/newsfirstlive-kannada/media/media_files/2025/08/25/chinnayya-2025-08-25-08-32-57.jpg)
ಸೌಜನ್ಯ ಪರ ಹೋರಾಟಗಾರ ಹಾಗೂ ಈಗಿನ ಬುರುಡೆ ಪಡ್ಯಂತ್ರ ಪ್ರಕರಣದಲ್ಲೂ ಮುಂಚೂಣಿಯಲ್ಲಿದ್ದ ಮಹೇಶ್ ಶೆಟ್ಟಿ ತಿಮರೋಡಿ ದೊಡ್ಡ ಆಘಾತವಾಗಿದೆ. ಹೋರಾಟದ ಹೆಸರಲ್ಲಿ ಆರ್ಭಟಿಸುತ್ತಿದ್ದ, ತಿಮರೋಡಿಗೆ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತೆ ಬಿಗ್​ ಶಾಕ್​ ನೀಡಿದ್ದಾರೆ. ಒಂದು ವರ್ಷಗಳ ಕಾಲ, ದಕ್ಷಿಣ ಕನ್ನಡದಿಂದ ತಿಮರೋಡಿಯನ್ನು ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.
ಸೌಜನ್ಯ ಹೋರಾಟದಲ್ಲಿ ತೋಡಗಿಸಿ ಕೊಂಡಿದ್ದ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಈ ಮೊದಲೇ ಸಾಲು ಸಾಲು ಪ್ರಕರಣಗಳು ದಾಖಲಾಗಿದ್ವು.. ಗಡಿಪಾರು ಪ್ರಕ್ರಿಯೆ ನಡೆಯುತ್ತಿರುವಾಗಲೇ ತಿಮರೋಡಿ ವಿರುದ್ಧ ಮತ್ತಷ್ಟು ಆರೋಪಗಳು ಕೇಳಿ ಬಂದಿದ್ವು. ಈ ಕಾರಣದಿಂದ ಗಡಿಪಾರು ಮಾಡಲಾಗಿದೆ.
ಇದನ್ನೂ ಓದಿ: ಈ ಒಂದು ಬಲವಾದ ಕಾರಣಕ್ಕಾಗಿ ಬಾಂಗ್ಲಾ ವಿರುದ್ಧ ಟೀಮ್ ಇಂಡಿಯಾ ಇಂದು ಗೆಲ್ಲಲೇಬೇಕಿದೆ..!
ಚೆನ್ನಯ್ಯನ ಕೇಸ್ ಶುರುವಾದ ಬಳಿಕ ತಿಮರೋಡಿ ವಿರುದ್ಧ ಮತ್ತಷ್ಟು ಪ್ರಕರಣ ದಾಖಲಾಗಿದ್ವು. ಈ ಕೇಸ್​ಗಳಲ್ಲಿ ಒಮ್ಮೆ ಬಂಧನವಾಗಿದ್ದು, ಸರಣಿ ವಿಚಾರಣೆಯನ್ನು ಎದುರಿಸಿದ್ದಾರೆ. ಜೊತೆಗೆ ಮೇಲಿಂದ ಮೇಲೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರ ನೋಟಿಸ್ ನೀಡುತ್ತಿದ್ದರು. ಹೀಗಾಗಿ ಬೆಳ್ತಂಗಡಿ ಪೊಲೀಸರ ವರದಿಯನ್ನು ಆಧರಿಸಿ ಗಡಿಪಾರು ಆದೇಶ ಹೊರಡಿಸಲಾಗಿದೆ. ದಕ್ಷಿಣಕನ್ನಡ ಜಿಲ್ಲೆಯಿಂದ ಒಂದು ವರ್ಷ ರಾಯಚೂರು ಜಿಲ್ಲೆಗೆ ಗಡಿಪಾರು ಮಾಡಲಾಗಿದ್ದು, ಪೊಲೀಸರು ಅಥವಾ ಕೋರ್ಟ್​ ನೋಟಿಸ್ ಜಾರಿ ಮಾಡಿದಾಗ ಜಿಲ್ಲೆಗೆ ಬರಲು ಅವಕಾಶ ಇದೆ. ಇನ್ನು ಸರ್ಕಾರ ಅಥವಾ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಕೋರ್ಟ್​ನಲ್ಲಿ ಕಣ್ಣೀರು ಹಾಕಿದ ಆರೋಪಿ ಚೆನ್ನಯ್ಯ
ಧರ್ಮಸ್ಥಳ ವಿರುದ್ಧದದ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಳ್ತಂಗಡಿ ನ್ಯಾಯಾಲಯದಲ್ಲಿ BNSS 183 ಅಡಿಯಲ್ಲಿ ಸ್ವ-ಇಚ್ಛಾ ಹೇಳಿಕೆ ನೀಡಲು ಬಂದಿದ್ದ ಚಿನ್ನಯ್ಯ, ನ್ಯಾಯಾಧೀಶರ ಮುಂದೆ ಗಳಗಳನೆ ಕಣ್ಣೀರಿಟ್ಟಿದ್ದಾನೆ. ಹಾಗೂ ನನ್ನದೇನೂ ತಪ್ಪಿಲ್ಲ ಎಂದು ಗೋಳಾಡಿದ್ದಾನೆ. ಸುಮಾರು ಮೂರು ಗಂಟೆಗಳ ಕಾಲ ಹೇಳಿಕೆ ದಾಖಲಿಸಿದರೂ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ, ಸೆಪ್ಟೆಂಬರ್ 25ಕ್ಕೆ ಮತ್ತೆ ಹಾಜರಾಗಲು ಕೋರ್ಟ್ ಆದೇಶಿಸಿದ್ದು, ಸದ್ಯ ಚಿನ್ನಯ್ಯನನ್ನು ಶಿವಮೊಗ್ಗ ಜೈಲಿಗೆ ಅಧಿಕಾರಿಗಳು ಶಿಪ್ಟ್​ ಮಾಡಿದ್ದಾರೆ.
ಒಟ್ಟಾರೆ.. ಧರ್ಮಸ್ಥಳ ವಿರುದ್ಧ ಬುರುಡೆ ಬಿಟ್ಟ ಗ್ಯಾಂಗ್​ ದಿಕ್ಕಾಪಾಲಾಗಿದೆ. ತಿಮರೋಡಿ ಗಡಿಪಾರಾಗಿದ್ರೆ, ಮಾಸ್ಕ್​ ಮ್ಯಾನ್​ ಚಿನ್ನಯ್ಯ ಜೈಲು ಪಾಲಾಗಿದ್ದಾನೆ. ಸದ್ಯ ಚಿನ್ನಯ್ಯನ ಸ್ವಇಚ್ಛಾ ಹೇಳಿಕೆಯು ತನಿಖೆಯ ದಿಕ್ಕನ್ನೇ ಬದಲಿಸುವ ಸಾಧ್ಯತೆಯಿದೆ.
ಇದನ್ನೂ ಓದಿ: ನವರಾತ್ರಿ ಉಪವಾಸ.. ಆರೋಗ್ಯದ ಎಚ್ಚರಿಕೆ ಏನು, ಈ ರೀತಿಯಾಗಿ ಮಾಡಲೇಬೇಡಿ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ