Advertisment

ಇವತ್ತಿನಿಂದ ಡೆಲ್ಲಿ ದಂಗಲ್​.. ಈ ಆಟಗಾರನಿಗೆ ಕೊನೆಯ ಅವಕಾಶ.. ಬುಮ್ರಾ ಔಟ್?

ಇಂಡೋ-ವಿಂಡೀಸ್​​ 2ನೇ ಟೆಸ್ಟ್​ ಫೈಟ್​​ಗೆ ವೇದಿಕೆ ಸಜ್ಜಾಗಿದೆ. ದೆಹಲಿಯ ಅರುಣ್​ ಜೇಟ್ಲಿ ಸ್ಟೇಡಿಯಂನಲ್ಲಿ ಇಂದಿನಿಂದ 2ನೇ ಟೆಸ್ಟ್​ ಕದನ ಆರಂಭವಾಗಲಿದೆ. ಈ ಟೆಸ್ಟ್​​ನಲ್ಲೂ ವಿಂಡೀಸ್​ನ ಉಡೀಸ್​ ಮಾಡೋಕೆ ತುದಿಗಾಲಲ್ಲಿ ನಿಂತಿದೆ.

author-image
Ganesh Kerekuli
Team India
Advertisment
  • ದೆಹಲಿಯಲ್ಲಿಂದು ಇಂಡೋ-ವಿಂಡೀಸ್​​ 2ನೇ ಟೆಸ್ಟ್​ ಪಂದ್ಯ
  • ಶುಭಾರಂಭ ಮಾಡಿದ ಶುಭ್​ಮನ್​ಗೆ ಸರಣಿ ಗೆಲ್ಲೋ ತವಕ​​
  • ಮ್ಯಾನೇಜ್​ಮೆಂಟ್​ ಪಾಲಿಗೆ ಕಗ್ಗಂಟಾದ 3ನೇ ಕ್ರಮಾಂಕ

ಅಹ್ಮದಾಬಾದ್​​ನಲ್ಲಿ ವಿಂಡೀಸ್​ ಪಡೆಯನ್ನ ಚಿಂದಿ ಉಡಾಯಿಸಿದ ಟೀಮ್​ ಇಂಡಿಯಾ ಇದೀಗ ಡೆಲ್ಲಿ ದಂಗಲ್​​ಗೆ ರೆಡಿಯಾಗಿದೆ. ಅರುಣ್​ ಜೇಟ್ಲಿ ಸ್ಟೇಡಿಯಂನಲ್ಲಿ ಇಂದಿನಿಂದ ಆರಂಭವಾಗಲಿರುವ ಟೆಸ್ಟ್​​ ಫೈಟ್​​​ನಲ್ಲಿ ಶುಭ್​ಮನ್​ ಗಿಲ್​ ಪಡೆ ಮತ್ತೊಂದು ಸುಲಭದ ದಿಗ್ವಿಜಯವನ್ನ ಎದುರು ನೋಡ್ತಿದೆ. ಅಹ್ಮದಾಬಾದ್​​ ಸೋಲಿನಿಂದ ಕಂಗೆಟ್ಟಿರುವ ವೆಸ್ಟ್ ವಿಂಡೀಸ್ ತಂಡ ಕನಿಷ್ಠ ಟಫ್​ ಫೈಟ್​​ ನೀಡೋಕೆ ಸರ್ಕಸ್​ ನಡೆಸ್ತಿದೆ. 

Advertisment

ಶುಭ್​ಮನ್​ಗೆ ಸರಣಿ ಗೆಲ್ಲೋ ತವಕ

ಇಂಗ್ಲೆಂಡ್​ನಲ್ಲಿ ಆಡಿದ ಮೊದಲ ಸರಣಿಯಲ್ಲೇ ಇಂಪ್ರೆಸ್ಸಿವ್​ ಎನಿಸಿದ್ದ ನೂತನ ನಾಯಕ ಶುಭ್​ಮನ್​ ಗಿಲ್​ ತವರಿನಲ್ಲೂ ಶುಭಾರಂಭ ಮಾಡಿದ್ದಾರೆ. ತವರಿನಲ್ಲಿ ಆಡಿದ್ದ ಕೊನೆಯ ನ್ಯೂಜಿಲೆಂಡ್​ ವಿರುದ್ಧದ ವೈಟ್​ವಾಷ್​​ ಮುಖಭಂಗದ ಬೇಸರವನ್ನ ಅಹ್ಮದಾಬಾದ್​​ ಟೆಸ್ಟ್​​ನ ಗೆಲುವು ಮರೆಸಿದೆ. ಬ್ಯಾಟಿಂಗ್​, ಬೌಲಿಂಗ್​ ಜೊತೆಗೆ ಫೀಲ್ಡಿಂಗ್​ನಲ್ಲೂ ಟೀಮ್​ ಇಂಡಿಯಾ ಟಾಪ್​​ ಕ್ಲಾಸ್​​​ ಪ್ರದರ್ಶನ ನೀಡಿದೆ. ಶುಭ್​ಮನ್​ ಗಿಲ್​ ನಾಯಕತ್ವಕ್ಕೆ ಬಹುಪರಾಕ್​ ಬಂದಿದೆ. ಮೊದಲ ಪಂದ್ಯ ಗೆದ್ದಿರೋ ಗಿಲ್​​ ಕಣ್ಣು ಇದೀಗ ಚೊಚ್ಚಲ ಸರಣಿ ಗೆಲುವಿನ ಮೇಲಿದೆ. 

ಸಾಯಿ ಸುದರ್ಶನ್​ಗೆ ಇದೇ ಕೊನೆಯ ಅವಕಾಶ

ಕೆ.ಎಲ್​ ರಾಹುಲ್​-ಯಶಸ್ವಿ ಜೈಸ್ವಾಲ್​ಗೆ ಟೀಮ್​ ಇಂಡಿಯಾಗೆ ಉತ್ತಮ ಆರಂಭ ನೀಡ್ತಿದ್ದಾರೆ. ಕಳೆದ ಟೆಸ್ಟ್​ ಪಂದ್ಯದಲ್ಲಿ ಬಿಗ್​ ಇನ್ನಿಂಗ್ಸ್​ ಕಟ್ಟುವಲ್ಲಿ ಜೈಸ್ವಾಲ್​ ಎಡವಿದ್ರೂ, ಮ್ಯಾನೇಜ್​ಮೆಂಟ್​ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಕ್ಲಾಸಿಕ್​ ಶತಕ ಸಿಡಿಸಿದ ಕೆ.ಎಲ್​.ರಾಹುಲ್​ ಬಗ್ಗೆ ಯಾವುದೇ ಪ್ರಶ್ನೆಗಳಿಲ್ಲ. ಪ್ರಶ್ನೆ ಇರೋ ಯುವ ಆಟಗಾರ ಸಾಯಿ ಸುದರ್ಶನ್​ ಮೇಲೆ.

ಇದನ್ನೂ ಓದಿ: ಕ್ರಿಕೆಟ್ ಲೋಕದಲ್ಲಿ ಮತ್ತೊಂದು ಮುರುಳಿ ವಿಜಯ್ ಸ್ಟೋರಿ.. ಸೆಹ್ವಾಗ್-ಆರತಿ ಲವ್ ಸ್ಟೋರಿ ಹೇಗಿತ್ತು..?

Advertisment

Team india test series
ಟೀಂ ಇಂಡಿಯಾ Photograph: (ಬಿಸಿಸಿಐ)

ರಾಹುಲ್​ ದ್ರಾವಿಡ್ ಆ ಬಳಿಕ ಚೇತೇಶ್ವರ್​ ಪೂಜಾರ 3ನೇ ಕ್ರಮಾಂಕದಲ್ಲಿ ಟೀಮ್​ ಇಂಡಿಯಾದ ಬೆನ್ನೆಲುಬಾಗಿದ್ರು. ಪೂಜಾರ ನಿರ್ಗಮನದ ಬಳಿ ಶುಭ್​ಮನ್​ ಗಿಲ್​ ಈ ಸ್ಲಾಟ್ ಆಡಿದರಾದ್ರೂ, ಬಿಗ್​ ಸಕ್ಸಸ್​ ಸಿಗಲಿಲ್ಲ. ಕೊಹ್ಲಿ ವಿದಾಯ ಹೇಳಿದ ಬಳಿಕ ಗಿಲ್​ 4ನೇ ಕ್ರಮಾಂಕಕ್ಕೆ ಶಿಫ್ಟ್​ ಆಗಿದ್ದಾರೆ. 3ನೇ ಕ್ರಮಾಂಕದಲ್ಲಿ ಅವಕಾಶ ಗಿಟ್ಟಿಸಿಕೊಂಡ ಸಾಯಿ ಸುದರ್ಶನ ಸತತ ವೈಫಲ್ಯ ಅನುಭವಿಸಿದ್ದಾರೆ. 7 ಇನ್ನಿಂಗ್ಸ್​ಗಳಲ್ಲಿ ಕೇವಲ 147 ರನ್​ಗಳಿಸಿರೋ ಸಾಯಿ ಸುದರ್ಶನ್​ಗೆ ಪ್ಲೇಯಿಂಗ್​ ಇಲೆವೆನ್​ನಲ್ಲಿ ಇಂದೂ ಅವಕಾಶ ಸಿಗೋದು ಪಕ್ಕಾ. ಇದೇ ಕೊನೆಯ ಅವಕಾಶವಾಗಿರಲಿದೆ. ಡೆಲ್ಲಿ ಟೆಸ್ಟ್​ನಲ್ಲಿ ದರ್ಬಾರ್​ ನಡೆಸಿದ್ರೆ ಮಾತ್ರ ಸ್ಥಾನ ಉಳಿಯಲಿದೆ. 

ಆಲ್​​ರೌಂಡರ್​ ನಿತೀಶ್​ ರೆಡ್ಡಿ ಮೇಲಿದೆ ಕಣ್ಣು

ಟೀಮ್​ ಇಂಡಿಯಾದ ಬ್ಯಾಟಿಂಗ್​ ಆರ್ಡರ್​ನಲ್ಲಿ ಬದಲಾವಣೆಯಾಗೋ ಸಾಧ್ಯತೆಯಿದೆ. 4ನೇ ಕ್ರಮಾಂಕದಲ್ಲಿ ಶುಭ್​ಮನ್​ ಗಿಲ್​, 5ನೇ ಕ್ರಮಾಂಕದಲ್ಲಿ ದೃವ್​​ ಜುರೇಲ್​ ಆಡಲಿದ್ದು, ಆಲ್​​ರೌಂಡರ್​ ನಿತೀಶ್​ ರೆಡ್ಡಿಗೆ ಬ್ಯಾಟಿಂಗ್​ನಲ್ಲಿ ಬಡ್ತಿ ಸಿಗೋ ಸಾಧ್ಯತೆಯಿದೆ. ಇಂಜುರಿಯಿಂದ ಚೇತರಿಸಿಕೊಂಡು ಕಮ್​ಬ್ಯಾಕ್​ ಮಾಡಿದ ಮೊದಲ ಟೆಸ್ಟ್​ನಲ್ಲಿ ಬ್ಯಾಟಿಂಗ್ ಮಾಡಲು ನಿತೀಶ್​ ರೆಡ್ಡಿಗೆ ಅವಕಾಶ ಸಿಕ್ಕಿರಲಿಲ್ಲ. ಕೇವಲ 4 ಓವರ್​ ಮಾತ್ರ ಬೌಲಿಂಗ್​ ಮಾಡಿದ್ರು. ಇಂದಿನ ಪಂದ್ಯದಲ್ಲಿ ನಿತೀಶ್​ ರೆಡ್ಡಿಗೆ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಡ್ತಿ ಸಿಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಪೃಥ್ವಿ ಶಾಗೆ ಇದೆಲ್ಲ ಬೇಕಿತ್ತಾ..? ಯಾಕೆ ಹೀಗೆ ಮಾಡ್ತಾರೆ..?

team india england test
Photograph: (ಬಿಸಿಸಿಐ ಟ್ವಿಟರ್)

ಇಂದಿನ ಪಂದ್ಯಕ್ಕೆ ರೆಡಿಯಾಗಿರೋ ಬ್ಲ್ಯಾಕ್​ ಸಾಯ್ಲ್​​ ಪಿಚ್​ ಸ್ಪಿನ್ನರ್ಸ್​ಗೆ ಹೆಚ್ಚಿನ ನೆರವು ನೀಡಲಿದೆ. ​​​ಉಪನಾಯಕ ರವೀಂದ್ರ ಜಡೇಜಾ, ವಾಷಿಂಗ್ಟನ್​ ಸುಂದರ್​​ ಹಾಗೂ ಚೈನಾಮನ್​ ಸ್ಪಿನ್ನರ್​ ಕುಲ್​​ದೀಪ್​ ಯಾದವ್​ ಈ ಮೂವರ ಕಾಂಬಿನೇಷನ್​ನಲ್ಲಿ ಟೀಮ್​ ಇಂಡಿಯಾ ಕಣಕ್ಕಿಳಿಯಲಿದೆ. ಸ್ಪಿನ್ ಟು ವಿನ್​ ಗೇಮ್​ಪ್ಲಾನ್​ ಟೀಮ್​ ಇಂಡಿಯಾದ್ದಾಗಿದ್ದು, ವಿಂಡೀಸ್​ ಬ್ಯಾಟರ್ಸ್​ ಸ್ಪಿನ್ನರ್​ಗಳ ಮುಂದೆ ಕ್ರಿಸ್​ ಕಚ್ಚಿ ನಿಲ್ತಾರಾ ಅನ್ನೋದು ಕುತೂಹಲ ಮೂಡಿಸಿದೆ. 

Advertisment

ಬೂಮ್ರಾಗೆ ರೆಸ್ಟ್..!

ಏಷ್ಯಾಕಪ್​ನಲ್ಲಿ ಬಳಿಕ ಅಹ್ಮದಾಬಾದ್​ ಟೆಸ್ಟ್​ನಲ್ಲೂ ಆಡಿದ ವೇಗಿ ಜಸ್​​ಪ್ರಿತ್​ ಬೂಮ್ರಾಗೆ ಇಂದಿನ ಪಂದ್ಯದಿಂದ ವಿಶ್ರಾಂತಿ ನೀಡೋ ಸಾಧ್ಯತೆಯಿದೆ. ವರ್ಕ್​​ಲೋಡ್​ ಮ್ಯಾನೇಜ್​ಮೆಂಟ್​ ದೃಷ್ಟಿಯಿಂದ ಬೂಮ್ರಾಗೆ ವಿಶ್ರಾಂತಿ ನೀಡಿ ಕನ್ನಡಿಗ ಪ್ರಸಿದ್ಧ ಕೃಷ್ಣಗೆ ಚಾನ್ಸ್​ ಸಿಗೋ ಸಾಧ್ಯತೆಯಿದೆ. ಪ್ರೆಸ್​ ಮೀಟ್​ನಲ್ಲಿ ಮಾತನಾಡಿರೋ ಕ್ಯಾಪ್ಟನ್​ ಗಿಲ್​, ಅವಕಾಶ ಸಿಕ್ರೆ ನಾವು ಪ್ರಸಿದ್ಧ್​​ನ ಆಡುಸ್ತೀವಿ ಎಂದಿದ್ದಾರೆ. ಹೀಗಾಗಿ ಮೊಹಮ್ಮದ್​ ಸಿರಾಜ್​ ಜೊತೆಗೆ ಚೆಂಡು ಹಂಚಿಕೊಳ್ಳೋದ್ಯಾರು ಅನ್ನೋದು ಕುತೂಹಲ ಮೂಡಿಸಿದೆ. 

ಒಟ್ಟಿನಲ್ಲಿ ಇಂದಿನಿಂದ ಆರಂಭವಾಗೋ ಪಂದ್ಯ ವಿಶ್ವ ಟೆಸ್ಟ್​​ ಚಾಂಪಿಯನ್​​ಶಿಪ್​ ದೃಷ್ಟಿಯಿಂದ ಮಹತ್ವದ್ದಾಗಿದೆ. ಡೆಲ್ಲಿ ಟೆಸ್ಟ್​ ಗೆದ್ರೆ ಟೀಮ್​ ಇಂಡಿಯಾಗೆ 12 ಅಂಕಗಳು ಹೆಚ್ಚುವರಿಯಾಗಿ ಸಿಗಲಿವೆ. ಸರಣಿ ಗೆಲುವಿನ ಬಳಿಕ ಸಿಗೋ ಟ್ರೋಫಿಗಿಂತ ಈ ಅಂಕಗಳು ಟೀಮ್​ ಇಂಡಿಯಾ ಪಾಲಿಗೆ ಅತ್ಯಮೂಲ್ಯ ಅನಿಸಿವೆ.

ಇದನ್ನೂ ಓದಿ: ಪಾಂಡ್ಯ ರೇಂಜ್ ಬೇರೆ.. ಈ ಹೊಸ ಕಾರಿನ ಬೆಲೆ ಎಷ್ಟು ಕೋಟಿ..?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Cricket news in Kannada India vs West Indies IND vs WI
Advertisment
Advertisment
Advertisment