/newsfirstlive-kannada/media/media_files/2025/09/23/kl_rahul_gill-2025-09-23-15-24-32.jpg)
ಏಷ್ಯಾಕಪ್ ಭರದಿಂದ ಸಾಗಿದೆ. ಚಾಂಪಿಯನ್ ಪಟ್ಟದತ್ತ ದಿಟ್ಟ ಹೆಜ್ಜೆ ಇಟ್ಟಿರುವ ಟೀಮ್ ಇಂಡಿಯಾ, ಇದೇ ವೇಳೆ ಮುಂಬರೋ ವೆಸ್ಟ್ ಇಂಡೀಸ್ ಎದುರಿನ ಟೆಸ್ಟ್ ಸರಣಿಗೆ ಸಿದ್ಧತೆ ಆರಂಭಿಸಿದೆ. ಇನ್ನೆರೆಡು ದಿನದಲ್ಲಿ 15 ಸದಸ್ಯರ ಟೀಮ್​ ಇಂಡಿಯಾ ಅನೌನ್ಸ್​ ಆಗಲಿದೆ. 15 ಮಂದಿಯ ತಂಡದಲ್ಲಿ ಯಾರೆಲ್ಲಾ ಸ್ಥಾನ ಪಡೆಯೋ ರೇಸ್​ನಲ್ಲಿದ್ದಾರೆ?.
ಏಷ್ಯಾಕಪ್​​ನಲ್ಲಿ ಟೀಮ್ ಇಂಡಿಯಾ ನಾಗಲೋಟ ಮುಂದುವರಿದಿದೆ. ಸೂಪರ್​​-4ನಲ್ಲಿ ಸೂಪರ್ ಆಟವಾಡ್ತಿರುವ ಟೀಮ್ ಇಂಡಿಯಾ, ಏಷ್ಯನ್ ಕಿಂಗ್ಸ್​ ಆಗಿ ಮೆರೆಯೋಕೆ ಎರಡಜ್ಜೆಯಷ್ಟೇ ಬಾಕಿಯಿದೆ. ಆದ್ರೆ, ಏಷ್ಯಾಕಪ್​ ಉಪಾಂತ್ಯಕ್ಕೆ ತಲುಪುತ್ತಿರುವ ಹೊತ್ತಲ್ಲೇ ಟೀಮ್ ಮ್ಯಾನೇಜ್​ಮೆಂಟ್, ವೆಸ್ಟ್ ಇಂಡೀಸ್ ಎದುರಿನ ಟೆಸ್ಟ್ ಸರಣಿಯ ಪ್ರಿಪರೇಷನ್ ಆರಂಭಿಸಿದೆ. ಟೆಸ್ಟ್ ತಂಡ ಪ್ರಕಟಿಸೋಕೆ ತೆರೆ ಮರೆಯಲ್ಲೇ ಕಸರತ್ತು ನಡೆಸ್ತಿರುವ ಸೆಲೆಕ್ಷನ್ ಕಮಿಟಿ, ಕೆಲ ಅಚ್ಚರಿಯ ಆಯ್ಕೆಗೆ ಮುಂದಾಗಿದೆ.
/filters:format(webp)/newsfirstlive-kannada/media/media_files/2025/08/01/kl-rahul-test-2025-08-01-08-39-19.jpg)
ಆರಂಭಿಕರಾಗಿ ಜೈಸ್ವಾಲ್, ಕೆ.ಎಲ್.ರಾಹುಲ್ ಫಿಕ್ಸ್..!
2 ಪಂದ್ಯಗಳ ಟೆಸ್ಟ್​ ಸರಣಿಗೆ ಶುಭ್​ಮನ್ ಗಿಲ್​ ನಾಯಕತ್ವದ 15 ಜನರ ತಂಡ ಪ್ರಕಟವಾಗಲಿದೆ. ಈ 15 ಸದಸ್ಯರ ತಂಡದಲ್ಲಿ ಓಪನರ್​ಗಳಾಗಿ ಯಶಸ್ವಿ ಜೈಸ್ವಾಲ್, ಕೆ.ಎಲ್.ರಾಹುಲ್ ಆಯ್ಕೆ ಕನ್ಫರ್ಮ್ ಆಗಿದೆ​. ಇನ್ನುಳಿದಂತೆ 3ನೇ ಕ್ರಮಾಂಕಕ್ಕೆ ಸಾಯಿ ಸುದರ್ಶನ್, ಬ್ಯಾಕ್ ಆಫ್ ಓಪನರ್​ ಆಗಿ ಅಭಿಮನ್ಯು ಈಶ್ವರನ್ ಸ್ಥಾನಗಿಟ್ಟಿಸಿಕೊಳ್ಳಲಿದ್ದಾರೆ.
ಬಿಗ್ ಮ್ಯಾಚ್ ವಿನ್ನರ್ ರಿಷಭ್ ಪಂತ್ ರೋಲ್ಡ್​ ಔಟ್
ಇಂಗ್ಲೆಂಡ್ ಸರಣಿಯಲ್ಲಿ ಇಂಜುರಿಗೆ ತುತ್ತಾಗಿದ್ದ ರಿಷಭ್ ಪಂತ್, ಸಂಪೂರ್ಣ ಚೇತರಿಸಿಕೊಂಡಿಲ್ಲ. ಹೀಗಾಗಿ ವೆಸ್ಟ್ ಇಂಡೀಸ್ ಎದುರಿನ ಟೆಸ್ಟ್​ ಸರಣಿಯಿಂದ ದೂರ ಉಳಿಯಲಿದ್ದು, ಧೃವ್ ಜುರೇಲ್ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಲಿದ್ದಾರೆ. ಬ್ಯಾಕ್ ಅಪ್ ವಿಕೆಟ್ ಕೀಪರ್ ಆಗಿ ಜಗದೀಶನ್ ಆಯ್ಕೆ ಫಿಕ್ಸ್​. ಆದ್ರೆ, ಪಂತ್​ ಅಲಭ್ಯತೆಯಲ್ಲಿ ಉಪ ನಾಯಕ ಯಾರು ಅನ್ನೋ ಪ್ರಶ್ನೆ ಕಾಡ್ತಿದೆ. ಕೆ.ಎಲ್.ರಾಹುಲ್​​​​ಗೆ ವೈಸ್ ಕ್ಯಾಪ್ಟನ್ ಪಟ್ಟ ನೀಡೋಕೆ ಸೆಲೆಕ್ಷನ್ ಕಮಿಟಿ ಚಿಂತನೆ ನಡೆಸ್ತಿದೆ.
ಕರುಣ್ ಅನುಮಾನ.. ರೇಸ್​ನಲ್ಲಿ ಶ್ರೇಯಸ್​​, ಪಡಿಕ್ಕಲ್...!
ಇಂಗ್ಲೆಂಡ್ ಸರಣಿಯಲ್ಲಿ ಸ್ಥಾನ ಪಡೆದಿದ್ದ ಕರುಣ್ ನಾಯರ್​, 8 ವರ್ಷಗಳ ಬಳಿಕ ಟೀಮ್ ಇಂಡಿಯಾಗೆ ಕಮ್​ಬ್ಯಾಕ್ ಮಾಡಿದ್ದರು. ಆದ್ರೆ, ಕಂಪ್ಲೀಟ್​ ವೈಫಲ್ಯ ಅನುಭವಿಸಿದ ಕರುಣ್ ನಾಯರ್, ವೆಸ್ಟ್ ಇಂಡೀಸ್ ಸರಣಿಯಲ್ಲಿ ಕಾಣಿಸಿಕೊಳ್ಳುವುದು ಅನುಮಾನವಾಗಿದೆ. ಕರುಣ್ ನಾಯರ್ ಸ್ಥಾನದಲ್ಲಿ ಎಂಟ್ರಿ ನೀಡಲು ಇಬ್ಬರು ಕಾದು ಕುಳಿತಿದ್ದಾರೆ. ಶ್ರೇಯಸ್ ಅಯ್ಯರ್ & ದೇವದತ್ತ್​​ ಪಡಿಕ್ಕಲ್ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಸದ್ಯ ಆಸ್ಟ್ರೇಲಿಯಾ ಎ ಎದುರಿನ ಅನದಿಕೃತ ಟೆಸ್ಟ್​ನಲ್ಲಿ ಪಡಿಕ್ಕಲ್ ಬೆಸ್ಟ್ ಪರ್ಫಾಮೆನ್ಸ್ ನೀಡಿದ್ದಾರೆ.
ರಜತ್ ಪಾಟಿದಾರ್​ ಕಮ್​​ಬ್ಯಾಕ್ ಕನಸು ನನಸಾಗುತ್ತಾ..?
ಶ್ರೇಯಸ್ ಅಯ್ಯರ್​, ಪಡಿಕ್ಕಲ್ ಮಾತ್ರವಲ್ಲ, ರಜತ್ ಪಾಟಿದಾರ್ ಸಹ ಟೆಸ್ಟ್ ಕಮ್​ಬ್ಯಾಕ್ ಕನವರಿಕೆಯಲ್ಲಿದ್ದಾರೆ. ದುಲೀಪ್ ಟ್ರೋಫಿಯಲ್ಲಿ ರನ್ ಹೊಳೆ ಹರಿಸಿರುವ ರಜತ್, ಮತ್ತೆ ವೈಟ್​ ಜರ್ಸಿಯಲ್ಲಿ ಕಾಣಿಸಿಕೊಳ್ಳಲು ಹಪಾಹಪಿಸ್ತಿದ್ದಾರೆ. ಇನ್ನೊಂದೆಡೆ ಯುವ ಆಟಗಾರ ಸರ್ಫರಾಜ್​ ಖಾನ್​ ಕೂಡ ಸ್ಥಾನ ನಿರೀಕ್ಷೆಯಲ್ಲಿದ್ದಾರೆ. ಇಂಗ್ಲೆಂಡ್​ ಸರಣಿ ವೇಳೆ ತಂಡದಿಂದ ಡ್ರಾಪ್ ಮಾಡಿದ್ದ ಸೆಲೆಕ್ಷನ್ ಕಮಿಟಿ, ತವರಿನಲ್ಲಾದರು ಚಾನ್ಸ್ ನೀಡುತ್ತಾ ಅನ್ನೋದು ಕ್ಯೂರಿಯಾಸಿಟಿ ಹುಟ್ಟುಹಾಕಿದೆ.
ಜಸ್​​ಪ್ರೀತ್ ಬೂಮ್ರಾಗೆ ರೆಸ್ಟ್​.. ಸಿರಾಜ್​​​ ಉಸ್ತುವಾರಿ..!
ಭಾರತದಲ್ಲೇ ಟೆಸ್ಟ್ ಸರಣಿ ನಡೀತಿದೆ. ಹೀಗಾಗಿ ಸೆಲೆಕ್ಷನ್ ಕಮಿಟಿ ನಾಲ್ವರು ಸ್ಪಿನ್ನರ್​ಗಳನ್ನು ಆಯ್ಕೆ ಮಾಡಲಿದೆ. ಈ ಪೈಕಿ ಸ್ಪಿನ್ ಆಲ್​ರೌಂಡರ್ ಕೋಟಾದಲ್ಲಿ ರವೀಂದ್ರ ಜಡೇಜಾ, ವಾಷ್ಟಿಂಗ್ಟನ್ ಸುಂದರ್ ಕಾಣಿಸಿಕೊಳ್ಳೋದು ಪಕ್ಕಾ. ಮತ್ತೊಬ್ಬ ಸ್ಪಿನ್ ಆಲ್​ರೌಂಡರ್ ಆಗಿ ಆಕ್ಷರ್ ಪಟೇಲ್ ಕಮ್​ಬ್ಯಾಕ್ ಮಾಡೋ ಸಾಧ್ಯತೆಯನ್ನ ತಳ್ಳಿ ಹಾಕುವಂತಿಲ್ಲ. ಇನ್ನುಳಿದಂತೆ ಸ್ಪೆಷಲಿಸ್ಟ್ ಸ್ಪಿನ್ನರ್ ಆಗಿ ಕುಲ್​ದೀಪ್​ ಯಾದವ್​ಗೆ ಆಯ್ಕೆ ಸಮಿತಿ ಮಣೆ ಹಾಕಲಿದೆ.
ಇನ್ನು ಏಷ್ಯಾಕಪ್​​ನಲ್ಲಿ ಆಡ್ತಿರುವ ಜಸ್​ಪ್ರೀತ್ ಬೂಮ್ರಾಗೆ ವೆಸ್ಟ್ ಇಂಡೀಸ್ ಸರಣಿಯಲ್ಲಿ ರೆಸ್ಟ್ ನೀಡೋ ಚಾನ್ಸ್ ಇದೆ. ಒಂದು ವೇಳೆ ಬೂಮ್ರಾ ವಿಶ್ರಾಂತಿ ಪಡೆದರೆ, ಬೌಲಿಂಗ್ ವಿಭಾಗದ ಜವಾಬ್ದಾರಿ ಮೊಹಮ್ಮದ್ ಸಿರಾಜ್ ವಹಿಸಿಕೊಳ್ಳಲಿದ್ದಾರೆ. ಇನ್ನುಳಿದಂತೆ ಆಕಾಶ್ ದೀಪ್, ಪ್ರಸಿದ್ಧ್ ಕೃಷ್ಣ ಸದ್ಯ ಸ್ಥಾನದ ರೇಸ್​​ನಲ್ಲಿದ್ದಾರೆ. ಆದ್ರೆ, ಹರ್ಷಿತ್ ರಾಣಾ ಮೇಲಿನ ವ್ಯಾಮೋಹ ಪ್ರಸಿದ್ಧ್​​ ಕೃಷ್ಣಗೆ ಸಂಕಷ್ಟ ತಂದಿಟ್ಟರು ಅಚ್ಚರಿ ಇಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ