇಕಾದ ಪರಿಸ್ಥಿತಿ ಇದೆ. ಗ್ರಾಮೀಣ ಭಾಗದಲ್ಲಿ ಸಮೀಕ್ಷೆಗೆ ಹೆಚ್ಚು ಸಮಯ ಬೇಕಾಗುತ್ತದೆ. ಕೆಲ ಭಾಗದಲ್ಲಿ ಮಳೆ ಹಿನ್ನೆಲೆ ಟಾರ್ಗೆಟ್ ರೀಚ್ ಆಗೋದು ಡೌಟ್​. ಮೊಬೈಲ್ ಅಪ್ಲಿಕೇಶನ್‌ಗೆ ಗಣತಿದಾರರ ಲಾಗಿನ್ ಆಗಲು ಸಮಸ್ಯೆ ಆಗಿದೆ. ಗ್ರಾಮಾಂತರ ಭಾಗದಲ್ಲಿ ಸರ್ವರ್ ಸಮಸ್ಯೆ ಹೀಗೆ ಸಾಲು ಸಾಲು ಸಮಸ್ಯೆಯಿಂದ ಶಿಕ್ಷಕರು ಕಂಗಾಲಾಗಿದ್ದಾರೆ.
ಇಂದು ಜಾತಿ ಗಣತಿ ಭವಿಷ್ಯ?
ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್​ನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆದಿದೆ. ಅರ್ಜಿದಾರರು ಮತ್ತು ಸರ್ಕಾರದ ಪರ ವಕೀಲರ ವಾದ ಮತ್ತು ಪ್ರತಿವಾದ ಆಲಿಸಿದ ಸಿಜೆ ವಿಭು ಬಖ್ರು, ನ್ಯಾ.ಸಿ.ಎಂ.ಜೋಶಿ ನೇತೃತ್ವದ ಪೀಠ ವಿಚಾರಣೆಯನ್ನ ಇವತ್ತಿಗೆ ಮುಂದೂಡಿದೆ.
ಒಟ್ಟಾರೆ.. ಗೊಂದಲ.. ಗದ್ದಲ.. ವಿರೋಧದ ನಡುವೆಯೇ ರಾಜ್ಯದಲ್ಲಿ ಜಾತಿ ಗಣತಿ ಶುರುವಾಗಿದೆ. ಆದ್ರೆ ದಿನ ನಿತ್ಯವೂ ಒಂದಲ್ಲ ಒಂದು ಸಮಸ್ಯೆ ಎದುರಾಗ್ತಿದ್ದು, ಸರ್ಕಾರ ಇದನ್ನು ಬಗೆಹರಿಸುತ್ತಾ? ಇಲ್ವಾ ಅನ್ನೋದನ್ನು ಕಾದನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ