/newsfirstlive-kannada/media/media_files/2025/09/02/kiccha-sudeep-bigg-boss-2025-09-02-20-20-37.jpg)
ಕನ್ನಡದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್‌ಗೆ ವೀಕ್ಷಕರಿಗೆ ರಾತ್ರೋ ರಾತ್ರಿ ಸಿಹಿ ಸುದ್ದಿ ಸಿಕ್ಕಿದೆ. ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದ ಡ್ರಾಮಾಕ್ಕೆ ಬ್ರೇಕ್​ ಬಿದ್ದಿದೆ. ಜಾಲಿವುಡ್​​​ ಸ್ಟುಡಿಯೋ ಬೀಗ ತೆರೆಯಲು ಡಿಸಿಎಂ ಡಿ.ಕೆ.ಶಿವಕುಮಾರ್ ಸೂಚಿಸಿದ್ದಾರೆ. ಅಂತೆಯೇ ಜಿಲ್ಲಾಧಿಕಾರಿಗಳು ಜಾಲಿವುಡ್​ನ C ಗೇಟ್ ಓಪನ್ ಮಾಡಿಸಿದ್ದಾರೆ.
ಇದನ್ನೂ ಓದಿ: ಸ್ನೇಹಿತ ಸೆಹ್ವಾಗ್​ ಪತ್ನಿ ಜೊತೆ ಬಿಸಿಸಿಐ ಅಧ್ಯಕ್ಷ ಮಿಥುನ್ ಅಫೇರ್..? ಏನಿದು ಕತೆ..?
ಆದರೆ ಜಾಲಿವುಡ್​ನಲ್ಲಿ ಬಿಗ್​ಬಾಸ್ ಹೊರತುಪಡಿಸಿ ನಡೆಯುತ್ತಿದ್ದ ಇತರೆ ಯಾವುದೇ ಮನರಂಜನೆ ಚಟುವಟಿಕೆಗಳಿಗೆ ಅವಕಾಶ ನೀಡಿಲ್ಲ. ಸಿ ಗೇಟ್ ಓಪನ್ ಮಾಡಿಸಿ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಯಶಂತ್ ಗುರುಕರ್, ಡಿಸಿಎಂ ನಿರ್ದೇಶನದಂತೆ ಜಾಲಿವುಡ್ ಗೇಟ್ ಸಿ ಓಪನ್ ಮಾಡಿದ್ದೇವೆ. ಇಲ್ಲಿ ಎಸೆನ್ಸಿಯಲ್ ಸರ್ವಿಸ್​​ಗೆ ಮಾತ್ರ ಅನುಮತಿ ನೀಡಲಾಗಿದೆ. ಬಿಗ್​ಬಾಸ್ ಶೋನ ಕಂಟೆಸ್ಟ್ಂಟ್​ಗಳು ಬರಬಹುದು. ಶೋಗೆ ಯಾವುದೇ ರೀತಿಯ ಆಕ್ಷೇಪ ಇಲ್ಲ ಎಂದಿದ್ದಾರೆ.
ಏನಿದು ಪ್ರಕರಣ..?
ಬಿಗ್‌ಬಾಸ್ ಶೋ ನಡೀತಾ ಇದ್ದಿದ್ದು ರಾಮನಗರದಲ್ಲಿರೋ ಅಮ್ಯೂಸ್‌ಮೆಂಟ್ ಪಾರ್ಕ್ ಜಾಲಿವುಡ್ ಸ್ಟುಡಿಯೋ ಆವರಣದಲ್ಲಿ. ಆದ್ರೆ ಜಾಲಿವುಡ್‌ನವರು ಪರಿಸರ ಇಲಾಖೆಯ ನಿಯಮಗಳ ಉಲ್ಲಂಘನೆಯ ಆರೋಪ ಎದುರಿಸ್ತಿದ್ರು. ಗ್ರೀನ್​​ ಜೋನ್​​​ನಲ್ಲಿದ್ರೂ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆದಿರಲಿಲ್ಲ. ತ್ಯಾಜ್ಯ ನೀರನ್ನು ಸಂಸ್ಕರಣೆಯೇ ಮಾಡ್ತಿರ್ಲಿಲ್ಲ. ಹೀಗೆ ಪರಿಸರ ನಿಯಮ ಉಲ್ಲಂಘನೆ ಸಂಬಂಧಿತ ಹಲವು ಕಾರಣಗಳಿಗಾಗಿ ಒಂದು ವರ್ಷಕ್ಕಿಂತ ಹಿಂದೇನೇ ಜಾಲಿವುಡ್‌ಗೆ ನೋಟಿಸ್ ನೀಡಲಾಗಿತ್ತು. ಆದ್ರೆ ಯಾವುದೇ ನೋಟಿಸ್‌ಗೆ ಉತ್ತರಿಸದೆ ನಿರ್ಲಕ್ಷ್ಯ ಮಾಡಿದ ಹಿನ್ನೆಲೆ ನಿನ್ನೆ ರಾಮನಗರ ತಾಲೂಕು ಆಡಳಿತ ಜಾಲಿವುಡ್‌ನ ಸೀಲ್ ಮಾಡಿತ್ತು.
ಇದನ್ನೂ ಓದಿ: ದೀಪಾವಳಿಗೂ ಮುನ್ನವೇ ಪಟಾಕಿ ದುರಂತ.. ಪ್ರಾಣಬಿಟ್ಟ 7 ಕಾರ್ಮಿಕರು
ಬಿಗ್​ಬಾಸ್​ಗೆ ಅವಕಾಶ ಸಿಕ್ಕಿದ್ದು ಹೇಗೆ..?
ಜಾಲಿವುಡ್ ಸ್ಟುಡಿಯೋ ಒಟ್ಟು 35 ಎಕರೆ ಜಾಗದಲ್ಲಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ಕೊಟ್ಟಿದ್ದು ಜಾಲಿವುಡ್​ನ 30 ಎಕರೆ ಜಾಗಕ್ಕೆ ಮಾತ್ರ. ಉಳಿದ ಐದು ಎಕರೆ ಜಾಗದ ಬಳಕೆ ಆಗದ ಕಾರಣ ನೋಟಿಸ್ ಕೊಟ್ಟಿರಲಿಲ್ಲ. ಕಳೆದ ವರ್ಷ ಏಪ್ರಿಲ್, ಜೂನ್​ನಲ್ಲಿ ಜಾಲಿವುಡ್​ಗೆ ನೋಟಿಸ್ ನೀಡಲಾಗಿತ್ತು.
ಉಳಿದ ಐದು ಎಕರೆ ಜಾಗದಲ್ಲಿ ಒಂದೂವರೆ ಎಕರೆ ಬಿಗ್​ಬಾಸ್ ಸೆಟ್ ನಿರ್ಮಾಣ ಮಾಡಲಾಗಿದೆ. ಈ ಜಾಗಕ್ಕೆ ನೋಟೀಸ್ ನೀಡದ ಕಾರಣ ಬಿಗ್​ಬಾಸ್ ಶೋ ಮುಂದುವರೆಸಲು ಸೂಚನೆ ನೀಡಲಾಗಿದೆ. ನೋಟೀಸ್ ನೀಡಿರುವುದು 30 ಎಕರೆ ಬಳಕೆಯ ಜಾಲಿವುಡ್ ಜಾಗಕ್ಕೆ. ಈ ಕಾರಣಕ್ಕೆ ಇನ್ನೂ ಜಾಲಿವುಡ್ ಗೆ ಬೀಗ ಬಿದ್ದಿದೆ. ಉಳಿದ ಐದು ಎಕರೆಯಲ್ಲಿ ನಿರ್ಮಿತ ಬಿಗ್ ಬಾಸ್ ಜಾಗಕ್ಕೆ ನೋಟಿಸ್ ಕೊಟ್ಟಿಲ್ಲ. ಇದರಿಂದಾಗಿ ಬಂದ್ ಮಾಡಿದ ಎರಡು ದಿನಕ್ಕೆ ಬಿಗ್ ಬಾಸ್ ಶೋಗೆ ಮಾತ್ರ ಅವಕಾಶ ಸಿಕ್ಕಿದೆ.
ಇದನ್ನೂ ಓದಿ: ಸ್ಪರ್ಧಿಗಳು ವಾಪಸ್ ಬಂದರೂ ಅಸಲಿ ಆಟ ಇನ್ನೂ ಶುರುವಿಲ್ಲ.. ಈ ಮೂರು ವಿಚಾರ ನಿಮಗೆ ಗೊತ್ತಿರಲಿ..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ