/newsfirstlive-kannada/media/media_files/2025/10/10/bengalore-lovers-1-2025-10-10-07-43-39.jpg)
ಸಾಂದರ್ಭಿಕ ಫೋಟೋ Photograph: (AI)
ಪ್ರೀತಿಗೆ ಸಾವಿಲ್ಲ ಅಂತಾರೆ.. ಆದ್ರೆ ಪ್ರೀತಿ ತಮ್ಮ ಪಾಲಾಗಿಲ್ಲ ಅಂದ್ರೆ ಜೋಡಿ ನಾವ್​ ಸತ್ರೂ ಪರ್ವಾಗಿಲ್ಲ, ಪ್ರೀತಿ ಸಾಯಬಾರದು ಅಂತ ಸಾವಿನ ಮನೆ ಸೇರುತ್ತಾರೆ.. ಇಲ್ಲೊಬ್ಬ ಪ್ರೇಮಿ ಕೂಡ ಪ್ರೀತಿ ಸಿಗಲ್ಲ ಅಂತ ಗೊತ್ತಾಗ್ತಿದ್ದಂತೆ ಸಾವಿನ ಕದ ತಟ್ಟಿದ್ದು, ಪ್ರೇಯಸಿ ಕೂಡ ಅವನ ಹಾದಿಯನ್ನೇ ಹಿಡಿದಿದ್ದಾಳೆ. ಆದ್ರೆ ಇವರಿಬ್ಬರೂ ಸತ್ತಿದ್ದೂ ಯಾಕೇ ಅನ್ನೋದು ನಿಗೂಢವಾಗಿದೆ..
ಪೆಟ್ರೋಲ್​ ಸುರಿದುಕೊಂಡು ಲವ್​​ ಬರ್ಡ್ಸ್​​​ ಸೂಸೈಡ್​!?
ಬೆಂಗಳೂರಿನ ಯಲಹಂಕ ನ್ಯೂಟೌನ್​​ನಲ್ಲಿರೋ ಕೂಲ್ ಕಂಫರ್ಟ್ ಎಂಬ ಚಿಕ್ಕ ಲಾಡ್ಜ್, ಇದೇ ಲಾಡ್ಜ್​​ನ ರೂಂನಲ್ಲಿ ನಿನ್ನೆ ಸಂಜೆ 5 ಗಂಟೆಗೆ ಬೆಂಕಿ ಅವಘಡ ಸಂಭವಿಸಿದೆ. ಈ ಬೆಂಕಿ ಅನಾಹುತದಲ್ಲಿ 30 ವರ್ಷದ ರಮೇಶ್ ಮತ್ತು ಕಾವೇರಿ ಎಂಬ ಇಬ್ಬರು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಜಾಲಿ ಜಾಲಿ ಎಂದ ‘ಲಕ್ಷ್ಮೀ ನಿವಾಸ’ದ ಕುಟುಂಬ.. ಕ್ಯಾಮೆರಾಗೆ ಕಂಡಿದ್ದು ಹೀಗೆ.. Photos
ಅವನದ್ದು ಗದಗ ಮತ್ತು ಆಕೆಯದ್ದು ಬಾಗಲಕೋಟೆಯ ಹುನಗುಂದ. ಈ ಇಬ್ಬರು ಒಂದು ವಾರದಿಂದ ಇದೇ ಲಾಡ್ಜ್​​ನಲ್ಲಿ ವಾಸವಿದ್ರಂತೆ. ನಿನ್ನೆ ಬೆಳಗ್ಗೆ ಇಬ್ಬರಿಗೂ ಜಗಳ ಆಗಿದೆ ಎನ್ನಲಾಗಿದೆ. ಮಧ್ಯಾಹ್ನ ಹೊರಗಡೆ ಹೋಗಿ ವಾಪಸ್ ಬರುವಾಗ ರಮೇಶ್, ಪೆಟ್ರೋಲ್ ತುಂಬಿದ ಬಾಟಲ್ ಹಿಡಿದು ವಾಪಸ್​ ಬಂದಿದ್ದ.
ಬೆಂಕಿಯಲ್ಲಿ ಬೆಂದ ‘ಪ್ರೀತಿ’
- ಮನೆಯಲ್ಲಿ ಪ್ರೀತಿಗೆ ಒಪ್ಪಿಗೆ ಸಿಗ್ಲಿಲ್ಲ ಅನ್ನೋ ಕಾರಣಕ್ಕೆ ಆತ್ಮಹತ್ಯೆ
- ಸ್ಪಾನಲ್ಲಿ ಯುವತಿ ಕೆಲಸ, ಖಾಸಗಿ ಕಂಪನಿಯಲ್ಲಿ ಯುವಕ ಕೆಲಸ
- ರೂಮಿನಲ್ಲಿ ಏನಾಯ್ತೋ ಏನೋ ರಮೇಶ್​ ಬೆಂಕಿ ಹಚ್ಚಿಕೊಂಡಿದ್ದಾನೆ
- ಆದರೆ ಕಾವೇರಿ ಬಾತ್ ರೂಂಗೆ ಹೋಗಿ ಲಾಕ್ ಮಾಡಿಕೊಂಡಿದ್ದಾಳೆ
- ಕೆಲಸ ಮಾಡ್ತಿದ್ದ ಸ್ಪಾ ಓನರ್​ಗೆ ಯುವತಿ ಫೋನ್ ಮಾಡಿ ಮಾಹಿತಿ
- ಅಷ್ಟೊತ್ತಿಗಾಗಲೇ ಇಡೀ ಲಾಡ್ಜ್​​ಗೆ ವ್ಯಾಪಿಸಿದ ಬೆಂಕಿಯ ಹೊಗೆ
- ಅಗ್ನಿಶಾಮಕ, ಪೊಲೀಸರಿಗೆ ಮಾಹಿತಿ ನೀಡಿದ ಲಾಡ್ಜ್ ಮಾಲೀಕ
ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು, ಬಿಲ್ಡಿಂಗ್ ಗ್ಲಾಸ್ ಒಡೆದು ಒಳ ನುಗ್ಗಿದ್ದಾರೆ. ಅಷ್ಟೋತ್ತಿಗಾಗಲೇ ರಮೇಶ್ ಸಂಪೂರ್ಣ ಸುಟ್ಟು ಕರಕಲಾಗಿದ್ರೆ, ಕಾವೇರಿ ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ. ಸದ್ಯ ಇಬ್ಬರ ಮೃತದೇಹಗಳನ್ನ ಆಸ್ಪತ್ರೆಗೆ ಶಿಫ್ಟ್ ಮಾಡ್ಲಾಗಿದ್ದು, ಯಲಹಂಕ ನ್ಯೂ ಟೌನ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಈ ಇಬ್ಬರು ಲಾಡ್ಜ್​​ಗೆ ಬಂದಿದ್ಯಾಕೆ? ರೂಂಲ್ಲಿ ಅಸಲಿಗೆ ಆಗಿದ್ದೇನು? ಅನ್ನೋದು ನಿಗೂಢವಾಗಿದೆ.. ಪೊಲೀಸರು ಇಬ್ಬರ ಬಗ್ಗೆ ಮಾಹಿತಿ ಕಲೆ ಹಾಕ್ತಿದ್ದು, ತನಿಖೆಯಿಂದ ಅಸಲಿ ಕಹಾನಿ ಹೊರಬರಬೇಕಿದೆ.
ಇದನ್ನೂ ಓದಿ:ಇವತ್ತಿನಿಂದ ಡೆಲ್ಲಿ ದಂಗಲ್​.. ಈ ಆಟಗಾರನಿಗೆ ಕೊನೆಯ ಅವಕಾಶ.. ಬುಮ್ರಾ ಔಟ್?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ