/newsfirstlive-kannada/media/media_files/2025/09/23/indvsban-2025-09-23-19-18-39.jpg)
ಪಾಕಿಸ್ತಾನವನ್ನು ಈಗಾಗಲೇ ಎರಡು ಬಾರಿ ಸೋಲಿಸಿರುವ ಟೀಮ್ ಇಂಡಿಯಾ ಏಷ್ಯಾಕಪ್​ನಲ್ಲಿ ಸತತ 4 ಗೆಲುವು ದಾಖಲಿಸಿದೆ. ಇಂದು ಬಾಂಗ್ಲಾದೇಶದ ವಿರುದ್ಧ ಅಖಾಡಕ್ಕೆ ಧುಮುಕಲಿದ್ದು ಮತ್ತೊಂದು ವಿಜಯ ದಾಖಲಿಸುವ ನಿರೀಕ್ಷೆಯಲ್ಲಿದೆ. ಪಾಯಿಂಟ್ ಟೇಬಲ್​ನಲ್ಲಿ ಮೊದಲ ಎರಡು ಸ್ಥಾನ ಪಡೆದಿರುವ ಈ ತಂಡಗಳಿಗೆ ಇಂದಿನ ಪಂದ್ಯ ಅತ್ಯಂತ ಮುಖ್ಯವಾಗಿದೆ. ಸೂಪರ್-4 ಪಂದ್ಯ ನಡೆಯುವುದು ಎಲ್ಲಿ, ಯಾವಾಗ ಎನ್ನುವ ಮಾಹಿತಿ ಇಲ್ಲಿದೆ.
ಸೂರ್ಯಕುಮಾರ್ ನೇತೃತ್ವದ ಟೀಮ್ ಇಂಡಿಯಾ ಸೂಪರ್-4 ಪಂದ್ಯದಲ್ಲಿ ಇಂದು ಬಾಂಗ್ಲಾದೇಶದ ವಿರುದ್ಧ ಆಡಲಿದೆ. ಈ ಪಂದ್ಯವು ದುಬೈ ಇಂಟರ್​​ನ್ಯಾಷನಲ್​ ಸ್ಟೇಡಿಯಂನಲ್ಲಿ ಇವತ್ತು ರಾತ್ರಿ 8 ಗಂಟೆಗೆ ನಡೆಯಲಿದೆ. ಬಾಂಗ್ಲಾದೇಶ ತಂಡವು ಸೂಪರ್-4 ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಈಗಾಗಲೇ ಒಂದು ಪಂದ್ಯ ಗೆದ್ದಿದೆ. ಅದರಂತೆ ಟೀಮ್ ಇಂಡಿಯಾ ಕೂಡ ಒಂದು ಪಂದ್ಯ ಗೆದ್ದು ಮೊದಲ ಸ್ಥಾನದಲ್ಲಿದೆ. ಬಾಂಗ್ಲಾ ವಿರುದ್ಧ ಗೆದ್ದರೇ ಭಾರತ ಬಹುತೇಕವಾಗಿ ಫೈನಲ್​ ಟಿಕೆಟ್​ ಸಿಕ್ಕಂತೆ ಆಗುತ್ತದೆ.
ಇದನ್ನೂ ಓದಿ:KL ರಾಹುಲ್​ಗೆ ಮಹತ್ವದ ಜವಾಬ್ದಾರಿ.. ಟೀಮ್ ಇಂಡಿಯಾದಲ್ಲಿ ಆ ಸ್ಥಾನ ಕನ್ನಡಿಗನಿಗೆ ಸಿಗುತ್ತಾ..?
ಇವತ್ತಿನ ಮ್ಯಾಚ್ ಬಾಂಗ್ಲಾ ಹಾಗೂ ಭಾರತ ಎರಡಕ್ಕೂ ತುಂಬಾ ಮುಖ್ಯವಾಗಿದೆ. ಏಕೆಂದರೆ 2ನೇ ಸೂಪರ್​-4 ಪಂದ್ಯದಲ್ಲಿ ಗೆದ್ದಂತಹ ಟೀಮ್, ಇನ್ನೊಂದು ಪಂದ್ಯದಲ್ಲೂ ಜಯ ಪಡೆದರೆ ಫೈನಲ್​ಗೆ ನೇರವಾಗಿ ಎಂಟ್ರಿಯಾಗಲಿದೆ. ಇಲ್ಲಿ ಸೆಮಿಫೈನಲ್ ಅನ್ನೋದು ಇರುವುದಿಲ್ಲ. ಸದ್ಯ ಈ ಮ್ಯಾಚ್ ಹಾಗೂ ಉಳಿದ ಇನ್ನೊಂದು ಪಂದ್ಯದಲ್ಲಿ ಯಾರು ಗೆಲುವು ಸಾಧಿಸುತ್ತಾರೋ ಅವರಿಗೆ ಫೈನಲ್ ಟಿಕೆಟ್​ ಕನ್​ಫರ್ಮ್ ಆಗಲಿದೆ.
ಟೀಮ್ ಇಂಡಿಯಾ ಆಟಗಾರರು, ಬಾಂಗ್ಲಾವನ್ನು ಕಡೆಗಣಿಸುವಂತೆ ಇಲ್ಲ. ಏಕೆಂದರೆ ಇತಿಹಾಸ ಕೆದಕುತ್ತ ಹೋದರೆ ವಿಶ್ವಕಪ್​ನಂತಹ ಟೂರ್ನಿಗಳಲ್ಲಿ ಬಾಂಗ್ಲಾ, ಭಾರತಕ್ಕೆ ಸಡ್ಡು ಹೊಡೆದಿದೆ. ಹೀಗಾಗಿ ಬಾಂಗ್ಲಾದವರನ್ನು ಅತ್ಯಂತ ನಿರ್ಣಾಯಕವಾಗಿ ಎದುರಿಸಬೇಕಿದೆ. ಗ್ರೂಪ್​ ಹಂತದಲ್ಲಿ 3 ಮ್ಯಾಚ್ ಆಡಿರುವ ಬಾಂಗ್ಲಾ ಎರಡು ಗೆಲುವು ಪಡೆದಿದೆ. ಸೂಪರ್​-4ರಲ್ಲೂ ಒಂದು ಗೆಲುವು ಪಡೆದಿದೆ. ಭಾರತ ಆಡಿರುವ ಎಲ್ಲ ಪಂದ್ಯದಲ್ಲಿ ವಿಜಯ ಸಾಧಿಸಿದೆ. ಆದರೆ ಇಂದಿನ ಪಂದ್ಯ ಮಾತ್ರ ಟೀಮ್ ಇಂಡಿಯಾಗೆ ಇಂಪಾರ್ಟೆಂಟ್​ ಆಗಿದ್ದು ಫೈನಲ್​ಗೆ ಎಂಟ್ರಿ ಕೊಡುವ ಕಾರಣಕ್ಕಾಗಿ ಗೆಲ್ಲಲೇಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ