/newsfirstlive-kannada/media/media_files/2025/10/09/pm-2025-10-09-16-39-09.jpg)
ಮುಂಬೈ: ಇದೇ ಮೊದಲ ಬಾರಿಗೆ ಭಾರತ ಪ್ರವಾಸದಲ್ಲಿರುವ ಇಂಗ್ಲೆಂಡ್ ಪ್ರಧಾನಿ ಕೀರ್ ಸ್ಟಾರ್ಮರ್ (Keir Starmer),‘ಭಾರತ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಹಾದಿಯಲ್ಲಿದೆ’ ಎಂದು ಬಣ್ಣಿಸಿದ್ದಾರೆ. ಈ ಮೂಲಕ ಟ್ರಂಪ್ ಸತ್ತ ಆರ್ಥಿಕತೆ ಹೇಳಿಕೆಗೆ ಕೌಂಟರ್ ಕೊಟ್ಟಿದ್ದಾರೆ.
ಇದಲ್ಲದೇ ಭಾರತ ದೇಶವು ಜಪಾನ್​ನ ಹಿಂದಿಕ್ಕಿ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿದ್ದು, ಈ ಮೂಲಕ ಭಾರತದಲ್ಲಿ ಬೆಳವಣಿಗೆಯಲ್ಲಿ ನಾವು ಪಾಲುದಾರರಾಗಲು ಬಯಸುತ್ತೇವೆ ಎಂದಿದ್ದಾರೆ.
ಹಿಂದಿಯಲ್ಲಿ ಭಾಷಣ ಆರಂಭಿಸಿದ ಸ್ಟಾರ್ಮರ್​..!
ನಮಸ್ಕಾರ್ ದೋಸ್ತಾನ್ ಎನ್ನುವುದರ ಮೂಲಕ ಇಂಗ್ಲೆಂಡ್ ಪ್ರಧಾನಿ ಭಾಷಣ ಆರಂಭಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು 2028ರ ವೇಳೆಗೆ ಮೂರನೇ ಆರ್ಥಿಕತೆಯಾಗುವ ಹಾದಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದಿಸುತ್ತೇನೆ ಹಾಗೂ 2047ರ ವೇಳೆಗೆ ನಿಮ್ಮ ವಿಕಸಿತ ಭಾರತ ಕಲ್ಪನೆ ಸಾಕಾರಗೊಳ್ಳಲಿ ಎಂದು ಹಾರೈಸಿದ್ದಾರೆ.
UNSE ಖಾಯಂ ಸ್ಥಾನಕ್ಕೆ ಬೆಂಬಲಿಸಿದ ಯು.ಕೆ ಪಿಎಂ
ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಖಾಯಂ ಸ್ಥಾನದ ಭಾರದ ಪ್ರಯತ್ನಕ್ಕೆ, ಕೀರ್ ಸ್ಟಾರ್ಮರ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದಲ್ಲದೆ ಈ ಕುರಿತು ಕಾಮನ್​ವೆಲ್ತ್​ ಹಾಗು ಜಿ 20 ನಲ್ಲಿ ಕುಳಿತು ಚರ್ಚಿಸಲಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಬೆಂಕಿಯಲ್ಲಿ ಬೆಂದು ಕರಕಲಾದ ಪ್ರೀತಿ.. ಬೆಂಗಳೂರಲ್ಲಿ ಹೃದಯ ವಿದ್ರಾವಕ ಘಟನೆ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ