/newsfirstlive-kannada/media/media_files/2025/10/09/prithvi-shaw-2025-10-09-14-21-15.jpg)
ಸದಾ ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದ ಪೃಥ್ವಿ, ಈಗ ಮತ್ತೆ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. ರಣಜಿ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ಸರ್ಫರಾಜ್​ ಖಾನ್ ಸಹೋದರ ಮುಶೀರ್ ಖಾನ್​​​​ಗೆ ವಿಕೆಟ್ ಒಪ್ಪಿಸಿದರು. ವಿಕೆಟ್ ಸಿಕ್ಕ ಸಂಭ್ರಮದಲ್ಲಿ ಮುಶೀರ್ ಖಾನ್ ಸಂಭ್ರಮಿಂದ ತೇಲಾಡಿದ್ದರು. ಮೊದಲೇ ಮುಂಬೈ ತಂಡದ ವಿರುದ್ಧ ರೊಚ್ಚಿಗೆದ್ದಿದ್ದ ಪೃಥ್ವಿ, ಮುಶೀರ್​​ ಖಾನ್​ಗೆ ಬ್ಯಾಟ್​ನಿಂದ ದಾಳಿ ಮಾಡಲೆತ್ನಿಸಿದ್ದಾರೆ.
ವಿವಾದದ ಹಿನ್ನೆಲೆಯೇನು..?
ಮಹಾರಾಷ್ಟ್ರ ಪರ ಅಭ್ಯಾಸದ ಪಂದ್ಯದಲ್ಲಿ ಮುಂಬೈ ಎದುರು ಕಣಕ್ಕಿಳಿದ್ದಿ ಪೃಥ್ವಿ ಶಾ, ರೋಷಾಗ್ನಿಯ ಬ್ಯಾಟಿಂಗ್ ಮಾಡಿದ್ದರು. 220 ಎಸೆತಗಳಲ್ಲಿ 22 ಬೌಂಡರಿ, 3 ಸಿಕ್ಸರ್​ ಚಚ್ಚಿದ್ದ ಪೃಥ್ವಿ, ಬರೋಬ್ಬರಿ 181 ರನ್ ಸಿಡಿಸಿದ್ದರು. ಇನ್ನೇದು ದ್ವಿ ಶತಕಕ್ಕೆ ಕೆಲವೇ ಕೆಲವು ರನ್​ಗಳು ಬೇಕಿದ್ದವು, ಆದ್ರೆ ಮುಶೀರ್ ಖಾನ್​ಗೆ ಪೃಥ್ವಿ ಷಾ ವಿಕೆಟ್ ಒಪ್ಪಿಸಿದರು. ವಿಕೆಟ್ ಸಿಕ್ಕ ಕುಷಿಗೆ ಬೌಲರ್ ಮುಶಿರ್ ಖಾನ್ ಸಂಭ್ರಮಿಸಿದರು. ಇದಕ್ಕೆ ಕೆಂಡಾಮಂಡಲವಾದ ಪೃಥ್ವಿ ಷಾ ಬ್ಯಾಟ್​ನಿಂದ ಹಲ್ಲೆ ನಡೆಸಲು ಮುಂದಾಗಿದ್ದಾರೆ.
ರಣಜಿ ಟ್ರೋಫಿಗೂ ಮುನ್ನ ಬೇಕಿತ್ತಾ ಇದೆಲ್ಲಾ..?
ಕಳೆದ ಎರಡು ವರ್ಷಗಳಿಂದ ಕೇವಲ ವಿವಾದಗಳಿಂದಲೇ ಪೃಥ್ವಿ ಶಾ, ಸುದ್ದಿಯಾಗ್ತಿದ್ದಾರೆ. ಸ್ವಪ್ನ ಗಿಲ್​​​​​ ಜೊತೆಗಿನ ವಿವಾದ, ಫಿಟ್ನೆಸ್​​​​​​​​​​​​, ಮುಂಬೈ ತಲೆದಂಡ, ನಿಷೇಧಿತ ಮದ್ದು ಸೇವನೆ ಆರೋಪ ಹೀಗೆ ಹಲವು ವಿಚಾರಗಳಲ್ಲಿ ಸುದ್ದಿಯಾಗಿದ್ದ ಪೃಥ್ವಿ ಶಾ, ಈಗಷ್ಟೇ ಮಹಾರಾಷ್ಟ್ರ ತಂಡಕ್ಕೆ ವಲಸೆ ಬಂದಿದ್ದಾರೆ. ಇಂಥ ಟೈಮ್​ನಲ್ಲಿ ಬ್ಯಾಟ್​ನಿಂದಲೇ ಉತ್ತರ ನೀಡಬೇಕಿರುವ ಪೃಥ್ವಿ ಶಾ, ಬ್ಯಾಟ್​​ನಿಂದಲೇ ಹಲ್ಲೆಗೆ ಮುಂದಾಗಿರುವುದು ನಿಜಕ್ಕೂ ವಿಪರ್ಯಾಸ. ಇದೇ ವಿವಾದ ಕರಿಯರ್​​​ಗೆ ಮತ್ತಷ್ಟು ಮುಳ್ಳಾದರೂ ಅಚ್ಚರಿ ಇಲ್ಲ.
ಇದನ್ನೂ ಓದಿ:ಜಾಲಿವುಡ್​ಗೆ ಇನ್ನೂ ಬೀಗ.. ಬಿಗ್​ಬಾಸ್​​ಗೆ ಮಾತ್ರ ಅವಕಾಶ ಸಿಕ್ಕಿದ್ದು ಹೇಗೆ..?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ